ಶಾಲೆಯಲ್ಲಿ ಚಿಣ್ಣರ ಕಲರವ ಶುರು; ನಾಳೆಯಿಂದ LKG, UKG, ಅಂಗನವಾಡಿ ಕೇಂದ್ರಗಳು ಆರಂಭ

| Updated By: ಆಯೇಷಾ ಬಾನು

Updated on: Nov 07, 2021 | 9:37 AM

ಕೊವಿಡ್ ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ LKG, UKG, ಅಂಗನವಾಡಿಗಳ ಆರಂಭಕ್ಕೆ ಮಾರ್ಗಸೂಚಿ ಹೊರಡಿಸಲಾಗಿದೆ.

ಶಾಲೆಯಲ್ಲಿ ಚಿಣ್ಣರ ಕಲರವ ಶುರು; ನಾಳೆಯಿಂದ LKG, UKG, ಅಂಗನವಾಡಿ ಕೇಂದ್ರಗಳು ಆರಂಭ
ಸಂಗ್ರಹ ಚಿತ್ರ
Follow us on

ಬೆಂಗಳೂರು: ಕೊರೊನಾ ಪ್ರಕರಣಗಳು ಇಳಿಕೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ನವೆಂಬರ್ 8ರಿಂದ(ನಾಳೆಯಿಂದ) LKG, UKG, ಅಂಗನವಾಡಿ ಆರಂಭ ಮಾಡಲು ಸರ್ಕಾರ ಮುಂದಾಗಿದೆ. ಇದಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕೊವಿಡ್ ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ LKG, UKG, ಅಂಗನವಾಡಿಗಳ ಆರಂಭಕ್ಕೆ ಮಾರ್ಗಸೂಚಿ ಹೊರಡಿಸಲಾಗಿದೆ.

LKG, UKG ಮತ್ತು ಅಂಗನವಾಡಿ ಕೇಂದ್ರಗಳಿಗೆ ಏನಿದೆ ಗೈಡ್ ಲೈನ್ಸ್
-ಶಾಲೆಗೆ ಬರುವ ಮಕ್ಕಳು ಪೋಷಕರ ಬಳಿಯಿಂದ ಒಪ್ಪಿಗೆ ಪತ್ರ ಕಡ್ಡಾಯವಾಗಿ ತರಬೇಕು.
-ಅನುಮತಿ ಪತ್ರದಲ್ಲಿ ವಿದ್ಯಾರ್ಥಿಗೆ ಕೋವಿಡ್ ಸೋಂಕು ಇಲ್ಲದೆ ಇರೋದನ್ನ ಪೋಷಕರು ಧೃಢಿಕರಿಸಬೇಕು. -ಶಿಕ್ಷಕರು ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದಿರಬೇಕು.
-ಅಂಗನವಾಡಿ ಆರಂಭದ ಬಗ್ಗೆ ಗ್ರಾಮ ಪಂಚಾಯಿತಿ ಗಮನಕ್ಕೆ ತರಬೇಕು.
-ಮೊದಲ ಹಂತದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 12 ಗಂಟೆವರೆಗೆ ಅಂದ್ರೆ ಕೇವಲ 2 ಗಂಟೆ ಮಾತ್ರ ಅಂಗನವಾಡಿ ಓಪನ್ ಮಾಡಲಾಗುತ್ತೆ.
-ಕೊವಿಡ್ ಲಕ್ಷಣ ಇರುವ ಮಕ್ಕಳಿಗೆ ಅಂಗನವಾಡಿ ಪ್ರವೇಶವಿಲ್ಲ.
-ಮಕ್ಕಳಿಗೆ ಒಂದು ದಿನ ತರಗತಿ ಒಂದು ದಿನ ರಜೆ ನೀಡಬೇಕು.
-ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು.
-ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಶಾಲೆ ಓಪನ್ ಮಾಡಬೇಕು.
-LKG, UKG ಶಾಲೆಗಳು ಬೆಳಗ್ಗೆ 9.30ರಿಂದ 3.30ರವರೆಗೆ ಓಪನ್ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಶೂನ್ಯದತ್ತ ಕೊರೊನಾ! ನವೆಂಬರ್ 8ರಿಂದ ರಾಜ್ಯದಲ್ಲಿ ಅಂಗನವಾಡಿ ಓಪನ್; ಸರ್ಕಾರದಿಂದ ಗೈಡ್‌ಲೈನ್ಸ್ ಬಿಡುಗಡೆ