Lok Sabha Elections: ರಾಮನಗರದ ಖಾಸಗಿ ಗೋದಾಮಿನಲ್ಲಿ 10000ಕ್ಕೂ ಹೆಚ್ಚು ಸೀರೆ ಜಪ್ತಿ: ಎಲ್ಲೆಲ್ಲಿ ಏನೇನು ಸಿಕ್ತು?

ಲೋಕಸಭೆ ಚುನಾವಣೆ ಘೋಷಣೆಯಾಗಿದ್ದೇ ತಡ ರಾಜ್ಯದ ಹಲವೆಡೆ ಕಂತೆ ಕಂತೆ ನಗದು ಹಾಗೂ ಮತದಾರರಿಗೆ ನೀಡಲು ತಂದಿಟ್ಟಿರುವ ಇತರ ವಸ್ತುಗಳು ಪತ್ತೆಯಾಗುತ್ತಿವೆ. ರಾಮನಗರದ ಗೋದಾಮೊಂದರಲ್ಲಿ ಬರೋಬ್ಬರಿ 10,000 ಸೀರೆಗಳನ್ನು ಪೊಲೀಸರು ಸೀಜ್ ಮಾಡಿದ್ದರೆ ಅತ್ತ ವಿಜಯಪುರದಲ್ಲಿ ಸುಮಾರು 3 ಕೋಟಿ ರೂ. ಪತ್ತೆಯಾಗಿದೆ. ಇನ್ನೂ ಎಲ್ಲೆಲ್ಲಿ ಏನೇನು ಸಿಕ್ಕಿತು ಎಂಬ ವಿವರ ಇಲ್ಲಿದೆ.

Lok Sabha Elections: ರಾಮನಗರದ ಖಾಸಗಿ ಗೋದಾಮಿನಲ್ಲಿ 10000ಕ್ಕೂ ಹೆಚ್ಚು ಸೀರೆ ಜಪ್ತಿ: ಎಲ್ಲೆಲ್ಲಿ ಏನೇನು ಸಿಕ್ತು?
ರಾಮನಗರದ ಗೋದಾಮಿನಲ್ಲಿ ಪತ್ತೆಯಾದ ಸೀರೆಗಳು
Follow us
TV9 Web
| Updated By: Ganapathi Sharma

Updated on:Mar 20, 2024 | 7:22 AM

ಬೆಂಗಳೂರು, ಮಾರ್ಚ್ 20: ಲೋಕಸಭೆ ಚುನಾವಣೆ (Lok Sabha Elections) ಚುನಾವಣೆ ಘೋಷಣೆ ಆಗಿದ್ದೇ ಆಗಿದ್ದು, ರಾಜ್ಯದಲ್ಲಿ ಅಕ್ರಮ ಹಣ ಸಾಗಾಟ ಹೆಚ್ಚಾಗಿದೆ. ಅಕ್ರಮ ಹಣ ಸಾಗಾಟ ಪತ್ತೆಗೆ ಪೊಲೀಸರು ಭರ್ಜರಿ ಕಾರ್ಯಾಚರಣೆಯನ್ನೂ ನಡೆಸುತ್ತಿದ್ದಾರೆ. ಅದರಲ್ಲೂ ಮಂಗಳವಾರ ಒಂದೇ ದಿನ ಬರೋಬ್ಬರಿ 3 ಕೋಟಿ ರೂ. ಹಣ ಸೀಜ್‌ ಮಾಡಿದ್ದಾರೆ. ಹಲವೆಡೆ, ಕಂತೆ ಕಂತೆ ನಗದು ಪತ್ತೆಯಾಗಿದ್ದರೆ, ರಾಮನಗರದಲ್ಲಿ (Ramanagara) ಗರಿ ಗರಿ ನೋಟಿನ ಜೊತೆ ರಾಶಿರಾಶಿ ಸೀರೆಗಳು ಸಿಕ್ಕಿವೆ.

ಖಾಸಗಿ ಲಾಜಿಸ್ಟಿಕ್ ಗೋದಾಮಿನಲ್ಲಿ ರಾಶಿರಾಶಿ ಸೀರೆಗಳು ಪತ್ತೆ

ಲೋಕಸಭೆ ಚುನಾವಣೆಯ ಹೊತ್ತಲ್ಲೇ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ರಾಮನಗರದ ದ್ಯಾವರಸೇಗೌಡನದೊಡ್ಡಿಯಲ್ಲಿರುವ ಖಾಸಗಿ ಗೋದಾಮಿನಲ್ಲಿ ರಾಶಿರಾಶಿ ಸೀರೆಗಳು ಪತ್ತೆಯಾಗಿವೆ. ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು ಸೀರೆಗಳು ಪತ್ತೆಯಾಗಿವೆ.

