ಅಬ್ಬಬ್ಬಾ…ಬೆಂಗಳೂರು ಟು ಪ್ರಯಾಗ್‌ರಾಜ್‌ ಫ್ಲೈಟ್​​ ಟಿಕೆಟ್ ದರ ನೋಡಿದ್ರೆ ತಲೆ ಗಿರ್ ಅನ್ನುತ್ತೆ

| Updated By: ರಮೇಶ್ ಬಿ. ಜವಳಗೇರಾ

Updated on: Jan 28, 2025 | 9:19 PM

144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳ (Maha Kumbh 2025) ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಕುಂಭಮೇಳವನ್ನ ಕಣ್ತುಂಬಿಕೊಳ್ಳಲು ದೇಶದ ಮೂಲೆ ಮೂಲೆಗಳಿಂದ ಕೋಟ್ಯಂತರ ಸಂಖ್ಯೆಯಲ್ಲಿ ಭಕ್ತರು ಪ್ರಯಾಗ್‌ರಾಜ್‌ಗೆ (Prayagraj) ಭೇಟಿ ನೀಡುತ್ತಿದ್ದಾರೆ. ಇನ್ನು ಕರ್ನಾಟಕದಿಂದ ತೆರಳುವ ಎಲ್ಲಾ ಫ್ಲೈಟ್​​ ಟಿಕೆಟ್​ ಸೋಲ್ಡೌಟ್ ಆಗಿವೆ.

ಅಬ್ಬಬ್ಬಾ...ಬೆಂಗಳೂರು ಟು ಪ್ರಯಾಗ್‌ರಾಜ್‌ ಫ್ಲೈಟ್​​ ಟಿಕೆಟ್ ದರ ನೋಡಿದ್ರೆ ತಲೆ ಗಿರ್ ಅನ್ನುತ್ತೆ
Mahakumbh Mela
Follow us on

ಬೆಂಗಳೂರು, (ಜನವರಿ 28): ಉತ್ತರ ಪ್ರದೇಶದ ಪ್ರಯಾಗ್​ರಾಜ್​​ನಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳಕ್ಕೆ ಸಹಸ್ರಾರು ಜನರು ಹರಿಬರುತ್ತಿದ್ದಾರೆ. ಅದರಂತೆ ಕರ್ನಾಟಕದಿಂದಲೂ ಸಹ ಜನರು ಮಹಾಕುಂಭಮೇಳ ಕಣ್ತುಂಬಿಕೊಳ್ಳಲು ಪ್ರಯಾಗ್​ರಾಜ್​ನತ್ತ ಹೊರಟ್ಟಿದ್ದಾರೆ. ಕೆಲವರು ಈಗಾಗಲೇ ವಿಮಾನದ ಟಿಕೆಟ್​ ಬುಕ್ ಮಾಡಿಕೊಂಡಿದ್ದರೆ, ಇನ್ನು ಕೆಲವರು ಫ್ಲೈಟ್ ಟಿಕೆಟ್​ ಸಿಗದೇ ಒದ್ದಾಡುತ್ತಿದ್ದಾರೆ. ಹೌದು…ಕರ್ನಾಟಕದಿಂದ ಪ್ರಯಾಗ್​ರಾಜ್​​ಗೆ ತೆರಳುವ ಎಲ್ಲಾ ಫ್ಲೈಟ್​ಗಳ ಟಿಕೆಟ್ ಸೋಲ್ಡೌಟ್ ಆಗಿವೆ. ಪ್ರತಿದಿನ ಬೆಂಗಳೂರಿನಿಂದ ಪ್ರಯಾಗ್​ರಾಜ್​ಗೆ 3 ವಿಮಾನಗಳು ಹೊರಡಲಿದ್ದು, ಪೆಬ್ರವರಿ 26ರವರೆಗೂ ಟಿಕೆಟ್​​ ಬುಕ್​​ ಆಗಿವೆ.

