ಅವಳಿಗಾಗಿ ಪ್ರೀತಿಸಿ ಮದುವೆಯಾದವಳನ್ನೇ ಹತ್ಯೆ ಮಾಡಿದ್ನಾ ಪೊಲೀಸ್? ಏನಿದು ಘಟನೆ…

ಹಾಸನ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಬಳಿ ನಿನ್ನೆ(ಜು.01) ರಕ್ತದ ಕೋಡಿ ಹರಿದಿತ್ತು, ಇಡೀ ಜಿಲ್ಲೆಯ ಜನರ ರಕ್ಷಣೆಯ ಹೊಣೆ ಹೊತ್ತ ಆರಕ್ಷಕರ ಕಛೇರಿ ಸಮೀಪ, ಅದೂ ಪೊಲೀಸ್ ಕುಟುಂಬದ ಮಹಿಳೆಯೊಬ್ಬರು, ತನ್ನದೇ ಪತಿ ಹೆಡ್​ಕಾನ್ಸಟೇಬಲ್​ನಿಂದ ಬರ್ಬರವಾಗಿ ದಾಳಿಗೊಳಗಾಗಿ, ರಕ್ಷಣೆಗಾಗಿ ಎಸ್ಪಿ ಕಛೇರಿಯ ಕಾಂಪೌಂಡ್ ಒಳಗೆ ಓಡಿ ಬಂದ್ರೂ ಆಕೆನ್ನ ಬೆಂಬಿಡದೆ ಬೆನ್ನಟ್ಟಿ ಬಂದಿದ್ದ ಕ್ರೂರಿ ಗಂಡನ ಅಟ್ಟಹಾಸಕ್ಕೆ ಆಕೆ ಕುಸಿದು ಬಿದ್ದಿದ್ದಳು. ಕೂಡಲೇ ಆಕೆಯನ್ನ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಹಾಗಾದರೆ ಆಗಿದ್ದೇನು? ಈ ಸ್ಟೋರಿ ಓದಿ.

ಅವಳಿಗಾಗಿ ಪ್ರೀತಿಸಿ ಮದುವೆಯಾದವಳನ್ನೇ ಹತ್ಯೆ ಮಾಡಿದ್ನಾ ಪೊಲೀಸ್? ಏನಿದು ಘಟನೆ...
ಆರೋಪಿ ಪೊಲೀಸ್​, ಮೃತ ಪತ್ನಿ
Follow us
ಮಂಜುನಾಥ ಕೆಬಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 02, 2024 | 4:23 PM

ಹಾಸನ, ಜು.02: ಹಾಸನ(Hassan) ಎಸ್ಪಿ ಕಚೇರಿ ಸಮೀಪವೇ ನಿನ್ನೆ(ಸೋಮವಾರ) ಹೆಡ್​ಕಾನ್ಸಟೇಬಲ್ ಲೋಕನಾಥ್ ಎಂಬಾತ, ಪತ್ನಿ ಮಮತಾಳನ್ನ ಅಟ್ಟಾಡಿಸಿಕೊಂಡು ಡ್ರ್ಯಾಗರ್​ನಿಂದ ಹಲ್ಲೆ ನಡೆಸಿದ್ದ. ಕೂಡಲೇ ಆಕೆಯನ್ನ ಸಿಬ್ಬಂದಿಗಳು ರಕ್ಷಣೆ ಮಾಡಿ ಜಿಲ್ಲಾ ಸ್ಪತ್ರೆಗೆ ಸೇರಿಸಿದರೂ, ಚಿಕಿತ್ಸೆ ಫಲಿಸಿದೇ ಕೊನೆಯುಸಿರೆಳೆದಿದ್ದಾರೆ. ಇನ್ನು ಎಸ್ಕೇಪ್ ಆಗಲು ಯತ್ನಿಸಿದವನನ್ನು ಕೂಡಲೆ ವಶಕ್ಕೆ ಪಡೆದ ಪೊಲೀಸರು ನಗರ ಠಾಣೆಗೆ ಕರೆದೊಯ್ದಿದ್ದರು. ಅಷ್ಟಕ್ಕೂ ಅಲ್ಲಿ ತನ್ನದೇ ಪತಿಯಿಂದ ಭೀಕರವಾಗಿ ಕೊಲೆಯಾದ ಮಹಿಳೆಯ ಹೆಸರು ಮಮತಾ, ಹಾಸನ ಹೊರವಲಯದ ಚನ್ನಪಟ್ಟಣ ಬಡಾವಣೆಯ ಶ್ಯಾಮಣ್ಣನ ಮಗಳಾದ ಮಮತಾ, 17 ವರ್ಷಗಳ ಹಿಂದೆ ಪೊಲೀಸ್ ಇಲಾಖೆಯಲ್ಲಿ ಕಾನ್ಸಟೇಬಲ್ ಆಗಿದ್ದ ಹಾಸನದ ಕೆ.ಆರ್.ಪುರಂ ಬಡಾವಣೆಯ ನಿವಾಸಿ ಲೋಕನಾಥ್ ಎಂಬುವವನನ್ನು ಇಷ್ಟಪಟ್ಟು ಪ್ರೀತಿಸಿ ಮದುವೆಯಾಗಿದ್ದರು.