ಇನ್ನು ಮತದಾರರಿಗೆ ಹಂಚಲು ಸೀರೆಗಳನ್ನು ಸಂಗ್ರಹಿಸಿದ್ದ ಆರೋಪ ಕೇಳಿ ಬಂದಿದೆ. ಜೆಡಿಎಸ್​ ಕಾರ್ಯಕರ್ಯರು ದಾಳಿ ಮಾಡಿದ್ದು, ಕಾಂಗ್ರೆಸ್​ನವರು ಸೀರೆಗಳನ್ನು ತರಿಸಿದ್ದಾರೆಂದು ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಡಿವೈಎಸ್​ಪಿ ದಿನಕರ್ ಶೆಟ್ಟಿ ಭೇಟಿ, ಪರಿಶೀಲನೆ ನಡೆಸಿದ್ದಾರೆ.

ರಾಮನಗರದ ದ್ಯಾವರಸೇಗೌಡನದೊಡ್ಡಿಯಲ್ಲಿ ಸೀರೆಗಳು ಪತ್ತೆಯಾಗಿರುವ ಬಗ್ಗೆ ರಾಮನಗರ ಜಿಲ್ಲಾಧಿಕಾರಿ‌ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಹೇಳಿಕೆ ನೀಡಿದ್ದು, ಚುನಾವಣೆಗಾಗಿ ಸಂಗ್ರಹಿಸಿಟ್ಟಿದ್ದರಾ ಎಂಬ ಬಗ್ಗೆ ತನಿಖೆ ನಡೆಸುತ್ತೇವೆ. VRL ಗೋದಾಮಿನಲ್ಲಿ ಪತ್ತೆಯಾದ ಸೀರೆಗಳು ಯಾರಿಗೆ ಸೇರಿದ್ದು ಎಂಬುದು ಗೊತ್ತಾಗಿಲ್ಲ. ಸೀರೆಗಳ ಬಿಲ್ ಹಾಗೂ ಸೀರೆಗಳ ಪ್ರಮಾಣಕ್ಕೆ ಅದು ಹೊಂದಾಣಿಕೆ ಆಗುತ್ತಿಲ್ಲ. ಸೀರೆಗಳ ಬಗ್ಗೆ ಲೆಕ್ಕ ಮಾಡಿ ನಾವು ಕೇಸ್ ರಿಜಿಸ್ಟರ್‌ ಮಾಡುತ್ತೇವೆ ಎಂದಿದ್ದಾರೆ.

ಇನ್ನೊಂದು ವಾಹನ‌ದಲ್ಲೂ ಸೀರೆ ತುಂಬಿಕೊಂಡು ಹೋದ ಆರೋಪ ಇದೆ. ವಾಹನ ಪತ್ತೆ ಹಚ್ಚಲು ಈಗಾಗಲೇ ಫ್ಲೈಯಿಂಗ್ ಸ್ಕ್ವಾಡ್ ಕಳುಹಿಸಲಾಗಿದೆ. ಎನ್​ಎಂ ಗ್ರಾನೈಟ್​ ಕಂಪನಿ ಹೆಸರಿನಲ್ಲಿ ಗುಜರಾತ್​​ನಿಂದ ಸೀರೆ ತರಿಸಲಾಗಿದೆ. ರಾಜಕೀಯ ಪಕ್ಷ ಅಥವಾ ನಾಯಕರ ಪೋಸ್ಟರ್,‌ ಭಾವಚಿತ್ರ ಸಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.

ಮತ್ತೊಂದೆಡೆ, ಚಾಮರಾಜನಗರದ ಕೊಳ್ಳೇಗಾಲದಲ್ಲಿರುವ ಚೆಕ್​ಪೋಸ್ಟ್​ನಲ್ಲಿ 1 ಲಕ್ಷ ರೂಪಾಯಿ ಹಣ ಜಪ್ತಿ ಮಾಡಲಾಯ್ತು. ಬೆಂಗಳೂರು ಮೂಲದ ಪ್ರಮೋದ್ ಎಂಬುವರ ಕಾರಿನಲ್ಲಿ ದಾಖಲೆ ಇಲ್ಲದ ಹಣ ಪತ್ತೆಯಾಗಿದ್ದರಿಂದ ಜಪ್ತಿ ಮಾಡಲಾಗಿದೆ.

