AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾಕುಂಭಮೇಳಕ್ಕೆ ತೆರಳಿದ್ದ ಕನ್ನಡಿಗರಿಗೆ ಶಾಕ್: ಪ್ರಯಾಗ್​ರಾಜ್​ನಲ್ಲಿ ಊಟ, ನೀರಿಲ್ಲದೇ ಪರದಾಟ

ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ತೆರಳಿದ ನೂರಾರು ಕನ್ನಡಿಗರು ತಾಂತ್ರಿಕ ದೋಷದಿಂದ ಸ್ಪೈಸ್‌ಜೆಟ್ ವಿಮಾನದ ವಿಳಂಬದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಧ್ಯಾಹ್ನ 2:10ಕ್ಕೆ ಹೊರಡಬೇಕಿದ್ದ ವಿಮಾನ ಸಂಜೆಯಾದರೂ ಹೊರಡದೆ, ಪ್ರಯಾಣಿಕರು ಗಂಟೆಗಟ್ಟಲೆ ವಿಮಾನ ನಿಲ್ದಾಣದಲ್ಲಿ ಅನ್ನ ನೀರಿಲ್ಲದೆ ಕಾಯುವಂತಾಗಿದೆ. ಸ್ಪೈಸ್‌ಜೆಟ್ ವಿರುದ್ಧ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾಕುಂಭಮೇಳಕ್ಕೆ ತೆರಳಿದ್ದ ಕನ್ನಡಿಗರಿಗೆ ಶಾಕ್: ಪ್ರಯಾಗ್​ರಾಜ್​ನಲ್ಲಿ ಊಟ, ನೀರಿಲ್ಲದೇ ಪರದಾಟ
ಮಹಾಕುಂಭಮೇಳಕ್ಕೆ ತೆರಳಿದ್ದ ಕನ್ನಡಿಗರಿಗೆ ಶಾಕ್: ಪ್ರಯಾಗ್​ರಾಜ್​ನಲ್ಲಿ ಊಟ, ನೀರು ಇಲ್ಲದೇ ಪರದಾಟ
ನವೀನ್ ಕುಮಾರ್ ಟಿ.
| Edited By: |

Updated on: Jan 28, 2025 | 8:53 PM

Share

ದೇವನಹಳ್ಳಿ, ಜನವರಿ 28: ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ (Mahakumbh) ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಸುಮಾರು 16 ಕೋಟಿ ಭಕ್ತರು ಪುಣ್ಯಸ್ನಾ ಮಾಡಿದ್ದು, ನಾಳೆ ಮೌನಿ ಅಮಾವಾಸ್ಯೆ ಹಿನ್ನೆಲೆ ಕುಂಭಮೇಳಕ್ಕೆ ಸುಮಾರು 10 ಕೋಟಿ ಭಕ್ತರು ಬರುವ ನಿರೀಕ್ಷೆ ಇದೆ. ಈ ಮಧ್ಯೆ ತಾಂತ್ರಿಕ ದೋಷದಿಂದ ಸ್ಪೈಸ್ ಜೆಟ್ ವಿಮಾನ ಹಾರಾಟ ವಿಳಂಬವಾಗಿದ್ದು, ಪ್ರಯಾಗ್​ರಾಜ್​ಗೆ ತೆರಳಿದ್ದ ಕನ್ನಡಿಗರಿಗೆ ಶಾಕ್ ಎದುರಾಗಿದೆ. ಅನ್ನ ನೀರಿಲ್ಲದೆ ಪರದಾಡಿದ್ದಾರೆ.

