ಬಿಜೆಪಿ ನಾಯಕರಿಗೆ ತಟ್ಟಿದ ಉತ್ತರ ಕರ್ನಾಟಕದ ಬಿಸಿಲಿನ ಝಳ: 1 ಗಂಟೆ ಮತದಾನದ ಅವಧಿ ವಿಸ್ತರಣೆಗೆ ಮನವಿ

| Updated By: ಗಂಗಾಧರ​ ಬ. ಸಾಬೋಜಿ

Updated on: May 03, 2024 | 6:49 PM

ಮೇ 7ರಂದು ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳಲ್ಲಿ 2ನೇ ಹಂತದಲ್ಲಿ ಮತದಾನ ನಡೆಯಲಿದೆ. ಆದರೆ ನಿತ್ಯ ಎಸಿ ಕಾರುಗಳಲ್ಲಿ ಓಡಾಡುವ ರಾಜಕೀಯ ನಾಯಕರಿಗೆ ಇದೀಗ ಬಿಸಿಲಿನ ಝಳ ತಟ್ಟಿದೆ. ಹೀಗಾಗಿ ಸಂಜೆ 1 ಗಂಟೆ ಕಾಲ ಮತದಾನದ ಅವಧಿ ವಿಸ್ತರಿಸುವಂತೆ ಚುನಾವಣಾ ಆಯೋಗಕ್ಕೆ ರಾಜ್ಯ ಬಿಜೆಪಿ ನಿಯೋಗದಿಂದ ಮನವಿ ಮಾಡಲಾಗಿದೆ.

ಬಿಜೆಪಿ ನಾಯಕರಿಗೆ ತಟ್ಟಿದ ಉತ್ತರ ಕರ್ನಾಟಕದ ಬಿಸಿಲಿನ ಝಳ: 1 ಗಂಟೆ ಮತದಾನದ ಅವಧಿ ವಿಸ್ತರಣೆಗೆ ಮನವಿ
ಬಿಜೆಪಿ ನಾಯಕರಿಗೆ ತಟ್ಟಿದ ಉತ್ತರ ಕರ್ನಾಟಕದ ಬಿಸಿಲಿನ ಝಳ, 1 ಗಂಟೆ ಮತದಾನದ ಅವಧಿ ವಿಸ್ತರಣೆಗೆ ಮನವಿ
Follow us on

ಬೆಂಗಳೂರು, ಮೇ 03: ಲೋಕಸಭಾ ಚುನಾವಣೆ (Lok Sabha Elections) ಹಿನ್ನಲೆ ರಾಜ್ಯದಲ್ಲಿ ಈಗಾಗಲೇ ಮೊದಲನೇ ಹಂತದಲ್ಲಿ ಮತದಾನ ಮಾಡಲಾಗಿದೆ. ಮೇ 7ರಂದು ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳಲ್ಲಿ 2ನೇ ಹಂತದಲ್ಲಿ ಮತದಾನ ನಡೆಯಲಿದೆ. ಆದರೆ ನಿತ್ಯ ಎಸಿ ಕಾರುಗಳಲ್ಲಿ ಓಡಾಡುವ ರಾಜಕೀಯ ನಾಯಕರಿಗೆ ಇದೀಗ ಬಿಸಿಲಿನ ಝಳ ತಟ್ಟಿದೆ. ಹೀಗಾಗಿ ಮತದಾನದ ಅವಧಿ ವಿಸ್ತರಣೆಗೆ ಮುಂದಾಗಿದ್ದಾರೆ. ಸಂಜೆ 1 ಗಂಟೆ ಕಾಲ ಮತದಾನದ ಅವಧಿ ವಿಸ್ತರಿಸುವಂತೆ ಚುನಾವಣಾ ಆಯೋಗಕ್ಕೆ ರಾಜ್ಯ ಬಿಜೆಪಿ (BJP) ನಿಯೋಗದಿಂದ ಮನವಿ ಮಾಡಲಾಗಿದೆ.

ಬಿಜೆಪಿ ಮನವಿ 

ಮೇ 7ರಂದು ಕರ್ನಾಟಕದಲ್ಲಿ 2 ನೇ ಹಂತದ ಮತದಾನವು ನಡೆಯಲಿದೆ. ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳನ್ನು ಒಳಗೊಂಡಿವೆ. ಮತದಾರರ ಸಂಖ್ಯೆ ಕೂಡ ಹೆಚ್ಚಿದೆ. ಇಡೀ ರಾಜ್ಯವು ಬಿಸಿಲಿನ ತಾಪದಿಂದ  ತತ್ತರಿಸುತ್ತಿದೆ ಮತ್ತು ಜನರು ಬಿಸಿಲಿನ ತಾಪಮಾನವನ್ನು ತಡೆದುಕೊಳ್ಳದೇ ನಲುಗುತ್ತಿದ್ದಾರೆ. ಹೀಗಾಗಿ 10.00 ರಿಂದ 5.00 ಗಂಟೆಗಳ ನಡುವೆ ಹೊರಗೆ ಬಂದು ಮತದಾನ ಮಾಡುವುದು ಕಷ್ಟಕರವಾಗಿದೆ.