ಕಾರಿನಲ್ಲಿ ಸಾಗಿಸುತ್ತಿದ್ದ 3 ಕೋಟಿ ಹಣ ಮುಟ್ಟುಗೋಲು

ಲೋಕಸಭಾ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಎಲ್ಲಾ ಕಡೆಯೂ ಚೆಕ್‌ಪೋಸ್ಟ್ ತೆರೆಯಲಾಗಿದ್ದು, ಪೊಲೀಸರು ಪ್ರತೀ ವಾಹನಗಳನ್ನೂ ಪರಿಶೀಲನೆ ಮಾಡುತ್ತಿದ್ದಾರೆ. ಅದರಂತೆ ವಿಜಯಪುರ ನಗರದ ಸಿಂದಗಿ ಬೈಪಾಸ್ ಬಳಿ ಪೊಲೀಸರು ತಪಾಸಣೆ ನಡೆಸ್ತಿದ್ದ ವೇಳೆ, ಇನೊವಾ ಕಾರಿನಲ್ಲಿ 2 ಕೋಟಿ 93 ಲಕ್ಷ ರೂಪಾಯಿ ಸಿಕ್ಕಿದೆ. ದಾಖಲೆ ಇಲ್ಲದೆ ಹೈದರಾಬಾದ್​ನಿಂದ ಹುಬ್ಬಳ್ಳಿಗೆ ಸಾಗಿಸುತ್ತಿದ್ದ ಹಣವನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಹಣ ಸಾಗಿಸುತ್ತಿದ್ದ ಸಾಂಗ್ಲಿ ಮೂಲದ ಬಾಲಾಜಿ ನಿಕ್ಕಂ, ಸಚಿನ್‌ರನ್ನ ವಶಕ್ಕೆ ಪಡೆದಿದ್ದಾರೆ.

ದಾಖಲೆ ಇಲ್ಲದ 34 ಲಕ್ಷ ಹಣ ವಶಕ್ಕೆ

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕೆಡೆಬಾಗಿಲು ಬಳಿಯ ಚೆಕ್ ಪೋಸ್ಟ್‌ನಲ್ಲಿ ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ 34 ಲಕ್ಷ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಪೀರ್‌ಸಾಬ್‌ eಂಬವರು ಈ ಹಣ ಸಾಗಾಟ ಮಾಡುತ್ತಿದ್ದರು. ಹಣಕ್ಕೆ ಯಾವುದೆ ದಾಖಲೆ ಇರಲಿಲ್ಲ. ಹೀಗಾಗಿ ಪೊಲೀಸರು ಹಣವನ್ನ ವಶಕ್ಕೆ ಪಡೆದಿದ್ದಾರೆ.

ಇನ್ನು ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮುಖಂಡ ಉಮೇಶ್ ಶೆಟ್ಟಿ ಭಾರತ್ ಅಕ್ಕಿ ವಿತರಣೆ ಮಾಡ್ತಿದ್ದರು. ಮಾಹಿತಿ ಮೇರೆಗೆ ದಾಳಿ ನಡೆಸಿದ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್, 10 ಕೆಜಿಯ ಬರೋಬ್ಬರಿ 940 ಅಕ್ಕಿ ಚೀಲ ವಶಕ್ಕೆಪಡೆದಿದೆ.

ಇದನ್ನೂ ಓದಿ: ರಾಜ್ಯಾದ್ಯಂತ ಎಲ್ಲ ಪೊಲೀಸ್​ ಸಿಬ್ಬಂದಿಗೆ ಹೆಲ್ಮೆಟ್ ಕಡ್ಡಾಯ: ಅಲೋಕ್ ಕುಮಾರ್ ಆದೇಶ

ಚುನಾವಣೆ ಘೋಷಣೆಯಾಗಿ ಎರಡು ದಿನವಾಗಿದೆ ಅಷ್ಟೇ. ಅಖಾಡ ರೆಡಿಯಾಗಿದ್ದೇ ತಡ ನಿತ್ಯವೂ ಕೋಟಿ ಕೋಟಿ ಹಣ ಸೀಜ್‌ ಆಗ್ತಿದೆ. ಹಣದ ಹೊಳೆ ಹರಿಸೋರಿಗೆ ಪೊಲೀಸರು ಶಾಕ್‌ ಕೊಡುತ್ತಿದ್ದಾರೆ.

(ವರದಿ: ವಿಜಯಪುರದಿಂದ ಅಶೋಕ್‌, ಕೊಪ್ಪಳದಿಂದ ಸಂಜಯ್ಯಾ ಚಿಕ್ಕಮಠ, ಬೆಳಗಾವಿಯಿಂದ ಸಹದೇವ್‌ ಮಾನೆ)

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:11 am, Wed, 20 March 24

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