ತಾಂತ್ರಿಕ ದೋಷದಿಂದ ಮಧ್ಯಾಹ್ನ 2.10ಕ್ಕೆ ಬೆಂಗಳೂರಿಗೆ ಹೊರಡಬೇಕಿದ್ದ ಸ್ಪೈಸ್​ಜೆಟ್ ವಿಮಾನ SG664 ಹಾರಾಟ ವಿಳಂಬವಾಗಿದೆ. ಗಂಟೆಗಟ್ಟಲೆ ವಿಮಾನ ಹಾರಾಟ ವಿಳಂಬವಾಗಿದ್ದರಿಂದ ಪ್ರಯಾಗ್​ರಾಜ್​ನ ವಿಮಾನ ನಿಲ್ದಾಣದಲ್ಲಿ ಕನ್ನಡಿಗರು ಅನ್ನ ನೀರಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ರಾತ್ರಿ 11.15ಕ್ಕೆ ವಿಮಾನ ಟೇಕಾಫ್ ಆಗುವುದಾಗಿ ಹೇಳುತ್ತಿದ್ದು, ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಯಾಗ್​ರಾಜ್​​ಗೆ ತೆರಳುವ ಫ್ಲೈಟ್​​ ಟಿಕೆಟ್​ಗಳು ಸೋಲ್ಡೌಟ್

ಇದೆಲ್ಲದರ ನಡುವೆ ಕುಂಭಮೇಳಕ್ಕೆ ರಾಜ್ಯದಿಂದ ತೆರಳುವ ವಿಮಾನಗಳು ಫುಲ್​ ಆಗಿದ್ದು, ಫ್ಲೈಟ್​​ ಟಿಕೆಟ್​ ಸೋಲ್ಡ್​​ಔಟ್ ಆಗಿವೆ. ಪ್ರತಿದಿನ ಮೂರು ವಿಮಾನಗಳು ಏರ್ಪೋಟ್​ನಿಂದ ಪ್ರಯಾಗ್​ರಾಜ್​ಗೆ ಹಾರಾಟ ಮಾಡುತ್ತಿವೆ. ಇಂಡಿಗೋ ಸಂಸ್ಥೆಯ ಒಂದು, ಸ್ಪೈಸ್ ಜೆಟ್​ ಸಂಸ್ಥೆಯ ಎರಡು ವಿಮಾನಗಳು ಕೆಐಎಬಿಯಿಂದ ಪ್ರಯಾಗ್​ರಾಜ್​ಗೆ ಪ್ರಯಾಣ ಮಾಡುತ್ತಿವೆ.

ಇದನ್ನೂ ಓದಿ: ಮಹಾಕುಂಭ ಮೇಳಕ್ಕೆ ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಸುಧಾಮೂರ್ತಿ

ಇದೀಗ ಬುಕ್ ಮಾಡಬೇಕು ಅಂದರೆ ಒಬ್ಬರಿಗೆ ಪ್ರಯಾಗ್​ರಾಜ್​ಗೆ ತೆರಳಲು 22 ರಿಂದ 30 ಸಾವಿರ ರೂ. ಟಿಕೆಟ್ ದರ ಇದೆ. ಫೆಬ್ರವರಿ 26ರವರೆಗೂ ಪ್ರಯಾಗ್​ರಾಜ್​ಗೆ ತೆರಳುವ ವಿಮಾನಗಳು ಫುಲ್​​ ರಪ್​​ ಇದ್ದು, ಪ್ರಯಾಗ್​ರಾಜ್ ಹೊರತುಪಡಿಸಿದರೆ, ವಾರಣಾಸಿಗೂ ತೆರಳಿ ಅಲ್ಲಿಂದ ಪ್ರಯಾಗ್​ರಾಜ್​ಗೆ ತೆರಳಬಹುದಾಗಿದೆ. ಕೆಂಪೇಗೌಡ ಏರ್ಪೋಟ್​ನಿಂದ ವಾರಣಾಸಿಗೆ ಪ್ರತಿದಿನ 15 ವಿಮಾನಗಳು ಹಾರಾಟ ಮಾಡುತ್ತಿದ್ದು, ಸದ್ಯ ವಾರಣಾಸಿಗೆ 20 ರಿಂದ 28 ಸಾವಿರ ರೂ ಪ್ರಯಾಣ ದರ ಇದೆ.

