ಪ್ರೀತಿಸಿ ಮದುವೆಯಾದ ಜೋಡಿಗೆ ಜೀವ ಬೆದರಿಕೆ; ರಕ್ಷಣೆ ಕೋರಿ ಪೊಲೀಸರ ಮೊರೆ
ಆತ ಹೋಟಲ್ವೊಂದರಲ್ಲಿ ಕೆಲಸ ಮಾಡ್ತಿದ್ದವ, ಆಕೆ ಬಿ.ಕಾಂ ಪಧವಿಧರೆ. ಇಬ್ಬರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಪರಿಚಯವಾಗಿ ಪ್ರೀತಿಯಾಗಿದೆ. ಕೊನೆಗೆ ಮನೆ ಬಿಟ್ಟು ಹೋಗಿ ಮದುವೆಯನ್ನು ಕೂಡ ಮಾಡಿಕೊಂಡಿದ್ದಾರೆ. ಇಬ್ಬರದು ಒಂದೆ ಜಾತಿಯಾಗಿದ್ದರೂ ಹುಡುಗಿಯ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನಲೆ ನವಜೋಡಿ ರಕ್ಷಣೆ ಕೋರಿ ಪೊಲೀಸರ ಮೊರೆ ಹೋದ ಘಟನೆ ನಡೆದಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
ಚಿಕ್ಕಬಳ್ಳಾಪುರ, ಸೆ.29: ಹೀಗೆ ಯಾವುದೇ ಅಂಜು ಅಳಕು ಇಲ್ಲದೆ, ನಾನು ನೀನು ಒಂದಾದ ಮೇಲೆ ಇನ್ಯಾಕೆ ಚಿಂತೆ ಎಂದು ಪರಸ್ಪರ ಪ್ರೀತಿ ಪ್ರೇಮದಲ್ಲಿ ತೊಡಗಿರುವ ಇವರಲ್ಲಿ ಈಕೆಯ ಹೆಸರು ನಿರಜಾ. ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ನಿವಾಸಿ. ಬಿ.ಕಾಂ ಪಧವಿಧರೆಯಾಗಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಅದೇ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಹಾಲಿ ಹೋಟಲ್ ವೊಂದರಲ್ಲಿ ಕೆಲಸ ಮಾಡುತ್ತಿರುವ ಸ್ವಜಾತಿ ಯುವಕ ಚಿಕ್ಕಬಳ್ಳಾಪುರ ತಾಲೂಕಿನ ನಾಸ್ತಿಮ್ಮನಹಳ್ಳಿ ನಿವಾಸಿ ಜಗನ್ನಾಥ ಮಧ್ಯೆ ಪ್ರೀತಿ-ಪ್ರೇಮ ಶುರುವಾಗಿ ಕೊನೆಗೆ ಮನೆಯಿಂದ ಹೊರ ಹೋಗಿ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಆದ್ರೆ, ಇದೀಗ ಯುವತಿ ನಿರಾಜಾ ಮನೆಯಲ್ಲಿ ವಿರೋಧ ವ್ಯಕ್ತವಾಗಿದ್ದು, ಅವರಿಂದ ರಕ್ಷಣೆ ಕೋರಿ ಚಿಕ್ಕಬಳ್ಳಾಪುರ ಎಸ್ಪಿ ಮೊರೆ ಹೋಗಿದ್ದಾರೆ.
ಇನ್ನು ಜಗನ್ನಾಥ ಚಿಕ್ಕಬಳ್ಳಾಪುರ ತಾಲೂಕಿನ ನಾಸ್ತಿಮ್ಮನಹಳ್ಳಿ ನಿವಾಸಿ. ಎಸ್.ಎಸ್.ಎಲ್.ಸಿ ವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದಾನೆ. ಖಾಸಗಿ ಕಂಪನಿ ತೊರೆದು ಹೋಟಲ್ವೊಂದರಲ್ಲಿ ಕೆಲಸ ಮಾಡ್ತಿದ್ದಾನೆ. ವಿದ್ಯಾಭ್ಯಾಸ ಕಡಿಮೆ ಇದ್ದು, ಹೋಟೆಲ್ ನಲ್ಲಿ ಕೆಲಸ ಬೇರೆ ಎಂದು ಯುವತಿ ಮನೆಯವರಿಂದ ಮದುವೆಗೆ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ:ವಿಚಿತ್ರ ಪ್ರೇಮಕಥೆ, ಪ್ರೀತಿಸಿ ಮದುವೆಯಾದ ಮೂವರು ಯುವತಿಯರು
ಆದರೂ, ಜಗನ್ನಾಥ ಪ್ರೀತಿಸಿದವಳನ್ನೆ ಲವ್ ಮ್ಯಾರಿಜ್ ಆಗಿದ್ದು, ರಕ್ಷಣೆ ಕೋರಿ ಚಿಕ್ಕಬಳ್ಳಾಪುರ ಎಸ್ಪಿ ಬಳಿ ಮನವಿ ಮಾಡಿದ್ದಾರೆ. ಒಂದೇ ಜಾತಿಯಾಗಿದ್ದರೂ ವಿದ್ಯಾಭ್ಯಾಸ ಹಾಗೂ ಕೆಲಸದಲ್ಲಿ ಹುಡುಗ ಕಡಿಮೆ ಎಂದು ಹುಡುಗಿ ಪೋಷಕರು ಇಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದು ಆಶ್ಚರ್ಯಕರ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