AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ ಕ್ರೈಂ ಡೈರಿ: ಆಕಾಶ್ ಮಠಪತಿ ಕೊಲೆ ಬೆನ್ನಲ್ಲೇ ಮತ್ತೊಂದು ಶವ ಪತ್ತೆ

ಹುಬ್ಬಳ್ಳಿ ನಗರದಲ್ಲಿ ನಿನ್ನೆಯಷ್ಟೇ ಆಟೋ ಚಾಲಕರ ಸಂಘದ ಅಧ್ಯಕ್ಷನ ಪುತ್ರ ಆಕಾಶ್ ಮಠಪತಿ ಕೊಲೆಯಾಗಿತ್ತು. ಇದರ ಬೆನ್ನಲ್ಲೇ ಇದೀಗ ಇಂದು ಮತ್ತೊಂದು ಶವ ಪತ್ತೆ ಆಗಿದೆ. ದುಷ್ಕರ್ಮಿಗಳು ಕೊಲೆ ಮಾಡಿ ಚರಂಡಿಯಲ್ಲಿ ಶವ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಕೇಸ್ ದಾಖಲಾಗಿದೆ.

ಹುಬ್ಬಳ್ಳಿ ಕ್ರೈಂ ಡೈರಿ: ಆಕಾಶ್ ಮಠಪತಿ ಕೊಲೆ ಬೆನ್ನಲ್ಲೇ ಮತ್ತೊಂದು ಶವ ಪತ್ತೆ
ಹುಬ್ಬಳ್ಳಿ ಕ್ರೈಂ ಡೈರಿ: ಆಕಾಶ್ ಮಠಪತಿ ಕೊಲೆ ಬೆನ್ನಲ್ಲೇ ಮತ್ತೊಂದು ಶವ ಪತ್ತೆ
ಶಿವಕುಮಾರ್ ಪತ್ತಾರ್
| Edited By: |

Updated on:Jun 23, 2024 | 6:40 PM

Share

ಹುಬ್ಬಳ್ಳಿ, ಜೂನ್​ 23: ನಗರದಲ್ಲಿ ನಿನ್ನೆ ಆಟೋ ಚಾಲಕರ ಸಂಘದ ಅಧ್ಯಕ್ಷನ ಪುತ್ರನನ್ನು ಕೊಲೆ ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಮತ್ತೊಬ್ಬ ವ್ಯಕ್ತಿಯ ಮೃತದೇಹ (dead body) ಪತ್ತೆ ಆಗಿದೆ. ಹುಬ್ಬಳ್ಳಿಯ (Hubballi) ಇಂದಿರಾನಗರದ ಚರಂಡಿಯಲ್ಲಿ ಸುಮಾರು 40 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆ ಆಗಿದೆ ದುಷ್ಕರ್ಮಿಗಳು ಕೊಲೆ ಮಾಡಿ ಚರಂಡಿಯಲ್ಲಿ ಶವ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಶವ ಪತ್ತೆ ಹಿನ್ನೆಲೆ ಸ್ಥಳೀಯರು ಆತಂಕಗೊಂಡಿದ್ದಾರೆ. ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಕೇಸ್ ದಾಖಲಾಗಿದೆ.

ನೇಣು ಬೀಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ: ಆತ್ಮಹತ್ಯೆ ಶಂಕೆ

ಮೈಸೂರು: ನೇಣು ಬೀಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ ಆಗಿರುವಂತಹ ಘಟನೆ ನಗರದ ಗೋಕುಲಂ ಬಡಾವಣೆಯಲ್ಲಿ ನಡೆದಿದೆ. ಮಲ್ಲಿಕಾ (47) ಮೃತ ದುರ್ದೈವಿ. ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.

ಇದನ್ನೂ ಓದಿ: ವಿವಾಹಿತ ಪುರುಷನೊಂದಿಗೆ ಯುವತಿ ನಾಪತ್ತೆ ಪ್ರಕರಣ: ಇಬ್ಬರ ಶವ ಕೆರೆಯಲ್ಲಿ ಪತ್ತೆ

ಗಂಡನಿಂದ ವಿಚ್ಛೇದನ ಪಡೆದು ಮಲ್ಲಿಕಾ ಒಂಟಿಯಾಗಿ ವಾಸ ಮಾಡುತ್ತಿದ್ದರು. ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾವಿಗೆ ಬಿದ್ದು ಮಹಿಳೆ ಸಾವು

ಬಾಗಲಕೋಟೆ: ಗಣಪತಿ ಗುಡಿ ಹತ್ತಿರದ ಬಾವಿಗೆ ಬಿದ್ದು ಮಹಿಳೆ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ತೇರದಾಳ ತಾಲ್ಲೂಕಿನ ರಬಕವಿಯಲ್ಲಿ ನಡೆದಿದೆ. ದ್ರಾಕ್ಷಾಯಣಿ (50) ಮೃತ ಮಹಿಳೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ ಆಕಾಶ್​ ಹಿರೇಮಠ ಕೊಲೆ ಪ್ರಕರಣ: 8 ಜನರ ಬಂಧನ

ಅಗ್ನಿಶಾಮಕ ದಳ ಸಹಾಯದಿಂದ ಪೊಲೀಸರು ಮೃತದೇಹವನ್ನು ಹೊರಗೆ ತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ. ತೆರದಾಳ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಾಕುವಿನಿಂದ ಕತ್ತು ಕುಯ್ದು ದೊಡ್ಡಮ್ಮನ ಹತ್ಯೆ

ಮಂಡ್ಯ: ಆನೆಕೆರೆ ಬೀದಿ ನಗರದಲ್ಲಿ ಚಾಕುವಿನಿಂದ ಚಾಕುವಿನಿಂದ ಕತ್ತು ಕುಯ್ದು ದೊಡ್ಡಮ್ಮನ ಹತ್ಯೆಗೈದಿರುವಂತಹ ಘಟನೆ ನಡೆದಿದೆ. ವೃದ್ಧೆ ಕೆಂಪಮ್ಮ(80) ಕೊಲೆಗೈದ ಆರೋಪಿ ಹರೀಶ್ ಪೊಲೀಸರಿಗೆ ಶರಣಾಗಿದ್ದಾನೆ. ಆರೋಪಿ ತಂದೆ ಜೊತೆಗೆ ಕಳೆದ ಹಲವು ವರ್ಷಗಳಿಂದ ವಾಸವಾಗಿದ್ದ ಕೆಂಪಮ್ಮ.

ಗಂಡ ತೀರಿಹೋದ ನಂತರ ಕೆಂಪಮ್ಮನಿಗೆ ಆಸರೆ ನೀಡಿದ್ದ ಆರೋಪಿ ತಂದೆ‌ ರಾಮಕೃಷ್ಣ. ತನ್ನ ತಾಯಿ ತಂದೆಯಿಂದ ಬೇರೆಯಾಗಲು ಕೆಂಪಮ್ಮ ಕಾರಣ ಎಂದು ದ್ವೇಷ ಇಟ್ಕೊಂಟು ಕುಡಿದ ಮತ್ತಿನಲ್ಲಿ ದೊಡ್ಡಮ್ಮನ ಹತ್ಯೆ ಮಾಡಲಾಗಿದೆ. ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:22 pm, Sun, 23 June 24