ಡ್ರೋನ್ ಪ್ರತಾಪ್ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯ: ಮೂರು ದಿನಗಳ ವಿಚಾರಣೆಯಲ್ಲಿ ಪೊಲೀಸರಿಗೆ ಸಿಕ್ತು ಮಹತ್ವದ ಮಾಹಿತಿ

ಡ್ರೋನ್​ ವಿವಾದದಲ್ಲಿ ಕಳೆದುಕೊಂಡಿದ್ದ ಹೆಸರನ್ನು ಬಿಗ್​ಬಾಸ್​ಗೆ ಹೋದಮೇಲೆ ಗಳಿಸಿದ್ದ ಪ್ರತಾಪ್, ಈಗ ಜೀವನಕ್ಕೆ ತಾನೇ ಮತ್ತಷ್ಟು ಮಸಿ ಬಳಿದುಕೊಂಡಿದ್ದಾನೆ. ತುಮಕೂರು ‌ಜಿಲ್ಲೆ ಮಧುಗಿರಿ ತಾಲೂಕಿನ ಜನಕಲೋಟಿ ಬಳಿ ಕೃಷಿ ಹೊಂಡದಲ್ಲಿ ಸೋಡಿಯಂ ಸ್ಫೋಟಿಸಿದ್ದ ಪ್ರಕರಣವೇ ಪ್ರತಾಪ್​ಗೆ ದೊಡ್ಡ ಸಂಕಷ್ಟ ತಂದೊಡ್ಡಿದೆ. ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯವಾಗಿದ್ದು, ಆರೋಪ ಸಾಬೀತಾದ್ರೆ ಪ್ರತಾಪ್​ಗೆ 10 ವರ್ಷ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

ಡ್ರೋನ್ ಪ್ರತಾಪ್ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯ: ಮೂರು ದಿನಗಳ ವಿಚಾರಣೆಯಲ್ಲಿ ಪೊಲೀಸರಿಗೆ ಸಿಕ್ತು ಮಹತ್ವದ ಮಾಹಿತಿ
ಡ್ರೋನ್ ಪ್ರತಾಪ್
Follow us
ಮಹೇಶ್ ಇ, ಭೂಮನಹಳ್ಳಿ
| Updated By: Ganapathi Sharma

Updated on: Dec 16, 2024 | 9:09 AM

ತುಮಕೂರು, ಡಿಸೆಂಬರ್ 16: ತುಮಕೂರು ‌ಜಿಲ್ಲೆಯ ಮಧುಗಿರಿ ತಾಲೂಕಿನ ಜನಕಲೋಟಿ ಬಳಿ ಕೃಷಿ ಹೊಂಡಕ್ಕೆ ಸೋಡಿಯಂ ಎಸೆದು ಸ್ಫೋಟಿಸಿದ್ದ ಪ್ರಕರಣದಿಂದ ಡ್ರೋನ್ ಪ್ರತಾಪ್​ಗೆ ದೊಡ್ಡ ಸಂಕಷ್ಟವೇ ಎದುರಾಗಿದೆ. ಡ್ರೋನ್ ಪ್ರತಾಪ್ ಈಗ ಸೋಡಿಯಂ ಪ್ರತಾಪ್ ಆಗಿದ್ದಾನೆ! ಕಳೆದ ಮೂರು ದಿನಗಳಿಂದ ಡ್ರೋನ್ ಪ್ರತಾಪ್​ನನ್ನು ಮಿಡಿಗೇಶಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಭಾನುವಾರ ಇಡೀ‌ ದಿನ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದ ಪೊಲೀಸರು, ಡ್ರೋನ್ ಪ್ರತಾಪ್ ಮನೆ ಕಚೇರಿ ಹಾಗೂ ಸೋಡಿಯಂ ಖರೀದಿಸಿದ್ದ ಅಂಗಡಿಯಲ್ಲಿ ಮಹಜರ್ ಮಾಡಿದ್ದಾರೆ. ಜೊತೆಗೆ ವಿಡಿಯೋ ಚಿತ್ರಿಕರಿಸಿದ್ದ ಕ್ಯಾಮರಾಮನ್ ವಿನಯ್ ಹಾಗೂ ಸೋಡಿಯಂ ಖರೀದಿಗೆ ಸಹಕಾರ ‌ನೀಡಿದ್ದ ಪ್ರಜ್ವಲ್​ನನ್ನೂ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಡ್ರೋನ್ ಪ್ರತಾಪ್​ನನ್ನು ಪೊಲೀಸರು ಭಾನುವಾರ ಬೆಂಗಳೂರಿನ ‌ಕೊತ್ತನೂರು, ಜೆಪಿನಗರ ಹಾಗೂ ಅವೆನ್ಯೂ ರೋಡ್​ಗೆ ಕರೆದುಕೊಂಡು ಹೋಗಿ ಮಹಜರ್ ಮಾಡಿಕೊಂಡು ಬಂದಿದ್ದಾರೆ. ಡ್ರೋನ್ ಪ್ರತಾಪ್ ವಾಸವಿದ್ದ ಮನೆ ಕಚೇರಿ ಹಾಗೂ ಜೆಪಿನಗರದಲ್ಲಿ ಬ್ಲಾಸ್ಟ್ ಬಗ್ಗೆ ಚಿತ್ರೀಕರಿಸಿದ್ದ ಕ್ಯಾಮರಾ ವಶಕ್ಕೆ ಪಡೆದಿದ್ದಾರೆ. ಜೆಪಿ ನಗರದಲ್ಲಿ ಸಂಜು ಎಂಬುವರ ಮನೆಯಲ್ಲಿ ಕ್ಯಾಮರಾ ವಶಕ್ಕೆ ಪಡೆದಿದ್ದಾರೆ. ಬಳಿಕ ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿರುವ ‘ವಾಸ ಸೈಂಟಿಫಿಕ್ ಶಾಪ್’ಗೆ ತೆರಳಿ ಮಹಜರು ಮಾಡಿದ್ದಾರೆ.