ಹೇಳಿ ಕೇಳಿ ಇಬ್ಬರದೂ ಬೇರೆ ಬೇರೆ ಜಾತಿಯಾಗಿದ್ದರಿಂದ ಮನೆಯವರ ವಿರೋದವೂ ಇತ್ತು. ಆದ್ರೆ, ಪ್ರೀತಿಸಿದಾಕೆಯೇ ನನ್ನ ಪ್ರಪಂಚ, ಎಂದು ಹಂಬಲಿಸಿದ್ದ ಲೋಕನಾಥ್, ಎಲ್ಲಾ ವಿರೋಧವನ್ನು ಹಿಮ್ಮೆಟ್ಟಿಸಿ ಮದುವೆಯಾಗಿದ್ದ. ಇವರಿಬ್ಬರ ಪ್ರೀತಿಯ ಸಂಕೇತವಾಗಿ ಎರಡು ಮುದ್ದಾದ ಮಕ್ಕಳು ಆಗಿದ್ದರು. ಆದರೆ, ಇತ್ತೀಚೆಗೆ ಲೋಕನಾಥ್​ಗೆ ಶುರುವಾಗಿದ್ದ ಆಸ್ತಿ, ಹಣ, ಒಡವೆ ವ್ಯಾಮೋಹ, ಪತ್ನಿಯನ್ನ ಬಲಿಪಡೆದಿದೆ ಎಂದು ಮಮತಾ ಕಡೆಯವರ ಆರೋಪ. ಇನ್ನು ಹಾಸನದ ನಗರ ಠಾಣೆಯಲ್ಲಿ ಕೊಲೆ ಕೇಸ್ ದಾಖಲಿಸಿಕೊಂಡು ಕೊಲೆ ಹಿಂದಿನ ಸತ್ಯ ಬಯಲು ಮಾಡಲು ಪೊಲೀಸರು ಮುಂದಾಗಿದ್ದಾರೆ

ಇದನ್ನೂ ಓದಿ:ರಾಡ್​ನಿಂದ ಹೊಡೆದು 17 ವರ್ಷದ ಯುವಕನ ಹತ್ಯೆ; ಕೊಲೆ ಹಿಂದೆ ಪ್ರೀತಿ, ಗಾಂಜಾ ಕರಿನೆರಳು

ಅವಳಿಗಾಗಿ ಪ್ರೀತಿಸಿ ಮದುವೆಯಾದವಳ ಹತ್ಯೆ ಮಾಡಿದ್ನಾ ಲೋಕನಾಥ್?

ಲೋಕನಾಥ್ 20 ವರ್ಷಗಳ ಹಿಂದೆ ಪೊಲೀಸ್ ಇಲಾಖೆ ಸೇರಿದ್ದ. ತಾನು ಕಾಲೇಜು ಕಲಿಯುತ್ತಿದ್ದ ಸಂದರ್ಭದಲ್ಲೇ ಸುಂದರಿ ಮಮತಾಳನ್ನ ನೋಡಿ ಅವಳಿಗೆ ಮನಸ್ಸು ಕೊಟ್ಟಿದ್ದ. ಜೊತೆಗೆ ಅವಳನ್ನೇ ಮದುವೆಯಾಗಿ ಎರಡು ಮನೆಯವರು ಒಪ್ಪಿ ಎಲ್ಲರೂ ಚನ್ನಾಗಿಯೇ ಇದ್ದರು. ಇನ್ನು ಮಮತಾ ಮನೆಯಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಆಸ್ತಿಯಿದ್ದರಿಂದ ಮಗಳಿಗೆ ಅರ್ಧ ಕೆಜಿ ಬಂಗಾರ, ಹಣ ಸೈಟು ಎಲ್ಲವನ್ನು ಕೊಟ್ಟು ಹಾಸನದಲ್ಲಿ ಸ್ವಂತ ಮನೆ ಕಟ್ಟಿಕೊಡಲು ಹತ್ತಾರು ಲಕ್ಷ ಹಣವನ್ನು ಕೊಟ್ಟಿದ್ದರಂತೆ. ಆದ್ರೆ, ದಶಕಗಳ ಕಾಲ ಚನ್ನಾಗಿಯೇ ಇದ್ದ ಸಂಸಾರದಲ್ಲಿ ಇದ್ದಕ್ಕಿದ್ದಂತೆ ವಿರಸ ಶುರುವಾಗಿದೆ.

