ಮಹಿಷಾಸುರ ಜೀವಂತ ವ್ಯಕ್ತಿ, ಚಾಮುಂಡಿ ಕೇವಲ ಕಾಲ್ಪನಿಕ ಚಿತ್ರವಷ್ಟೇ: ಪ್ರೊ.ನಂಜರಾಜೇ ಅರಸ್

| Updated By: ಗಂಗಾಧರ​ ಬ. ಸಾಬೋಜಿ

Updated on: Sep 29, 2024 | 6:57 PM

ಮಹಿಷ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ಇತಿಹಾಸಕಾರ ನಂಜರಾಜೇ ಅರಸ್​, ದೇವರುಗಳ ಪುರಾಣ ಓದಿದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಮಹಿಷಾಸುರನನ್ನು ಚಾಮುಂಡಿ ಕೊಂದಿಲ್ಲ. ಮಹಿಷಾಸುರ ಜೀವಂತ ವ್ಯಕ್ತಿ, ಚಾಮುಂಡಿ ಕೇವಲ ಕಾಲ್ಪನಿಕ ಚಿತ್ರವಷ್ಟೇ ಎಂದು ಹೇಳಿದ್ದಾರೆ. ಪ್ರತಾಪ್​ ಸಿಂಹ ಹಾಗೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿರುದ್ಧವೂ ಕಿಡಿ ಕಾಡಿದ್ದಾರೆ. 

ಮಹಿಷಾಸುರ ಜೀವಂತ ವ್ಯಕ್ತಿ, ಚಾಮುಂಡಿ ಕೇವಲ ಕಾಲ್ಪನಿಕ ಚಿತ್ರವಷ್ಟೇ: ಪ್ರೊ.ನಂಜರಾಜೇ ಅರಸ್
ಮಹಿಷಾಸುರ ಜೀವಂತ ವ್ಯಕ್ತಿ, ಚಾಮುಂಡಿ ಕೇವಲ ಕಾಲ್ಪನಿಕ ಚಿತ್ರವಷ್ಟೇ: ಪ್ರೊ.ನಂಜರಾಜೇ ಅರಸ್
Follow us on

ಮೈಸೂರು, ಸೆಪ್ಟೆಂಬರ್ 29: ಮಹಿಷಾಸುರ ಜೀವಂತ ವ್ಯಕ್ತಿ, ಚಾಮುಂಡಿ ಕೇವಲ ಕಾಲ್ಪನಿಕ ಚಿತ್ರವಷ್ಟೇ. ಮಹಿಷಾಸುರನನ್ನು ಚಾಮುಂಡಿ ಕೊಂದಿಲ್ಲ ಎಂದು ಇತಿಹಾಸಕಾರ ಪ್ರೊ.ನಂಜರಾಜೇ ಅರಸ್ (Prof Nanjaraje Urs)​ ಹೇಳಿದ್ದಾರೆ. ಮಹಿಷ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವರುಗಳ ಪುರಾಣ ಓದಿದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

ಚಂಡ, ಮುಂಡ ಸೇನಾಪತಿಗಳು ಕಾತ್ಯಾಯಿಣಿಯನ್ನು ತಲೆ ಕೂದಲಿನಿಂದ ಕಾಲಿನ ಉಗುರಿನವರೆಗೂ ವರ್ಣಿಸುತ್ತಾರೆ. ಕಾತ್ಯಾಯಿಣಿಯನ್ನು ಬಲವಂತವಾಗಿ ಎಳೆದೊಯ್ಯಲು ಯತ್ನಿಸಿದಾಗ ಕಾತ್ಯಾಯಿಣಿ ಹಣೆಯಿಂದ ಕಾಳಿ ಹುಟ್ಟಿ ಅವರನ್ನು ಬಲಿ ಹಾಕುತ್ತಾಳೆ. ಚಂಡ ಮುಂಡರನ್ನು ಕಾಳಿ ಬಲಿ ಹಾಕುತ್ತಾಳೆಂದು ಪುರಾಣ ಹೇಳುತ್ತೆ. ಆ ಕ್ಷಣದಿಂದ ಕಾಳಿಗೆ ಚಾಮುಂಡಿ ಎಂದು ಪ್ರಖ್ಯಾತಿಯಾಗೆಂದು ಹೆರಿಸ್ತಾಳೆ. ಆದರೆ ನಾವು ಚಾಮುಂಡಿ ಮಹಿಷಾಸುರನನ್ನು ಕೊಂದವಳು ಎನ್ನುತ್ತೇವೆ ಎಂದು ತಿಳಿಸಿದರು.

ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ 

ಮಾಜಿ ಸಂಸದನ ಮಾತಿಗೆ ಹೆದರಿ ಚಾಮುಂಡಿಬೆಟ್ಟಕ್ಕೆ ಬೀಗಹಾಕಿದ್ದಾರೆ. ಪೊಲೀಸರಿಗೆ ಚಿಂತನೆ ಮಾಡುವಂತಹ ಪ್ರಜ್ಞೆ ಇಲ್ಲದಿರುವುದು ನಾಚಿಕೆಗೇಡು. ಚಾಮುಂಡಿಗೂ-ಮಹಿಷಾಸುರನಿಗೂ ಏನಾದರೂ ಜಗಳವಾಗಿದೆಯಾ? ಅಸುರ ಮತ್ತು ರಾಕ್ಷಸ ಎನ್ನುವಂತಹದ್ದು ಸಮುದಾಯಗಳ ಹೆಸರು.

ಇದನ್ನೂ ಓದಿ: ಮಾನ ಮರ್ಯಾದೆ ಇದ್ರೆ ದೇವಸ್ಥಾನಕ್ಕೆ ಹೋಗುವುದನ್ನ ನಿಲ್ಲಿಸಬೇಕು: ಕೆಎಸ್​ ಭಗವಾನ್

ರಕ್ಷಣೆ ಮಾಡುವವರು ರಾಕ್ಷಸರು ಎಂದರ್ಥ. ಅಸುರರು ಎಂದರೆ ಇನ್ನೊಬ್ಬರ ಪ್ರಾಣ ರಕ್ಷಿಸುವವರು. ತಲೆಕೆಟ್ಟವನು ಹೇಳಿದನೆಂದು ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ. ಚಾಮುಂಡಿಬೆಟ್ಟ ನೋಡಲು ಬಂದ ಪ್ರವಾಸಿಗರಿಗೆ ಇದು ಬೇಜಾರಾಗಿದೆ. ಅಯೋಗ್ಯನ ಮಾತು ಕೇಳಿ ಚಾಮುಂಡಿಬೆಟ್ಟದಲ್ಲಿ ನಿಷೇಧಾಜ್ಞೆ ಹೇರಿದ್ದಾರೆ. ಇದರಿಂದ ಬೇಸರಗೊಂಡ ಪ್ರವಾಸಿಗರಲ್ಲಿ ಕ್ಷಮೆಯಾಚಿಸುವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ಕೈ ಬಿಟ್ಟ ಬಿಜೆಪಿ: ಪ್ರತಾಪ್ ಸಿಂಹ ಹೇಳಿದ್ದಿಷ್ಟು

ಪರಿವಾಳಕ್ಕೆ ಕಾಳು ಹಾಕಿದರೆ ಅರಮನೆ ಅಂದ ಹಾಳಾಗುತ್ತಿದೆ ಎಂದು ಪತ್ರ ಬರೆಯಲಾಗಿದೆ. ಅವನ ಮಾತು ಕೇಳಿ ಪಾರಿವಾಳಕ್ಕೆ ಕಾಳು ಹಾಕುವುದನ್ನು ನಿಲ್ಲಿಸುತ್ತಾರೆ ಎಂದು ಪರೋಕ್ಷವಾಗಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿರುದ್ಧವೂ ಕಿಡಿ ಕಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.