ಸೋಡಿಯಂ ಖರೀದಿ ಮಾಡಿದ್ಹೇಗೆ ಡ್ರೋನ್ ಪ್ರತಾಪ್?

‘ವಾಸ ಸೈಂಟಿಫಿಕ್ ಶಾಪ್’ ಕಳೆದ 75 ವರ್ಷಗಳಿಂದ ಅಧಿಕೃತವಾಗಿ ಸೋಡಿಯಂ ವಿತ್ ಕೆಮಿಕಲ್ ಮಾರಾಟ ಮಾಡುವ ಅಂಗಡಿಯಾಗಿದೆ. ಶಾಲಾ ಕಾಲೇಜುಗಳಿಗೂ ಮೆಡಿಕಲ್ ಕಾಲೇಜುಗಳ ಲ್ಯಾಬ್​ಗಳಿಗೂ ಸೋಡಿಯಂ ಮಾರಾಟ ಮಾಡುವ ಅಂಗಡಿ ಇದಾಗಿದೆ. ಇಲ್ಲಿಂದ ಡ್ರೋನ್ ಪ್ರತಾಪ್ ತನ್ನ ಸ್ನೇಹಿತ ಪ್ರಜ್ವಲ್ ಮೂಲಕ ಸೋಡಿಯಂ ಖರೀದಿ ಮಾಡಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.

ತಡರಾತ್ರಿಯೇ‌ ಮಿಡಿಗೇಶಿ ಪೊಲೀಸರು ಕ್ಯಾಮರಾಮನ್ ವಿನಯ್ ‌ಹಾಗೂ ಮತ್ತೊಬ್ಬ ಸ್ನೇಹಿತ ಪ್ರಜ್ವಲ್​​ನನ್ನು ಬಂಧಿಸಿ ಸಂಪೂರ್ಣ ವಿಚಾರಣೆ ನಡೆಸುತ್ತಿದ್ದಾರೆ. ಜಿತೇಂದ್ರ ಕುಮಾರ್ ಜೈನ್​​ಗೆ ಪೊಲೀಸರು ‌ನೋಟಿಸ್ ನೀಡಲು ಸಿದ್ಧತೆ ಮಾಡಿದ್ದು, ಅವರನ್ನೂ ಬಂಧಿಸುವ ಸಾಧ್ಯತೆ ಇದೆ.

ಪೊಲೀಸ್ ಕಸ್ಟಡಿ ಅಂತ್ಯ

ಇಂದಿಗೆ ಪೊಲೀಸ್ ಕಸ್ಟಡಿ ಅಂತ್ಯವಾಗಲಿದ್ದು, ಬೆಳಿಗ್ಗೆ 11.30 ಕ್ಕೆ ಮಧುಗಿರಿ ನ್ಯಾಯಾಲಯಕ್ಕೆ ಡ್ರೋನ್ ಪ್ರತಾಪ್, ಕ್ಯಾಮರಾಮನ್ ವಿನಯ್ ಹಾಗೂ ಪ್ರಜ್ವಲ್​ರನ್ನು ಹಾಜರು ಪಡಿಸಲಾಗುತ್ತಿದೆ. ಸದ್ಯಕ್ಕೆ ಒಂದು ತಿಂಗಳ ವರೆಗೂ ಜಾಮೀನು ಸಿಗುವುದು ಅನುಮಾನ ಎನ್ನಲಾಗಿದೆ.

ಇದನ್ನೂ ಓದಿ: ಅತ್ತ ದರ್ಶನ್, ಅಲ್ಲು ಅರ್ಜುನ್​ಗೆ ಬೇಲ್, ಇತ್ತ ಡ್ರೋನ್ ಪ್ರತಾಪ್ ಪೊಲೀಸ್ ಕಸ್ಟಡಿಗೆ

Explosive substance act 1908 ಹಾಗೂ ಸೆಕ್ಸನ್ 3 ಜೊತೆಗೆ BNS 288 ಅಡಿ ಎಫ್​ಐಆರ್ ದಾಖಲಾಗಿದ್ದು, ಆರೋಪ ಸಾಬೀತಾದರೆ ಡ್ರೋನ್ ಪ್ರತಾಪ್ ಕನಿಷ್ಠ 10 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಬಹುದು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