ಬೆಂಗಳೂರಿನ ಸಮಸ್ಯೆ ಪರಿಹಾರಕ್ಕೆ ಬೆಸ್ಟ್ ಐಡಿಯಾ ನೀಡಿದ ಐವರಿಗೆ ಸಿಕ್ತು 10 ಲಕ್ಷ ರೂ
ಅನ್‌ಬಾಕ್ಸಿಂಗ್ ಬೆಂಗಳೂರು ಮತ್ತು ನಿಖಿಲ್ ಕಾಮತ್ ಅವರ ಡಬ್ಲ್ಯೂಟಿ ಫಂಡ್ ನಡೆಸಿದ "ನಮ್ಮ ಬೆಂಗಳೂರು ಚಾಲೆಂಜ್"ನಲ್ಲಿ 5 ತಂಡಗಳು ವಿಜೇತರಾಗಿದ್ದಾರೆ. ಬೆಂಗಳೂರಿನ ಸಮಸ್ಯೆಗಳಿಗೆ ನವೀನ ಪರಿಹಾರಗಳನ್ನು ನೀಡಿದ ಈ ತಂಡಗಳಿಗೆ ತಲಾ 10 ಲಕ್ಷ ರೂ.ಗಳನ್ನು ನೀಡಲಾಗಿದೆ. ಜಲಮೂಲಗಳ ಪುನರುಜ್ಜೀವನ, ಮಹಿಳಾ ಸಬಲೀಕರಣ, ಪಾರದರ್ಶಕ ಆಟೋ ಮೀಟರ್‌ಗಳು ಮತ್ತು ತ್ಯಾಜ್ಯ ನಿರ್ವಹಣೆ ಮುಂತಾದ ವಿವಿಧ ಕ್ಷೇತ್ರಗಳನ್ನು ಈ ಯೋಜನೆಗಳು ಒಳಗೊಂಡಿವೆ.
ಬೆಂಗಳೂರು, ಡಿಸೆಂಬರ್ 15: ಅನ್‌ಬಾಕ್ಸಿಂಗ್ ಬೆಂಗಳೂರು ಹಾಗೂ ನಿಖಿಲ್ ಕಾಮತ್ ಅವರ ಡಬ್ಲ್ಯೂಟಿ ಫಂಡ್ ಸಹಯೋಗದೊಂದಿಗೆ ನಡೆದ “ನಮ್ಮ ಬೆಂಗಳೂರು ಚಾಲೆಂಜ್” (Namma Bengaluru Challenge) ಅನ್ನು 5 ಜನ ಗೆದ್ದಿದ್ದಾರೆ. ಬೆಂಗಳೂರು ಸಮಸ್ಯೆಗೆ ಪರಿಹಾರ ನೀಡಿ ಎಂದು “ನಮ್ಮ ಬೆಂಗಳೂರು ಚಾಲೆಂಜ್”ಅನ್ನು ಆಯೋಜನೆ ಮಾಡಲಾಗಿತ್ತು. ವಿಭಿನ್ನ ಆಲೋಚನೆಗಳಿಗೆ ತಲಾ 10 ಲಕ್ಷ ರೂ. ಅನುದಾನ ನೀಡುವಂತೆ ಘೋಷಣೆ ಮಾಡಲಾಗಿತ್ತು.
