ಉಡುಪಿಯಲ್ಲಿ ಕ್ರಿಕೆಟ್ ಪಂದ್ಯಾಟ: ಫಂಡ್ ರೈಸ್ ಮಾಡಲು ವಿಶಿಷ್ಟ ರೀತಿಯ ಲಕ್ಕಿಡಿಪ್

ಕ್ರಿಕೆಟ್ ಪಂದ್ಯಾವಳಿಗೆ ಫಂಡ್ ರೈಸ್ ಮಾಡಲು ಇಟ್ಟಿರುವ ಲಕ್ಕಿಡಿಪ್​ನ ಒಂದು ಚೀಟಿ ಖರೀದಿಗೆ 15 ರೂಪಾಯಿ ಮಾತ್ರ. ಇನ್ನು ಈ ಲಕ್ಕಿಡಿಪ್​ನ ಚೀಟಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಉಡುಪಿ ಜಿಲ್ಲೆಯ ಫ್ರೆಂಡ್ಸ್ ಎಂಜಿಎಂ ತಂಡದಿಂದ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ.

ಉಡುಪಿಯಲ್ಲಿ ಕ್ರಿಕೆಟ್ ಪಂದ್ಯಾಟ: ಫಂಡ್ ರೈಸ್ ಮಾಡಲು ವಿಶಿಷ್ಟ ರೀತಿಯ ಲಕ್ಕಿಡಿಪ್
ಸಾಂದರ್ಬಿಕ ಚಿತ್ರ
Updated By: guruganesh bhat

Updated on: Mar 21, 2021 | 1:45 PM

ಉಡುಪಿ: ಏಪ್ರಿಲ್ 4ರಂದು ಉಡುಪಿ ಜಿಲ್ಲೆಯಲ್ಲಿ ವಿಶಿಷ್ಟ ಮಾದರಿಯ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ.ಈ ಕ್ರಿಕೆಟ್ ಪಂದ್ಯಾವಳಿಗೆ ಫಂಡ್ ರೈಸ್ ಮಾಡಲು ಲಕ್ಕಿಡಿಪ್ ಇಡಲಾಗಿದ್ದು, ಲಕ್ಕಿಡಿಪ್​ ಗೆದ್ದವರಿಗೆ ಮೊದಲ ಬಹುಮಾನ 10 ಲೀಟರ್ ಪೆಟ್ರೋಲ್, ಲಕ್ಕಿಡಿಪ್​ನ ದ್ವಿತೀಯ ಬಹುಮಾನ 5 ಲೀಟರ್ ಡೀಸೆಲ್ ಹಾಗೂ ತೃತೀಯ ಬಹುಮಾನವನ್ನಾಗಿ ವಾಹನಕ್ಕೆ ಬಳಸುವ 3 ಲೀಟರ್ ಗ್ಯಾಸ್ ನೀಡಲಾಗುತ್ತಿದೆ.

ಕ್ರಿಕೆಟ್ ಪಂದ್ಯಾವಳಿಗೆ ಫಂಡ್ ರೈಸ್ ಮಾಡಲು ಇಟ್ಟಿರುವ ಲಕ್ಕಿಡಿಪ್​ನ ಒಂದು ಚೀಟಿ ಖರೀದಿಗೆ 15 ರೂಪಾಯಿ ಮಾತ್ರ. ಇನ್ನು ಈ ಲಕ್ಕಿಡಿಪ್​ನ ಚೀಟಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಉಡುಪಿ ಜಿಲ್ಲೆಯ ಫ್ರೆಂಡ್ಸ್ ಎಂಜಿಎಂ ತಂಡದಿಂದ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ.

ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್​ನ ಬೆಲೆ ಏರಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಲಕ್ಕಿಡಿಪ್ ಚೀಟಿಯ ಬಹುಮಾನವಾಗಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಇಡಲಾಗಿದೆ. ಅಂದರೆ ಇತ್ತೀಚಿನ ಬೆಳವಣಿಗೆಗಳಿಗೆ ನಿದರ್ಶನ ಎನ್ನುವಂತೆ ಅಮೂಲ್ಯ ಬಹುಮಾನಗಳ ಸಾಲಿಗೆ ಪೆಟ್ರೋಲ್ ಹಾಗೂ ಡೀಸೆಲ್ ಕೂಡ ಸೇರಿಕೊಂಡಿದೆ.

ಎಪ್ರಿಲ್ 4 ರಂದು ಕ್ರಿಕೆಟ್ ಪಂದ್ಯಾವಳಿ

ಕ್ರಿಕೆಟ್ ಪಂದ್ಯಾವಳಿಯ ಲಕ್ಕಿಡಿಪ್ ಚೀಟಿ

ಇದನ್ನೂ ಓದಿ:

Sachin Tendulkar: ಕ್ರಿಕೆಟ್ ದೇವರು ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿ ಇಂದಿಗೆ 9 ವರ್ಷ.. ಸಚಿನ್ ಕೊನೆಯ ಪಂದ್ಯದ ವಿಶೇಷತೆ ಗೊತ್ತಾ?

India vs England: ರೋಹಿತ್​ ಇಲ್ಲದ ಕ್ರಿಕೆಟ್​ ಪಂದ್ಯವನ್ನು ವೀಕ್ಷಿಸುವುದಕ್ಕಿಂತ ಟಿವಿ ಆಫ್​ ಮಾಡುವುದೇ ಒಳಿತು: ವಿರೇಂದ್ರ ಸೆಹ್ವಾಗ್