ಮತ್ಯಾರೋ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಆರೋಪ

ಮಮತಾ ಕುಟುಂಬ ಸದಸ್ಯರು ಆರೋಪ ಮಾಡುವಂತೆ ಮತ್ಯಾರೋ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಲೋಕನಾಥ್, ಅವಳಿಗಾಗಿ ಎಲ್ಲವನ್ನು ಖರ್ಚು ಮಾಡೋಕೆ ಶುರುಮಾಡಿದ್ದ. ಹೆಂಡತಿಯ ಒಡವೆಗಳನ್ನೆಲ್ಲ ಅಡವಿಟ್ಟು ಅವಳ ಯೋಗಕ್ಷೇಮ ವಿಚಾರಿಸೋಕೆ ನಿಂತಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಹಲವು ಬಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ರು, ಲೋಕನಾಥ್ ಪೊಲೀಸ್ ಎನ್ನುವ ಕಾರಣಕ್ಕೆ ಪೊಲೀಸರು ಪ್ರತೀ ಸಲ ರಾಜಿ ಮಾಡಿ ಕಳಿಸಿದ್ದರಂತೆ. ಮಮತಾ ಕೂಡ ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ. ಈಗ ರಂಪ ಮಾಡಿಕೊಳ್ಳೋದು ಬೇಡಾ ಎಂದು ಹಲ್ಲೆಯಾದರೂ ಕೂಡ ಎಲ್ಲವನ್ನು ಸಹಿಸಿಕೊಂಡು ಮಾನಾ ಮರ್ಯಾದೆ ಎಂದು ಹೇಳಿ ಸುಮ್ಮನಾಗಿದ್ದಳಂತೆ.

ಇದನ್ನೂ ಓದಿ:ಕ್ಷುಲ್ಲಕ ಕಾರಣಕ್ಕೆ ಬಾರ್​​ಲ್ಲಿ ಗಲಾಟೆ: ಕುಡಿದ ಅಮಲಿನಲ್ಲಿ ಗುರಾಯಿಸಿದ್ದಕ್ಕೆ ವ್ಯಕ್ತಿಯ ಕೊಲೆ

ಒಡವೆ ಅಡವಿಟ್ಟ ಪ್ರಕರಣದಲ್ಲಿ ಇಬ್ಬರ ನಡುವೆ ಜಗಳ

ಪೋಷಕರು ಗಂಡನ ವಿರುದ್ದ ದೂರು ಕೊಡು ಎಂದರೂ ಕೇಳದೆ ಸುಮ್ಮನಾಗಿದ್ದಳು. ಆದ್ರೆ, ಕಳೆದ ಎರಡು ದಿನಗಳಿಂದ ಹೆಂಡತಿ ಒಡವೆ ಅಡವಿಟ್ಟ ಪ್ರಕರಣದಲ್ಲಿ ಇಬ್ಬರ ನಡುವೆ ಜಗಳ ಜೋರಾಗಿದೆ. ಸೋಮವಾರ ಬೆಳಿಗ್ಗೆ ಮನೆಗೆ ಬಂದ ಲೋಕನಾಥ್, ಪತ್ನಿ ಮೇಲೆ ಹಲ್ಲೆ ಮಾಡಿ, ಮಕ್ಕಳ ಮೇಲೂ ದೌರ್ಜನ್ಯ ನಡೆಸಿದ್ದನಂತೆ. ಏನೇ ಹೇಳಿದ್ದರೂ ನೀನು ಬುದ್ದಿ ಕಲಿಯೋದಿಲ್ಲ ಎಂದು ಸಿಟ್ಟಾದ ಮಮತಾ, ನಿನ್ನ ವಿರುದ್ದ ಪೊಲೀಸರಿಗೆ ದೂರು ಕೊಡ್ತೇನೆ ಎಂದು ಹೇಳಿ ಮನೆಯಿಂದ ಹೊರಟಿದ್ದಾರೆ. ಕೂಡಲೆ ಮಮತಾರನ್ನ ಹಿಂಬಾಲಿಸಿ ಲೋಕನಾಥ್ ಕೂಡ ಬಂದಿದ್ದಾನೆ.