144 ವರ್ಷಗಳಿಗೊಮ್ಮೆ ನಡೆಯುತ್ತಿರುವುದರಿಂದ ನಮ್ಮ ಕಾಲದಲ್ಲೇ ನಡೆಯುತ್ತಿರುವುದು ಪುಣ್ಯ ಎಂದು ಜನರು ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲವೆಂದು ಮಹಾಕುಂಭಮೇಳಕ್ಕೆ ತೆರಳುತ್ತಿದ್ದಾರೆ. ಆದ್ರೆ, ಹಣ ಕೊಟ್ಟರು ಫ್ಲೈಟ್ ಟಿಕೆಟ್​ ಸಿಗುತ್ತಿಲ್ಲ. ಇತಂಹ ಮಹಾಪುಣ್ಯದ ದಿನ ಹೇಗಾದರೂ ಮಾಡಿ ಕುಂಭಮೇಳದ ಮಹಾ ಸ್ನಾನ ಮಾಡಬೇಕು ಅಂತಿದ್ದವರಿಗೆ ಫೈಟ್‌ಗಳು ಹೌಸ್ ಪುಲ್ ಆಗಿರುವುದು ಬೇಸರ ತಂದಿದೆ.

ಇದನ್ನೂ ಓದಿ: ಮಹಾಕುಂಭಮೇಳಕ್ಕೆ ತೆರಳಿದ್ದ ಕನ್ನಡಿಗರಿಗೆ ಶಾಕ್: ಪ್ರಯಾಗ್​ರಾಜ್​ನಲ್ಲಿ ಊಟ, ನೀರಿಲ್ಲದೇ ಪರದಾಟ

ವಿಮಾನ ಟಿಕೆಟ್‌ ದರ ಹೇಗಿದೆ?

ಇಂಡಿಗೋದ ಒಂದು, ಸ್ಪೈಸ್ ಜೆಟ್​ನ ಎರಡು ವಿಮಾನಗಳು ಪ್ರತಿದಿನ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಪ್ರಯಾಗ್​ರಾಜ್​ ತೆರಳುತ್ತವೆ. ಇದೀಗ ಪ್ರಯಾಗ್​ರಾಜ್​ಗೆ ತೆರಳಲು ಒಬ್ಬರಿಗೆ ಫ್ಲೈಟ್​ ಟಿಕೆಟ್ ದರ 22 ಸಾವಿರದಿಂದ 30 ಸಾವಿರ ರೂಪಾಯಿ. ಆದ್ರೆ, ಪೆಬ್ರವರಿ 26 ರವರೆಗೂ ಪ್ರಯಾಗ್ ರಾಜ್ ಗೆ ತೆರಳುವ ವಿಮಾನಗಳು ಪುಲ್ ಆಗಿವೆ. ಪ್ರಯಾಗ್ ರಾಜ್ ಹೊರತುಪಡಿಸಿದ್ರೆ, ವಾರಣಾಸಿಗೂ ತೆರಳಿ ಅಲ್ಲಿಂದ ಪ್ರಯಾಗ್ ರಾಜ್ ಗೆ ತೆರಳಬಹುದು. ಕೆಂಪೇಗೌಡ ಏರ್ಪೊಟ್ ನಿಂದ ವಾರಣಾಸಿಗೆ ಪ್ರತಿದಿನ 15 ವಿಮಾನಗಳ ತೆರಳುತ್ತಿದ್ದು, ವಾರಣಾಸಿಗೆ ಸದ್ಯ ಬೆಂಗಳೂರಿನಿಂದ 20 ರಿಂದ 28 ಸಾವಿರ ರೂ. ಟಿಕೆಟ್​ ದರ ಇದೆ.

ಕೆಂಪೇಗೌಡ ಏರ್ಪೊಟ್ ನಿಂದ ಲಕ್ನೋಗೂ ಪ್ರತಿದಿನ 22 ವಿಮಾನಗಳ ಹಾರಾಟ ಮಾಡುತ್ತಿದ್ದು, 16 ಸಾವಿರದಿಂದ 22 ಸಾವಿರವರೆಗೂ . ಟಿಕೆಟ್ ದರ ಇದೆ. ಇನ್ನು ಕೆಂಪೇಗೌಡ ಏರ್ಪೊಟ್ ನಿಂದ ಅಯೋಧ್ಯೆಗೂ ಸಹ ಪ್ರತಿದಿನ ಐದು ವಿಮಾನಗಳ ತೆರಳುತ್ತಿದ್ದು, ಟಿಕೆಟ್ ದರ ಸದ್ಯ 16 ಸಾವಿರದಿಂದ 30 ಸಾವಿರ ರೂ. ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.