Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ: ಅನೈತಿಕ ಸಂಬಂಧ; ಒಡಹುಟ್ಟಿದವಳನ್ನೇ ಕಲ್ಲಿನಿಂದ ತಲೆಗೆ ಜಜ್ಜಿ ಕೊಲೆ

ಅಲ್ಲಿ ಒಂದು ತಿಂಗಳ ಹಿಂದೆ ರುಂಡ ಮುಂಡ ಬೇರ್ಪಡೆಯಾದ ಸ್ಥಿತಿಯಲ್ಲಿ ಅಪರಿಚಿತ ಯುವತಿ ಶವ ಪತ್ತೆಯಾಗಿತ್ತು.ಆಕೆ ಧರಿಸಿದ್ದ ಕಪ್ಪು ಜೀನ್ಸ್ ಪ್ಯಾಂಟ್, ಸ್ಮೈಲ್ ಎಂಬ ಬರಹದ ಟಿ ಶರ್ಟ್ ಮೇಲೆಯೇ ಪೊಲೀಸರು ತನಿಖೆ ‌ನಡೆಸಿದ್ದರು. ಬರೊಬ್ಬರಿ ತಿಂಗಳ ನಂತರ ಗುರುತು ಪತ್ತೆಯಾಗಿದೆ. ಇಲ್ಲಿ ಸಹೋದರನೇ ಕೊಲೆ ಮಾಡಿದ್ದು‌, ಮರ್ಯಾದೆ ಹತ್ಯೆ ಬಯಲಾಗಿದೆ.

ಬಾಗಲಕೋಟೆ: ಅನೈತಿಕ ಸಂಬಂಧ; ಒಡಹುಟ್ಟಿದವಳನ್ನೇ ಕಲ್ಲಿನಿಂದ ತಲೆಗೆ ಜಜ್ಜಿ ಕೊಲೆ
ಒಡಹುಟ್ಟಿದವಳನ್ನೇ ಕಲ್ಲಿನಿಂದ ತಲೆಗೆ ಜಜ್ಜಿ ಕೊಲೆ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 23, 2024 | 7:06 PM

ಬಾಗಲಕೋಟೆ, ಜೂ.23: ಜಿಲ್ಲೆಯ ಬೀಳಗಿ(Bilagi) ತಾಲ್ಲೂಕಿನ ಹಳೆ ಟಕ್ಕಳಕಿ ತೋಟದ ವಸತಿ ಪ್ರದೇಶ ವ್ಯಾಪ್ತಿಯಲ್ಲಿ ತಲೆ‌ಗೂದಲು ಒಂದು ಕಡೆ , ದೇಹ ಒಂದು ಮತ್ತೊಂದು ಕಡೆ, ಗುರುತು ಸಿಗದ ಹಾಗೆ ಕೊಳೆತ‌ ಮುಖ. ಈ ರೀತಿ ಪ್ರೀತಿ ಉನ್ನದ ಎಂಬ ಯುವತಿ ಶವವಾಗಿ ಸಿಕ್ಕಿದ್ದಳು. ಕೇವಲ 19 ವರ್ಷದ ಈ ಯುವತಿಯ ಶವ ಕಳೆದ ಮೇ 27 ರಂದು ಹಳೆಟಕ್ಕಳಕಿ ತೋಟದ ವಸತಿ ಪ್ರದೇಶದಲ್ಲಿ ಪತ್ತೆಯಾಗಿತ್ತು. ಕಪ್ಪು ಜೀನ್ಸ್ ಪ್ಯಾಂಟ್, ಸ್ಮೈಲ್‌ ಎಂಬ ಬರಹದ ಪಿಂಕ್ ಟಿ ಶರ್ಟ್, ಬಲಗಾಲಲ್ಲಿ ಗೆಜ್ಜೆ ,ಕಪ್ಪು ದಾರವಿದ್ದು, ಇವಿಷ್ಟು ಮಾತ್ರ ಯುವತಿ ಗುರುತು ಪತ್ತೆಗೆ ಆಸರೆಯಾಗಿದ್ದವು. ತಿಂಗಳಾದರೂ ಕೊಲೆ ಆರೋಪಿ ಯಾರು ಎಂದು ಗೊತ್ತಾಗಿರಲಿಲ್ಲ. ತಿಂಗಳ ಬಳಿಕ ಯುವತಿ ಗುರುತು ಪತ್ತೆಯಾಗಿದ್ದು, ಇಲ್ಲಿ ಕೊಲೆ‌ ಮಾಡಿದ್ದು ಪ್ರೀತಿ ಉನ್ನದ ಒಡಹುಟ್ಟಿದ ಸಹೋದರನೇ ಆಗಿರುವುದು ದುರಂತ.