ಡ್ರ್ಯಾಗರ್​ನಿಂದ ಎದೆಗೆ ಇರಿದ ಪತಿ

ಸೀದಾ ಮಹಿಳಾ ಠಾಣೆಗೆ ಬಂದಿದ್ದ ಮಮತಾ ನೋವು ಹೇಳಿಕೊಂಡಿದ್ದರಂತೆ. ಆದ್ರೆ, ಆರೋಪಿ ಪತಿ ಹೇಳಿ ಕೇಳಿ ಪೊಲೀಸ್​, ಹಾಗಾಗಿ ನೀವು ಎಸ್ಪಿ ಅವರನ್ನು ಒಮ್ಮೆ ಭೇಟಿ ಮಾಡಿ ಎಂದು ಮಹಿಳಾ ಪೊಲೀಸ್ ಠಾಣೆ ಸಿಬ್ಬಂದಿ ಸಲಹೆ ಮೇರೆಗೆ ಮಮತಾ  ಎಸ್ಪಿ ಕಛೇರಿಯತ್ತ ಬಂದಿದ್ದಾರೆ. ಈ ನಡುವೆ ಜಿಲ್ಲಾಸ್ಪತ್ರೆ ಬಳಿ ಅಡ್ಡಗಟ್ಟಿದ ಲೋಕನಾಥ್, ಅವಳನ್ನ ತಡೆಯಲು ಯತ್ನಿಸಿ, ಎಸ್ಪಿಯವರಿಗೆ ದೂರು ಕೊಡದಂತೆ ಒತ್ತಡ ಹಾಕಿದ್ದಾನೆ. ಆದ್ರೆ, ದೂರು ಕೊಡೋಕೆ ಸಿದ್ದಳಾಗಿ ಬಂದಿದ್ದ ಮಮತಾ, ಪತಿ ಮಾತು ಕೇಳದಿದ್ದಾಗ ಮೊದಲೇ ತಯಾರಾಗಿ ಬಂದಿದ್ದ ಲೋಕನಾಥ್ ಸೀದಾ ಡ್ರ್ಯಾಗರ್ ತೆಗೆದು ಮಮತಾಗೆ ಇರಿದು ಬಿಟ್ಟಿದ್ದ.

ಹೇಗೋ ಅಲ್ಲಿಂದ ಚೀರಾಡುತ್ತಾ ಮಮತಾ ಎಸ್ಪಿ ಕಛೇರಿ ಒಳಗೆ ಓಡಿದ್ದಾರೆ. ಅಷ್ಟರಲ್ಲಿ ತನ್ನ ಕೆಲಸ ಮುಗಿಸಿದ್ದ ದುಷ್ಟ ಲೋಕನಾಥ್, ಅಲ್ಲಿಂದ ಎಸ್ಕೇಪ್ ಆಗೋ ಯತ್ನ ಮಾಡಿದ್ದಾನೆ. ಆದ್ರೆ, ಅಲ್ಲಿದ್ದ ಪೊಲೀಸರು ಕೂಡಲೆ ಲೋಕನಾಥ್​ನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಮಮತಾರನ್ನು ಕೂಡ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದ್ರೆ, ಸುಮಾರು ಅರ್ಧ ಗಂಟೆ ಸಾವು ಬದುಕಿನ ನಡುವೆ ಹೋರಾಡಿದ ಮಮತಾ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ:ಉಡುಪಿಯಲ್ಲಿ ಗಗನಸಖಿ ಸೇರಿ ನಾಲ್ವರ ಕೊಲೆ ಕೇಸ್; ಆರೋಪಿ ಜಾಮೀನು ಅರ್ಜಿ ವಜಾ

