ಆದಾಯ ಮೀರಿ ಆಸ್ತಿ ಗಳಿಕೆ: 25ಕ್ಕೂ ಹೆಚ್ಚು ಕಡೆ ಲೋಕಾ ದಾಳಿ, ಚಿನ್ನದ ರಾಶಿ ಪತ್ತೆ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 21, 2024 | 8:04 PM

ಇಂದು(ನವೆಂಬರ್ 21) ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಬೇಟೆ ನಡೆಸಿದ್ದಾರೆ..ಆದಾಯಕ್ಕೂ ಮೀರಿದ ಅಸಮತೋಲನ ಆಸ್ತಿ ಗಳಿಕೆ ಕಂಡು ಬಂದ ಹಿನ್ನಲೆ ಕರ್ನಾಟಕದ ಹಲವೆಡೆ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿ ಮನೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಇನ್ನು ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ,ಬೆಳ್ಳಿ ಸಾಮಾಗ್ರಿ ಹಾಗೂ ನಗದು ಹಣ ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗಾದ್ರೆ ಯಾವ್ಯಾವ ಅಧಿಕಾರಿಗಳ ಮನೆಯಲ್ಲಿ ಎಷ್ಟು ಏನೆಲ್ಲಾ ಸಿಕ್ಕಿದೆ ಎನ್ನುವ ವಿವರ ಇಲ್ಲಿದೆ.

ಆದಾಯ ಮೀರಿ ಆಸ್ತಿ ಗಳಿಕೆ: 25ಕ್ಕೂ ಹೆಚ್ಚು ಕಡೆ ಲೋಕಾ ದಾಳಿ, ಚಿನ್ನದ ರಾಶಿ ಪತ್ತೆ
ಆದಾಯ ಮೀರಿ ಆಸ್ತಿ ಗಳಿಕೆ: 25ಕ್ಕೂ ಹೆಚ್ಚು ಕಡೆ ಲೋಕಾ ದಾಳಿ, ಚಿನ್ನದ ರಾಶಿ ಪತ್ತೆ
Follow us on

ಬೆಂಗಳೂರು, ನವೆಂಬರ್​ 21: ಆದಾಯ ಮೀರಿ ಆಸ್ತಿ ಗಳಿಸಿದ್ದ ಅಧಿಕಾರಿಗಳಿಗೆ ಇವತ್ತು ಲೋಕಾ ಅಧಿಕಾರಿಗಳು (Lokayukta Raid) ಚುರುಕು ಮುಟ್ಟಿಸಿದ್ದಾರೆ. ಲೋಕಾಯುಕ್ತದಿಂದ 4 ಅಧಿಕಾರಿಗಳಿಗೆ ಸೇರಿದ 22 ಕಡೆ ದಾಳಿ ಮಾಡಲಾಗಿದ್ದು, ಈ ವೇಳೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಹಣ ಪತ್ತೆ ಆಗಿದೆ. ಬೆಂಗಳೂರು, ಮಂಡ್ಯ, ದಾವಣಗೆರೆ, ಮಂಗಳೂರು, ಚಿಕ್ಕಬಳ್ಳಾಪುರ, ಮೈಸೂರು, ಮೈಸೂರು, ಚಿಕ್ಕಬಳ್ಳಾಪುರ ಸೇರಿ 25ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿ, ಅಧಿಕಾರಿಗಳ ಮನೆಯಲ್ಲಿ ತಲಾಶ್ ಮಾಡಿದ್ದಾರೆ. ಯಾವ ಯಾವ ಅಧಿಕಾರಿಗಳ ಬಳಿ ಎಷ್ಟು ಮತ್ತು ಏನೆಲ್ಲಾ ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ.

1) ತಿಪ್ಪೇಸ್ವಾಮಿ ಎನ್. ಕೆ. ನಿರ್ದೇಶಕರು, ನಗರ ಯೋಜನೆ, ಬೆಂಗಳೂರು

  • ಇವರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧ
  • 1 ನಿವೇಶನ, 2 ವಾಸದ ಮನೆಗಳು
  • 7-5 ಎಕರೆ ಕೃಷಿ ಜಮೀನು
  • ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 2.50 ಕೋಟಿ ರೂ.

ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ

  • ರೂ. 8.00,000 ನಗದು
  • ರೂ. 58,73.632 ಬೆಲೆ ಬಾಳುವ ಚಿನ್ನಾಭರಣಗಳು
  • ರೂ 29.10,000 ಬೆಲೆ ಬಾಳುವ ವಾಹನಗಳು
  • ರೂ. 15,000‌ ಬೆಲೆಬಾಳುವ ಇತರೆ ವಸ್ತುಗಳು
  • ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 87,98,632
  • ಒಟ್ಟಾರೆ ಸ್ಥಿರಾಸ್ತಿ ಮತ್ತು ಚರಾಸ್ತಿ ಮೌಲ್ಯ 3,38,86,632 ರೂ.