ಇದನ್ನೂ ಓದಿ: ಬಾಗಲಕೋಟೆ ಲೋಕಸಭೆ ಚುನಾವಣೆ: ಕಾಂಗ್ರೆಸ್-ಬಿಜೆಪಿಯ ಪ್ಲಸ್, ಮೈನಸ್ ಏನು?

ಸಂಸದೀಯ ಕ್ಷೇತ್ರಗಳು 1 ರಿಂದ 14 ರವರೆಗಿನ ಆ ಭಾಗಗಳಲ್ಲಿನ ಸರಾಸರಿ ಬಿಸಿಲಿನ ತಾಪವು 37-42 ಡಿಗ್ರಿ ಫ್ಯಾರನ್‌ಹೀಟ್ ನಡುವೆ ಇರುತ್ತದೆ. ಬಿಸಿಲಿನ ತಾಪವು ಆತಂಕಕಾರಿ ಮಟ್ಟದಲ್ಲಿ ಹೆಚ್ಚಳವಾಗುತ್ತಿದೆ. ಮತದಾರರು ಹೊರಬರಲು ಮತ್ತು ಮತ ಚಲಾಯಿಸಲು ಕಷ್ಟವಾಗುತ್ತದೆ. ಅದರಲ್ಲೂ ಸಹ 40 ಡಿಗ್ರಿ ಫ್ಯಾರನ್‌ಹೀಟ್‌ಗಿಂತ ಹೆಚ್ಚಿನ ಏರಿಕೆ ನಿರೀಕ್ಷಿಸಲಾಗಿದೆ.

40ಕ್ಕೂ ಹೆಚ್ಚಿನ ವಯಸ್ಸಿನ ನಡುವಿನ ಮತದಾರರ ಸಂಖ್ಯೆಯು ತುಂಬಾ ಹೆಚ್ಚಾಗಿದ್ದಾರೆ. ಅವರು ಬಿಸಿಲಿನ ತಾಪಮಾನಕ್ಕೆ ಗುರಿಯಾಗುತ್ತಾರೆ ಎಂಬುದನ್ನು ಸಹ ಗಮನಿಸಬೇಕು. ಹೀಗಾಗಿ ಇದನ್ನು ತಪ್ಪಿಸಲು ಮತ್ತು ಮತದಾನದ ಉತ್ತಮ ಮನೋಭಾವವನ್ನು ಉಳಿಸಿಕೊಳ್ಳಲು, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಬಿಜೆಪಿ ಮನವಿ ಮಾಡಿದೆ.

ಪ್ರಚಾರದ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಂದ ಬೆದರಿಕೆ ಆರೋಪ: ಬಿಜೆಪಿ ದೂರು

ಯಾದಗಿರಿ: ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಂದ ಬೆದರಿಕೆ ಆರೋಪ ಹಿನ್ನೆಲೆ ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ನಿಯೋಗ ದೂರು ಸಲ್ಲಿಸಿದೆ.

ಇದನ್ನೂ ಓದಿ: ಮುಂದಿನ ಪ್ರಧಾನಿ ಎಂದು ಸಿದ್ದರಾಮಯ್ಯ ಹೇಳುವ ರಾಹುಲ್ ಗಾಂಧಿ ಆಧಾರರಹಿತ ಆರೋಪ ಮಾಡುತ್ತಾರೆ: ಕುಮಾರಸ್ವಾಮಿ

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ನೇತೃತ್ವದಲ್ಲಿ ದೂರು ನೀಡಲಾಗಿದ್ದು, ಪ್ರಚಾರ ಮುಗಿಸಿ ವಾಪಸಾಗುತ್ತಿದ್ದ ವೇಳೆ ದಾಳಿ ನಡೆಸಿ ಹಲ್ಲೆ ಆರೋಪ ಮಾಡಲಾಗಿದೆ. ಕೋಡೆಕಲ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ನಡೆಸಿದ್ದಾರೆಂದು ದೂರು ಸಲ್ಲಿಕೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.