ಮಾವನ ಮನೆಯ ಆಸ್ತಿಗಾಗಿ ಪತ್ನಿಗೆ ಕಿರುಕುಳ

ತಂದೆ ಮನೆಯ ಆಸ್ತಿಯಲ್ಲಿ ಸಮಪಾಲು ತೆಗೆದುಕೊಂಡು ಬಾ ಎಂದು ಪತ್ನಿಗೆ ಕಿರುಕುಳ ಕೊಡೋಕೆ ಶುರು ಮಾಡಿದ್ದ. ಜೊತೆಗೆ ಬಲವಂತವಾಗಿ ಆಕೆಯಿಂದ ತನ್ನ ತಂದೆ ವಿರುದ್ದವೇ ಕೇಸ್ ಹಾಕಿಸಿ ಆಸ್ತಿಯಲ್ಲಿ ಅರ್ಧ ಭಾಗ ಕೇಳಿಸಿದ್ದನಂತೆ. ಆದ್ರೆ, ಒಬ್ಬ ತಮ್ಮನ ಮದುವೆ ಆಗಿದೆ. ಇನ್ನೊಬ್ಬ ತಮ್ಮನದ್ದು ಮದುವೆ ಆಗಲಿ, ನಂತರ ಏನು ಕೊಡಬೇಕೋ ಕೊಡ್ತೀವಿ ಎಂದರೂ ಕೇಳದೆ ಪದೇ ಪದೆ ಹಲ್ಲೆ, ಕಿರುಕುಳ ನೀಡುತ್ತಿದ್ದ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇವನ ಕಿರುಕುಳಕ್ಕೆ ಲೋಕನಾಥ್ ತಂದೆ-ತಾಯಿ ಹಾಗೂ ಸಹೋದರಿಯದ್ದು ಕುಮ್ಮಕ್ಕು ಇತ್ತು. ಅವರ ವಿರುದ್ದವೂ ದೂರು ದಾಖಲಾಗಬೇಕು ಎಂದು ಪಟ್ಟು ಹಿಡಿದು, ಇಂದು ಕೂದ ಲೋಕನಾಥ್​ ಮನೆ ಮುಂದೆ ಶವ ಇಟ್ಟು ತಮ್ಮ ಅಸಮಧಾನ ಹೊರ ಹಾಕಿದ್ರು, ಲೋಕನಾಥ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಮೇಲೂ ಕೇಸ್ ದಾಖಲಾಗಬೇಕು ಎಂದು ಪಟ್ಟು ಹಿಡಿದಿದ್ದರು. ಪೊಲೀಸರು ನಿಷ್ಪಕ್ಷಪಾತ ತನಿಖೆಯ ಭರವಸೆ ಮೇರೆಗೆ ಮೃತದೇಹವನ್ನ ಕೊಂಡೊಯ್ದು ಅಂತ್ಯಕ್ರಿಯೆ ನೆ್ರವೇರಿಸಿದ್ದಾರೆ.

ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು..

ಕೇವಲ ಎರಡು ವಾರಗಳ ಹಿಂದಷ್ಟೇ ಹಾಸನ ನಗರದಲ್ಲಿ ಶೂಟ್ ಔಟ್​ನಲ್ಲಿ ಇಬ್ಬರು ಬಲಿಯಾಗಿ ಇಡೀ ಜಿಲ್ಲೆಯೇ ಬೆಚ್ಚಿ ಬಿದ್ದಿತ್ತು. ಈ ಘಟನೆ ಮಾಸೋ ಮುನ್ನವೇ ಅದೂ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಕಛೇರಿ ಸಮೀಪವೇ ಹಾಡು ಹಗಲಿನಲ್ಲಿ ಪೊಲೀಸ್ ಹೆಡ್ ಕಾನ್ಸಟೇಬಲ್​ವೊಬ್ಬ ಯಾವುದೇ ಭಯ, ಭೀತಿ ಇಲ್ಲದೆ ನಡು ರಸ್ತೆಯಲ್ಲಿ ತನ್ನ ಮಡದಿಗೆ ಇರಿದು ಕೊಂದಿದ್ದಾನೆ. ತಡ ಮಾಡದ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಕೊಲೆಯಾದ ಮಮತಾ ಪೋಷಕರು ಕೊಟ್ಟ ದೂರಿನಂತೆ ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕೊಲೆಗೆ ಅಳಿಯನ ಕಿರುಕುಳ ಕಾರಣ, ಅದೊಬ್ಬ ಮಹಿಳೆ ಜೊತೆಗಿನ ಅಕ್ರಮ ಸಂಬಂಧದಿಂದಲೇ ಪತ್ನಿಗೆ ಕೊಡ್ತಿದ್ದ ಕಿರುಕುಳ ಹೆಚ್ಚಾಗಿತ್ತು ಎಂದು ಆರೋಪಿಸಿರೊ ಪೋಷಕರು, ಆಕೆ ವಿರುದ್ದವೂ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸದ್ಯ ಕೊಲೆ ಕೇಸ್ ದಾಖಲಿಸಿ ಆರೋಪಿಯನ್ನ ಬಂಧಿಸಿ ತನಿಖೆ ಕೈಗೊಂಡಿರುವ ಪೊಲೀಸರು, ವಿಚಾರಣೆ ಮುಂದುವರೆಸಿದ್ದು ತನಿಖೆ ಬಳಿಕವೇ ಸತ್ಯ ಬಯಲಾಗಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