ಉಡುಪಿಯಲ್ಲಿ ಗಗನಸಖಿ ಸೇರಿ ನಾಲ್ವರ ಕೊಲೆ ಕೇಸ್; ಆರೋಪಿ ಜಾಮೀನು ಅರ್ಜಿ ವಜಾ

ಉಡುಪಿಯಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಕೊಲೆ ಆರೋಪಿಯನ್ನ ಪೊಲೀಸರು ಮೊಬೈಲ್​ ನೆಟ್​ವರ್ಕ್ ಲೋಕೇಶನ್​​ ಆಧರಿಸಿ ಬೆಳಗಾವಿಯ ಕುಡಚಿ ಎಂಬಲ್ಲಿ ಬಂಧಿಸಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಅರುಣ್ ಚೌಗುಲೆ ಜಾಮೀನು ಅರ್ಜಿಯನ್ನು ವಜಾ ಮಾಡಿ ಹೈಕೋರ್ಟ್​ ಪೀಠ ಆದೇಶಿಸಿದೆ.

ಉಡುಪಿಯಲ್ಲಿ ಗಗನಸಖಿ ಸೇರಿ ನಾಲ್ವರ ಕೊಲೆ ಕೇಸ್; ಆರೋಪಿ ಜಾಮೀನು ಅರ್ಜಿ ವಜಾ
ಆರೋಪಿ ಪ್ರವೀಣ್ ಅರುಣ್ ಚೌಗುಲೆ ಜಾಮೀನು ಅರ್ಜಿ ವಜಾ ಮಾಡಿದ ಹೈಕೋರ್ಟ್
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 27, 2024 | 2:47 PM

ಉಡುಪಿ, ಜೂ.27: ಉಡುಪಿ(Udupi) ತಾಲೂಕಿನ ನೇಜಾರು ಸಮೀಪದ ತೃಪ್ತಿನಗರದಲ್ಲಿ 2023 ನವೆಂಬರ್ 12 ರಂದು ಗಗನಸಖಿ (Air Hostess) ಸೇರಿ ಒಂದೇ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ದಾರುಣ ಘಟನೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಅರುಣ್ ಚೌಗುಲೆ ಜಾಮೀನು ಅರ್ಜಿಯನ್ನು ವಜಾ ಮಾಡಲಾಗಿದೆ. ಹೌದು, ನ್ಯಾಯಮೂರ್ತಿ ಎಂ.ಜಿ ಉಮಾ ಅವರಿದ್ದ ಹೈಕೋರ್ಟ್ ಪೀಠ ಆದೇಶಿಸಿದೆ.

ಮಲ್ಪೆ ಠಾಣೆಯ ನೇಜಾರು ಎಂಬಲ್ಲಿ ಒಂದೇ ಕುಟುಂಬದವರಾದ ಐನಾಜ್, ಹಸೀನಾ, ಅಫ್ನಾನ್ ಹಾಗೂ ಅಸೀಮ್ ಎಂಬುವರರನ್ನ ಹತ್ಯೆ ನಡೆಸಿದ್ದ. ಈ ಕುರಿತು ಸಾಂದರ್ಭಿಕ ಸಾಕ್ಷಿ, ಸಿಸಿಟಿವಿ ದೃಶ್ಯ, ಆರೋಪಿ ಕೂದಲಿನ DNA ಆಧರಿಸಿ ಹೆಚ್ಚುವರಿ ಎಸ್​ಪಿಪಿ ಬಿ.ಎನ್.ಜಗದೀಶ್ ಅವರು ಇಂದು(ಗುರುವಾರ) ವಾದ ಮಂಡಿಸಿದ್ದರು. ಅದರಂತೆ ಬರ್ಬರ ಹತ್ಯೆ ಆರೋಪಿಯ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಇದನ್ನೂ ಓದಿ:ನಾಲ್ವರ ಕೊಲೆ ಮಾಡಿದ್ದನ್ನು ಪ್ರವೀಣ್ ಚೌಗುಲೆ ಒಪ್ಪಿಕೊಂಡಿದ್ದಾನೆ, ಅವನ ತಪ್ಪೊಪ್ಪಿಗೆಯನ್ನು ಪ್ರಮಾಣೀಕರಿಸಬೇಕಿದೆ: ಉಡುಪಿ ಪೊಲೀಸ್ ವರಿಷ್ಠಾಧಿಕಾರಿ

ಇನ್ನು ಈ ಪ್ರಕರಣದ ಕುರಿತು ಅಂದು ಮಾತನಾಡಿದ್ದ ಎಸ್​ಪಿ ಡಾ.ಅರುಣ್, ‘​ ನಾಲ್ವರ ಹತ್ಯೆಯನ್ನು ಮಾಡಿರುವುದಾಗಿ ಆರೋಪಿ ಪ್ರವೀಣ್ ಅರುಣ್ ಚೌಗುಲೆ ಒಪ್ಪಿಕೊಂಡಿದ್ದಾನೆ.. ಮೇಲ್ನೋಟಕ್ಕೆ ಹತ್ಯೆಗೆ ಮೂರ್ನಾಲ್ಕು ಕಾರಣಗಳು ಇರುವ ಸಾಧ್ಯತೆಯಿದೆ. ಸಂಪೂರ್ಣ ತನಿಖೆ ಮಾಡದೆ ಕಾರಣ ಏನು ಹೇಳಲು ಸಾಧ್ಯವಿಲ್ಲ. ಆರೋಪಿ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿದ್ದಾನೆ. ಅವನ ಉದ್ದೇಶ ಆಯ್ನಾಸ್ ಕೊಲೆ ಮಾಡುವುದಾಗಿತ್ತು. ಆದರೆ, ಈ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಮತ್ತು ಸಾಕ್ಷಿ ನಾಶ ಮಾಡಲು ಉಳಿದವರನ್ನು ಕೊಲೆ ಮಾಡಿರುವ ಬಗ್ಗೆಯೋ ಒಪ್ಪಿಕೊಂಡಿದ್ದಾನೆ ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್
ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಗಣೇಶ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಹಾಸನ: ಕೆರೆಯಲ್ಲಿ ಈಜಾಡಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು
ಹಾಸನ: ಕೆರೆಯಲ್ಲಿ ಈಜಾಡಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು
ಬಿವಿವಿ ಸಂಘದ ಮೆಡಿಕಲ್ ಕಾಲೇಜ್ ಆವರಣದಲ್ಲಿ ಓಣಂ ಸಂಭ್ರಮ, ವಿಡಿಯೋ ನೋಡಿ
ಬಿವಿವಿ ಸಂಘದ ಮೆಡಿಕಲ್ ಕಾಲೇಜ್ ಆವರಣದಲ್ಲಿ ಓಣಂ ಸಂಭ್ರಮ, ವಿಡಿಯೋ ನೋಡಿ
ಪಿತೃಪಕ್ಷದ ಮಹತ್ವ ತಿಳಿಯಲು ಈ ವಿಡಿಯೋದಲ್ಲಿ ನೋಡಿ
ಪಿತೃಪಕ್ಷದ ಮಹತ್ವ ತಿಳಿಯಲು ಈ ವಿಡಿಯೋದಲ್ಲಿ ನೋಡಿ