ಸರ್ಕಾರಿ ಆಸ್ಪತ್ರೆಗೂ ಬಂತು ಐವಿಎಫ್: ಸದ್ಯದಲ್ಲಿಯೇ ಕೆಸಿಜಿ ಆಸ್ಪತ್ರೆಯಲ್ಲಿ ಆರಂಭವಾಗಲಿದೆ ಚಿಕಿತ್ಸೆ

| Updated By: Ganapathi Sharma

Updated on: Dec 16, 2024 | 7:38 AM

ಬೆಂಗಳೂರಿನ ಬಡ ಮಹಿಳೆಯರಿಗೆ ಆರೋಗ್ಯ ಇಲಾಖೆಯಿಂದ ಗುಡ್ ನ್ಯೂಸ್ ದೊರೆತಿದೆ. ಮಕ್ಕಳಾಗದ ಬಡ ಮಹಿಳೆಯರಿಗೆ ಆರೋಗ್ಯ ಇಲಾಖೆ ಹೊಸ ಉಡುಗೊರೆ ನೀಡಲು ಮುಂದಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ದುಬಾರಿ ಐವಿಎಫ್ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಪರಿಚಯಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಸರ್ಕಾರಿ ಆಸ್ಪತ್ರೆಗೂ ಬಂತು ಐವಿಎಫ್: ಸದ್ಯದಲ್ಲಿಯೇ ಕೆಸಿಜಿ ಆಸ್ಪತ್ರೆಯಲ್ಲಿ ಆರಂಭವಾಗಲಿದೆ ಚಿಕಿತ್ಸೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಡಿಸೆಂಬರ್ 16: ಇತ್ತೀಚಿನ ದಿನಗಳಲ್ಲಿ ದಂಪತಿಗಳಿಗೆ ನಾನಾ ಕಾರಣಗಳಿಂದ ಮಕ್ಕಳಾಗುತ್ತಿಲ್ಲ. ಶೇ 20 ರಿಂದ 25 ರಷ್ಟು ಮಹಿಳೆಯರು ಗರ್ಭಧಾರಣೆ ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲೂ ತಡವಾಗಿ ಮದುವೆ, ಜೀವನದಲ್ಲಿನ ಜವಾಬ್ದಾರಿಗಳು, ಆರ್ಥಿಕತೆ, ಗಂಡ ಹೆಂಡತಿಯರ ನಡುವಿನ ಕೆಲಸದ ಒತ್ತಡ ಸೇರಿದಂತೆ ನಾನಾ ಕಾರಣಗಳಿಂದ ಹೆಚ್ಚಿನ ಪೋಷಕರು ಸಂತಾನ ಪಡೆಯುವಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ.

ಮಕ್ಕಳಗಾದ ಸಾಕಷ್ಟು ಪೋಷಕರು ಐವಿಎಫ್​ನಂತಹ ಚಿಕಿತ್ಸಾ ವಿಧಾನದ ಮೊರೆ ಹೋಗುತ್ತಿದ್ದಾರೆ. ಆದರೆ, ಇದಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಿದ್ದು ಬಡ ಹಾಗೂ ಮದ್ಯಮ ವರ್ಗದವರಿಗೆ ಈ ಚಿಕಿತ್ಸೆ ಕೈಗೆಟುಕದ್ದಾಗಿದೆ. ದಂಪತಿಗಳು ಇದೇ ಕಾರಣಕ್ಕೆ ಮಕ್ಕಳನ್ನು ಪಡೆಯಲು ಸಾಧ್ಯವಾಗದೇ ಸಂಕಷ್ಟ ಪಡುತ್ತಿದ್ದಾರೆ. ಇತಂಹ ಪೋಷಕರಿಗೆ ಈಗ ಆರೋಗ್ಯ ಇಲಾಖೆ ಗಿಫ್ಟ್ ನೀಡಲು ಮುಂದಾಗಿದೆ.

ಪ್ರಾರಂಭಿಕ ಹಂತದಲ್ಲಿ ಆರೋಗ್ಯ ಇಲಾಖೆ ಮಲ್ಲೇಶ್ವರಂ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಉಚಿತ ಐವಿಎಫ್ ಚಿಕಿತ್ಸೆ ನೀಡಲು ಚಿಂತನೆ ಮಾಡಿದ್ದು, ಈಗ ಈ ವಿಚಾರವಾಗಿ ಸಮಗ್ರವಾದ ವರದಿಯೂ ತಜ್ಞರಿಂದ ಸಲ್ಲಿಕೆಯಾಗಿದೆ.

ಇಷ್ಟು ದಿನ ಶ್ರೀಮಂತ ವರ್ಗದ ಜನರಿಗೆ ಮಾತ್ರ ಸಿಗುತ್ತಿದ್ದ IVF ಚಿಕಿತ್ಸೆ, ಇನ್ಮುಂದೆ ಬಡ ಹಾಗೂ ಮಧ್ಯಮ ವರ್ಗದವರಿಗೂ ಸಿಗಲಿದೆ ಎಂದು ಕೆಸಿ ಜನರಲ್ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ, ಹಾಗೂ ಐವಿಎಫ್ ಎಕ್ಸಪರ್ಟ್ ಡಾ ಶಶಿಕಲಾ ತಿಳಿಸಿದ್ದಾರೆ.

ಐವಿಎಫ್​ ಚಿಕಿತ್ಸೆ ಎಂದರೇನು?

ಐವಿಎಫ್ ಚಿಕಿತ್ಸೆ ಎಂದರೆ, ಅಂಡಾಣು ಮತ್ತು ವೀರ್ಯಾಣುವನ್ನು ದೇಹದ ಹೊರಗೆ ಫಲಿಸುವಂತೆ ಮಾಡುವುದು ಮತ್ತು ನಂತರ ಮಹಿಳೆಯ ಗರ್ಭಾಶಯಕ್ಕೆ ಇಂಜೆಕ್ಟ್ ಮಾಡುವ ಪ್ರಕ್ರಿಯೆಯಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಸಮಸ್ಯೆ ಪರಿಹಾರಕ್ಕೆ ಬೆಸ್ಟ್ ಐಡಿಯಾ ನೀಡಿದ ಐವರಿಗೆ ಸಿಕ್ತು 10 ಲಕ್ಷ ರೂ

ಒಟ್ಟಿನಲ್ಲಿ ಇಷ್ಟು ದಿನ ಬಡವರಿಗೆ ನಿಲುಕದ ಕನಸಾಗಿದ್ದ ಐವಿಎಫ್ ಚಿಕಿತ್ಸೆ ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಸಿಗಲಿದ್ದು, ಸಂಕಷ್ಟದಲ್ಲಿರುವ ಬಡ ಪೋಷಕರಿಗೆ ವರದಾನವಾಗಲಿದೆ. ಕೆಸಿಜಿ ಆಸ್ಪತ್ರೆಯ ಹೊಸ ಕಟ್ಟಡದಲ್ಲಿಯೂ ಐವಿಎಫ್ ಘಟಕಕ್ಕೂ ಸ್ಥಳವಕಾಶ ನೀಡಲು ಸರ್ಕಾರ ಮುಂದಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