ಹೌದು, ಸಹೋದರಿಯ ಅನೈತಿಕ ಸಂಬಂಧದಿಂದ ಊರಲ್ಲಿ ಮರ್ಯಾದೆ ಹಾಳಾಗುತ್ತಿದೆ ಎಂದು ಸಹೋದರ ಸಂತೋಷ್​ ಎಂಬಾತ ಸಹೋದರಿಯನ್ನೇ ಕತ್ತು ಹಿಸುಕಿ, ಕಲ್ಲಿನಿಂದ ತಲೆಯನ್ನ ಜಜ್ಜಿ ಕೊಲೆ ಮಾಡಿದ್ದಾನೆ. ತಂದೆ-ತಾಯಿ ಇಲ್ಲದ ಪ್ರೀತಿ ಹಾಗೂ ಸಹೋದರರು, ಬೀಳಗಿ ತಾಲ್ಲೂಕಿನ ಬಾಡಗಂಡಿ ಗ್ರಾಮದ ದೊಡ್ಡಮ್ಮ ರುಕ್ಮವ್ವಳ ಮನೆಯಲ್ಲಿ ಬೆಳೆದಿದ್ದರು. ಪ್ರೀತಿಗೆ 16 ವರ್ಷವಿದ್ದಾಗಲೇ ಬಾಲ್ಯವಿವಾಹವಾಗಿತ್ತು. ಆಗ ಕೇಸ್ ಕೂಡ ದಾಖಲಾಗಿತ್ತು. ಈ ಹಿನ್ನಲೆ ಗಂಡನ ಮನೆಗೆ ಹೋಗಿರಲಿಲ್ಲ. ಕಳೆದ ಮೂರು ವರ್ಷದಿಂದ ಸಹೋದರರ ಜೊತೆ ವಿಜಯಪುರ ಜಿಲ್ಲೆಯ ಕೊಲ್ಹಾರ ಗ್ರಾಮಕ್ಕೆ ಸ್ಥಳಾಂತರಗೊಂಡಿದ್ದರು.

ಇದನ್ನೂ ಓದಿ:ವಿವಾಹಿತ ಪುರುಷನೊಂದಿಗೆ ಯುವತಿ ನಾಪತ್ತೆ ಪ್ರಕರಣ: ಇಬ್ಬರ ಶವ ಕೆರೆಯಲ್ಲಿ ಪತ್ತೆ

ಅನೈತಿಕ ಸಂಬಂಧಕ್ಕೆ ಕೊಲೆ

ಪ್ರೀತಿ ಕುಡಿತದ ಚಟಕ್ಕೆ ಒಳಗಾಗಿದ್ದಳು. ಜೊತೆಗೆ ಕೆಲವರ ಜೊತೆ ಅನೈತಿಕ ಸಂಬಂಧ ಹೊಂದಿದ್ದಳಂತೆ. ಈ ಬಗ್ಗೆ ಎಷ್ಟು ಬಾರಿ ಬುದ್ದಿ ಹೇಳಿದರೂ ಕೇಳಿರಲಿಲ್ಲ. ಈಕೆಯ ವರ್ತನೆಗೆ ಊರಲ್ಲಿ ಸಹೋದರರು ತಲೆ ತಗ್ಗಿಸುವಂತಾಗಿದೆ. ಇದಕ್ಕೆ ಅಂತ್ಯ ಹಾಡಬೇಕೆಂದು ಸಂತೋಷ್​ ಪ್ಲಾನ್ ಮಾಡಿದ್ದ. ಬಾಲ್ಯ ವಿವಾಹವಾಗಿದ್ದ ಗಂಡನ ಮನೆಗೆ ಹೋಗೋಣ. ಹಿರಿಯರ ಸಮ್ಮುಖದಲ್ಲಿ ಬಿಡುಗಡೆ ಮಾಡಿಕೊಂಡು ಬರೋಣ. ನಂತರ ನಿನಗೆ ಬೇರೆ ಮದುವೆ ಮಾಡುತ್ತೇವೆ ಎಂದು ಬೀಳಗಿ ಕಡೆ ಕರೆದೊಯ್ದಿದ್ದ. ಅದೇ ಮಾರ್ಗದಲ್ಲಿ ಹಳೆ ಟಕ್ಕಳಕಿ ಬಳಿ ಪ್ರೀತಿಯ ಕತ್ತು ಹಿಸುಕಿ, ತಲೆ‌ ಮೇಲೆ‌ ಕಲ್ಲು ಎತ್ತಿ ಹಾಕಿ  ಕೊಲೆ‌ ಮಾಡಿದ್ದಾನೆ. ಆದರೆ, ಇದು ತಿಂಗಳಾದರೂ ಪತ್ತೆಯಾಗಿರಲಿಲ್ಲ.

ಬೀಳಗಿ ಪೊಲೀಸರು ಸ್ಮೈಲ್ ಎಂಬ ಬರಹ ಟಿ ಶರ್ಟ್, ಜೀನ್ಸ್, ಕಾಲಿಗೆ ಕಟ್ಟಿದ ದಾರ ಇವೆಲ್ಲ ಫೋಟೋ ತೆಗೆದು ಐದು ಜಿಲ್ಲೆಯ ವ್ಯಾಪ್ತಿಯ ಠಾಣೆಗಳಿಗೆ ರವಾನಿಸಿದ್ದರು‌. ಕೊನೆಗೂ ಕೊಲೆ ರಹಸ್ಯ ಭೇದಿಸುವಲ್ಲಿ ಸಫಲರಾಗಿದ್ದಾರೆ. ಪ್ರೀತಿಯನ್ನು ಸ್ವಂತ ಮಗಳಂತೆ ಜೋಪಾನ ಮಾಡಿದ್ದ ದೊಡ್ಡಮ್ಮ ಕಣ್ಣೀರು ಹಾಕುತ್ತಿದ್ದಾಳೆ. ಸದ್ಯ ಕೊಲೆ‌ ಮಾಡಿದ ಸಹೋದರ ಸಂತೋಷನನ್ನು ಬೀಳಗಿ ಪೊಲೀಸರು ಬಂಧಿಸಿದ್ದಾರೆ. ಅದೇನೆ ಇರಲಿ ಸಹೋದರಿಯ ಅನೈತಿಕ ಕೃತ್ಯಕ್ಕೆ ಆಕೆಯ ಕಥೆಯನ್ನೇ ಮುಗಿಸಿದ್ದು ವಿಪರ್ಯಾಸ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