ಬೆಂಗಳೂರು: ಕೋರಮಂಗಲದ ಈ ಪ್ರದೇಶಗಳಲ್ಲಿ 2 ದಿನ ವಿದ್ಯುತ್​ ವ್ಯತ್ಯಯ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತುರ್ತು ನಿರ್ವಹಣಾ ಕಾರ್ಯದಿಂದಾಗಿ ಕೋರಮಂಗಲ ಸೇರಿದಂತೆ ಹಲವು ಪ್ರದೇಶಗಳಲ್ಲಿ ಡಿಸೆಂಬರ್ 17 ಮತ್ತು 18 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ವಿದ್ಯುತ್ ಕಡಿತವಾಗಲಿದೆ ಎಂದು ಘೋಷಿಸಿದೆ. ವಿದ್ಯುತ್​ ವ್ಯತ್ಯಯವಾಗುವ ಪ್ರದೇಶಗಳ ಪಟ್ಟಿ ಬೆಸ್ಕಾಂ ಬಿಡುಗಡೆ ಮಾಡಿದೆ. ಯಾವೆಲ್ಲ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ? ಇಲ್ಲಿದೆ ಮಾಹಿತಿ.

ಬೆಂಗಳೂರು: ಕೋರಮಂಗಲದ ಈ ಪ್ರದೇಶಗಳಲ್ಲಿ 2 ದಿನ ವಿದ್ಯುತ್​ ವ್ಯತ್ಯಯ
ವಿದ್ಯುತ್​ ವ್ಯತ್ಯಯ
Follow us
ವಿವೇಕ ಬಿರಾದಾರ
|

Updated on: Dec 16, 2024 | 8:25 AM

ಬೆಂಗಳೂರು, ಡಿಸೆಂಬರ್​ 16: ತುರ್ತು ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಬೆಂಗಳೂರಿನ (Bengaluru) ಕೋರಮಂಗಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ (Power Cut) ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ತಿಳಿಸಿದೆ. ಕೋರಮಂಗಲದಲ್ಲಿ ಮಂಗಳವಾರ (ಡಿಸೆಂಬರ್​ 17) ಮತ್ತು ಬುಧವಾರ (ಡಿಸೆಂಬರ್​ 18) ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್​ ಇರುವುದಿಲ್ಲ.

ವಿದ್ಯುತ್​ ವ್ಯತ್ಯಯವಾಗುವ ಪ್ರದೇಶಗಳು

ಸೇಂಟ್ ಜಾನ್ ವುಡ್ ಅಪಾರ್ಟ್‌ಮೆಂಟ್ ಆ್ಯಂಡ್ ಆಸ್ಪತ್ರೆ, ತಾವರೆಕೆರೆ, ಆಕ್ಸೆಂಚರ್, ಒರಕಲ್, ಕ್ರೈಸ್ಟ್ ಕಾಲೇಜು, ಬಿಟಿಎಂ ಲೇಔಟ್, ಮೆಜೆಸ್ಟಿಕ್ ಅಪಾರ್ಟ್‌ಮೆಂಟ್, ಅಕ್ಸಾ, ಆಸಿಸ್ ಭವನ್, ಸುದ್ದಗುಂಟೆ ಪಾಳ್ಯ, ಗುರಪ್ಪನ ಲೇಔಟ್, ವಿಕ್ಟೋರಿಯಾ ಲೇಔಟ್, ಪಾಮ್ ಗ್ರೂವ್ ರೋಡ್, ಬಾಲಾಜಿ ಥಿಯೆಟರ್​, ಅಗ್ರಂ ವಿವೇಕಾನಗರ, ಸಣ್ಣೆನಗಹಳ್ಳಿ, ವೋನ್ನರ್​, ಆಂಜನೇಯ ಟೆಂಪಲ್​ ಸ್ಟ್ರೀಟ್, ಕೆಎಸ್​ಆರ್​ಪಿ ಕ್ವಾಟ್ರಸ್​, ಲಿಂಡನ್​, ಯಲಂಗುಂಟೆ ಪಾಳ್ಯಮ್​, ಏರ್​​​ ಫೋರ್ಸ್​​, ರೋಡ್, ರುದ್ರಪ್ಪ ಗಾರ್ಡನ್, ಎಂ.ಜಿ ಗಾರ್ಡನ್, ಆಸ್ತಿನ್ ಟೌನ್, ನೀಲಸಂದ್ರ, ಬಜಾರ್​, ಆರ್​ಕೆ ಗಾರ್ಡನ್​​, ಬೆಂಗಳೂರು ಫರ್ನಿಚರ್​, ರೋಸ್​​ ಗಾರ್ಡನ್, ಒಆರ್. ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್​ ಕಟ್​​ ಆಗಲಿದೆ.

ವಿದ್ಯುತ್ ಸಂಬಂಧಿತ ದೂರುಗಳಿಗೆ ವಾಟ್ಸಾಪ್‌ ಸಹಾಯವಾಣಿ

ಬೆಂಗಳೂರು ನಗರ:- ದಕ್ಷಿಣ ವೃತ್ತ: 8277884011, ಪಶ್ಚಿಮ ವೃತ್ತ: 8277884012, ಪೂರ್ವ ವೃತ್ತ: 8277884013, ಉತ್ತರ ವೃತ್ತ: 8277884014

ಕೋಲಾರ: 8277884015, ಚಿಕ್ಕಬಳ್ಳಾಪುರ : 8277884016, ಬಿಆರ್​ಸಿ: 8277884017, ರಾಮನಗರ: 8277884018, ತುಮಕೂರು: 8277884019, ಚಿತ್ರದುರ್ಗ: 8277884020, ದಾವಣಗೆರೆ: 8277884021

ಇದನ್ನೂ ಓದಿ: ಕನಕಪುರ ರೋಡ್ ಜಂಕ್ಷನ್, ಕಾಮಾಕ್ಯ ಜಂಕ್ಷನ್​ನಲ್ಲಿ ನಿರ್ಮಾಣವಾಗಲಿದೆ ಡಬಲ್ ಡೆಕ್ಕರ್ ಫ್ಲೈಓವರ್

ತುರ್ತು ನಿರ್ವಹಣೆಗೆ ಆಧುನಿಕ ತಂತ್ರಜ್ಞಾನ

ದೋಷಪೂರಿತ ವಿದ್ಯುತ್ ಮಾರ್ಗಗಳ ತ್ವರಿತ ಕಾರ್ಯನಿರ್ವಹಣೆ ಹಾಗೂ ಉತ್ತಮ ಗುಣಮಟ್ಟದ ವಿದ್ಯುತ್‌ ಪೂರೈಕೆಗಾಗಿ, ಬೆಂಗಳೂರು ನಗರದಾದ್ಯಂತ ಎಲ್ಲ 11 ಕೆ.ವಿ. ವಿದ್ಯುತ್ ಮಾರ್ಗಗಳನ್ನು ಸ್ಕಾಡಾ ಹಾಗೂ ಡಿಎಂಎಸ್ ತಂತ್ರಜ್ಞಾನದ ಮೂಲಕ ಸ್ವಯಂಚಾಲಿತಗೊಳಿಸಲಾಗಿದೆ. ಪ್ರಸ್ತುತ ಈ ವ್ಯವಸ್ಥೆಯು 115 ವಿದ್ಯುತ್ ಉಪ ಸ್ಥಾವರಗಳು ಮತ್ತು 1,901 ವಿದ್ಯುತ್ ಫೀಡರ್‌ಗಳನ್ನು ಒಳಗೊಂಡಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