2) ಮೋಹನ್. ಕೆ. ಅಬಕಾರಿ ಅಧೀಕ್ಷಕರು, ಅಬಕಾರಿ ಜಂಟಿ ಆಯುಕ್ತರ ಕಛೇರಿ, ಬೆಂಗಳೂರು ದಕ್ಷಿಣ, ಬೆಂಗಳೂರು

  • 5 ಸ್ಥಳಗಳಲ್ಲಿ ಶೋಧ
  • 3 ನಿವೇಶನಗಳು, 2 ವಾಸದ ಮನೆಗಳು, 2-25 ಎಕರೆ ಕೃಷಿ ಜಮೀನು
  • ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 3,22,08,000

ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ

  • ರೂ. 1,17,898 ನಗದು
  • ರೂ. 44,58,200 ಚಿನ್ನಾಭರಣ
  • 35,00,000 ಮೌಲ್ಯದ ವಾಹನಗಳು
  • 35,00,000 ಬ್ಯಾಂಕ್ ಎಫ್​ಡಿ
  • ಎಲ್ಲಾ ಸೇರಿ ಒಟ್ಟು ಮೌಲ್ಯ 1, 15,76,098 ರೂ.
  • ಸ್ಥಿರ  ಮತ್ತು ಚರಾಸ್ಥಿ ಸೇರಿ ಒಟ್ಟು ಮೌಲ್ಯ 4,37,84,098 ರೂ.

3) ಕೃಷ್ಣವೇಣಿ ಎಂ. ಸಿ. ಹಿರಿಯ ಭೂ ವಿಜ್ಞಾನಿ, ಮಂಗಳೂರು

  • 5 ಸ್ಥಳಗಳಲ್ಲಿ ಶೋಧ
  • 3 ನಿವೇಶನಗಳು, ಬೆಂಗಳೂರಿನ ಯಲಹಂಕದಲ್ಲಿ 1 ಫ್ಲಾಟ್ಸ್ನಿ
  • ರ್ಮಾಣ ಹಂತದಲ್ಲಿರುವ ವಾಣಿಜ್ಯ ಸಂಕೀರ್ಣ
  • 26 ಎಕರೆ ಕೃಷಿ ಜಮೀನು (ಕಾಫಿ ಪ್ಲಾಂಟೇಷನ್)
  • ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 10,41,38,286

ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ

  • 56,450 ನಗದು ರೂ.
  • 66,71,445 ರೂ. ಬೆಲೆ ಬಾಳುವ ಚಿನ್ನಾಭರಣಗಳು
  • 60,00,000 ರೂ. ಬೆಲೆಬಾಳುವ ವಾಹನಗಳು
  •  24,40,000 ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು
  • ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 1,51,67,895
  • ಸ್ಥಿರಾಸ್ತಿ ಹಾಗೂ ಚರಾಸ್ಥಿ ಸೇರಿ ಒಟ್ಟು 11.93.06.181ರೂ

4) ಕಾವೇರಿ ನೀರಾವರಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಮಹೇಶ್ 

  • 7 ಸ್ಥಳಗಳಲ್ಲಿ ದಾಳಿ.
  • ಚರಾಸ್ತಿ ಹಾಗೂ ಸಿರಾಸ್ತಿ ಸೇರಿ ಒಟ್ಟು 6 ಕೋಟಿ 89 ಲಕ್ಷ 21 ಸಾವಿರದ 240 ರೂ. ಆಸ್ತಿ ಪತ್ತೆ
  • ಮಹೇಶ್ ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ 4 ಕೋಟಿ 76 ಲಕ್ಷದ 33 ಸಾವಿರದ 956 ರೂ
  • 25 ನಿವೇಶನ, 1 ವಾಸದ ಮನೆ, 25 ಎಕರೆ ಕೃಷಿ ಜಮೀನು
  • ಒಟ್ಟು ಸೇರಿ ಮೌಲ್ಯ 4 ಕೋಟಿ 76 ಲಕ್ಷದ 33 ಸಾವಿರದ 956 ರೂ
  • ಮಹೇಶ್ ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ 2,12,87,284 ರೂ
  • 1,82,284 ನಗದು
  • 15,00,000 ಬೆಲೆ ಬಾಳುವ ಚಿನ್ನಾಭರಣ
  • 25,00,000 ಬೆಲೆಬಾಳುವ ವಾಹನ
  • 1,71,05,000 ಬೆಲೆಬಾಳುವ ಇತರೆ ವಸ್ತುಗಳು
  • ಎಲ್ಲಾ ಸೇರಿ ಒಟ್ಟು ಮೌಲ್ಯ 2,12,87,284 ರೂ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.