ಕೆಂಪೇಗೌಡ ಏರ್ಪೋಟ್​ನಿಂದ ಲಕ್ನೋಗೂ ಪ್ರತಿದಿನ 22 ವಿಮಾನಗಳು ಹಾರಾಟ ಮಾಡುತ್ತವೆ. 16 ರಿಂದ 22 ಸಾವಿರ ರೂ. ವರೆಗೂ ಟಿಕೆಟ್ ದರ ಇದೆ. ಇನ್ನು ಪೇಗೌಡ ಏರ್ಪೋಟ್​ನಿಂದ ಅಯೋಧ್ಯೆಗೆ ಪ್ರತಿದಿನ ಐದು ವಿಮಾನಗಳು ಹಾರಾಟ ಮಾಡುತ್ತವೆ. ಸದ್ಯ 16 ರಿಂದ 30 ಸಾವಿರ ರೂ. ಟಿಕೆಟ್ ದರವಿದೆ.

ಇದನ್ನೂ ಓದಿ: Video: ಪ್ರಯಾಗ್​ರಾಜ್​ಗೆ ಹೊರಟಿದ್ದ ರೈಲಿನ ಮೇಲೆ ಕಲ್ಲು ತೂರಾಟ, ರೈಲು ಧ್ವಂಸ

ಕುಂಭಮೇಳ ಪ್ರಯಾಗ್​ರಾಜ್​ಗೆ ಪ್ರತಿದಿನ 3 ವಿಮಾನ, ಲಕ್ನೋಗೆ 22 ವಿಮಾನ, ವಾರಣಾಸಿಗೆ 15 ವಿಮಾನ ಮತ್ತು ಅಯೋಧ್ಯೆಗೆ 5 ವಿಮಾನ ಹಾರಾಟ ಮಾಡುತ್ತಿರುವುದರಿಂದ ಮೂರು ಏರ್ಲೈನ್ಸ್​​ನ ವಿಮಾನಗಳು ಫೂಲ್ ಬ್ಯುಸಿಯಾಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ನವೀನ್ ಕುಮಾರ್ ಟಿ.
ನವೀನ್ ಕುಮಾರ್ ಟಿ.

ನವೀನ್ ಕುಮಾರ್ ಟಿ ರವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡದ ದೇವನಹಳ್ಳಿ, ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂಎಸ್​ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ಇವರು ಪದವಿ ಶಿಕ್ಷಣ ಮುಗಿದ ನಂತರ ಟಿವಿ9 ಕನ್ನಡದಲ್ಲಿ ವರದಿಗಾರರಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಹುದ್ದೆಯನ್ನು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಿದ್ದಾರೆ.

Read More
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್
ಕರ್ನಾಟಕದ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ ಕೇಂದ್ರ ತಂಡ
ಕರ್ನಾಟಕದ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ ಕೇಂದ್ರ ತಂಡ
ಚಾಮರಾಜನಗರ ಆದಿವಾಸಿಗಳಿಗೆ ಆಹಾರ ಕಿಟ್ ಸ್ಥಗಿತ
ಚಾಮರಾಜನಗರ ಆದಿವಾಸಿಗಳಿಗೆ ಆಹಾರ ಕಿಟ್ ಸ್ಥಗಿತ
ಗದಗದ ಕೆಆರ್​ಡಿಎಲ್​ ಎಇಇ ಪತ್ರ ಬರೆದು ನಾಪತ್ತೆ ವಿಚಾರಕ್ಕೆ ಸಿಎಂ ಹೀಗಂದ್ರು
ಗದಗದ ಕೆಆರ್​ಡಿಎಲ್​ ಎಇಇ ಪತ್ರ ಬರೆದು ನಾಪತ್ತೆ ವಿಚಾರಕ್ಕೆ ಸಿಎಂ ಹೀಗಂದ್ರು
ಬಿಗ್ ಬಾಸ್ ಕನ್ನಡ: ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಸುದೀಪ್ ಸ್ವಾಗತ
ಬಿಗ್ ಬಾಸ್ ಕನ್ನಡ: ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಸುದೀಪ್ ಸ್ವಾಗತ
ಖರ್ಗೆ ಜತೆ ಏನೇನು ಮಾತುಕತೆಯಾಯ್ತು? ಸಿಎಂ ಡಿಕೆ ಶಿವಕುಮಾರ್ ಮಾಹಿತಿ
ಖರ್ಗೆ ಜತೆ ಏನೇನು ಮಾತುಕತೆಯಾಯ್ತು? ಸಿಎಂ ಡಿಕೆ ಶಿವಕುಮಾರ್ ಮಾಹಿತಿ