ಅನ್‌ಬಾಕ್ಸಿಂಗ್ ಬೆಂಗಳೂರು ಫೌಂಡೇಶನ್ ಮತ್ತು ನಿಖಿಲ್ ಕಾಮತ್ ಅವರ ಡಬ್ಲ್ಯೂಟಿ ಫಂಡ್ ನಮ್ಮ ಬೆಂಗಳೂರು ಚಾಲೆಂಜ್‌ನ ಐದು ವಿಜೇತರನ್ನು ಹೆಮ್ಮೆಯಿಂದ ಘೋಷಣೆ ಮಾಡಿದೆ. ಬಿಎಲ್‌ಆರ್ ಹಬ್ಬದಲ್ಲಿ ನಡೆದ ಬೆಂಗಳೂರು ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ ಫ್ಯೂಚರ್ಸ್ ಕಾನ್ಫರೆನ್ಸ್‌ನಲ್ಲಿ ವಿಜೇತರನ್ನು ಘೋಷಣೆ ಮಾಡಲಾಗಿದ್ದು, ಉತ್ತಮ ಐಡಿಯಾ ಮತ್ತು ದೂರದೃಷ್ಟಿಯ ಆಲೋಚನೆಯಗಳೊಂದಿಗೆ ಬಂದ 5 ತಂಡಗಳಿಗೆ ತಲ 10 ಲಕ್ಷ ರೂ. ಅನುದಾನ ನೀಡಲಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಬಯೋಸೈನ್ಸ್ ಆಂದೋಲನಕ್ಕಾಗಿ ಕಿರಣ್ ಮಜುಂದಾರ್-ಷಾಗೆ ಜಮ್ಶೆಡ್ಜಿ ಟಾಟಾ ಪ್ರಶಸ್ತಿ
ಅನುದಾನಿಗಳು ಬೆಂಗಳೂರು ನಗರದ ಸವಾಲುಗಳನ್ನು ನಿಭಾಯಿಸಲು ಮತ್ತು ನಗರದ ಅಭಿವೃದ್ಧಿಗೆ ಚಾಲನೆ ನೀಡುವ ಹೊಸ ಮತ್ತು ಸುಸ್ಥಿರ ಪರಿಹಾರಗಳನ್ನು ಕಾರ್ಯಗತಗೊಳಿಸುವ ಗುರಿಯನ್ನು ವಿಜೇತ ತಂಡಗಳು ಹೊಂದಿದ್ದಾರೆ.
ನವೆಂಬರ್ ತಿಂಗಳಲ್ಲಿ ಪ್ರಾರಂಭವಾದ ನಮ್ಮ ಬೆಂಗಳೂರು ಚಾಲೆಂಜ್‌ಗೆ ಸುಮಾರು 600 ರಿಜಿಸ್ಟ್ರೇಶನ್ ಆಗಿತ್ತು. ಬಳಿಕ Unboxing BLR ಫೌಂಡೇಶನ್ ಮತ್ತು WTFund ಕೊನೆಯದಾಗಿ 16 ಬೆಸ್ಟ್ ಐಡಿಯಾಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿತ್ತು. ಬಳಿಕ 8 ತಂಡವನ್ನು ಆಯ್ಕೆ ಮಾಡಿ ಕೊನೆಯದಾಗಿ 5 ತಂಡಗಳಿಗೆ ಅವಾರ್ಡ್ ನೀಡಲಾಗಿದೆ.
ಶುದ್ಧ ನೀರು
ಬೆಂಗಳೂರು ಜಲಮೂಲಗಳು ಸಂಸ್ಕರಿಸದ ಒಳಚರಂಡಿ, ಕೈಗಾರಿಕಾ ತ್ಯಾಜ್ಯ ಮತ್ತು ತೀವ್ರ ಮಾಲಿನ್ಯವನ್ನು ಎದುರಿಸುತ್ತಿವೆ. ಇದು ನೀರಿನ ಗುಣಮಟ್ಟವನ್ನು ಕಡಿಮೆ ಮಾಡಿದೆ. ವಾಟರ್‌ಬಾಡಿ ಪುನರುಜ್ಜೀವನ ಯೋಜನೆಯು ಈ ಪ್ರಮುಖ ಪರಿಸರ ವ್ಯವಸ್ಥೆಗಳನ್ನು ಪುನಃಸ್ಥಾಪಿಸಲು ಮತ್ತು ಕುಡಿಯುವ ನೀರಿನ ಗುಣಮಟ್ಟಕ್ಕೆ ತರಲು ಅದರ ಸಮರ್ಥನೀಯ, ಪ್ರಕೃತಿ ಆಧಾರಿತ ಪರಿಹಾರಗಳೊಂದಿಗೆ ಈ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.
ಮಹಿಳಾ ಶಕ್ತಿ ಎಲೆಕ್ಟ್ರಿಕ್ ಆಟೋ ಡ್ರೈವಿಂಗ್ ತರಬೇತಿ ಕಾರ್ಯಕ್ರಮ
ಮಹಿಳಾ ಶಕ್ತಿ ಕಾರ್ಯಕ್ರಮ ಸುರಕ್ಷಿತ ಮತ್ತು ಬೆಂಗಳೂರಿನ ಅಂತರವನ್ನು ಕಡಿಮೆ ಮಾಡುತ್ತದೆ. ಇದು ಪುರುಷ ಪ್ರಾಬಲ್ಯ ಕ್ಷೇತ್ರವನ್ನು ಪ್ರವೇಶಿಸಲು ಮಹಿಳೆಯರಿಗೆ ಸಹಕಾರಿಯಾಗಲಿದೆ.
ಆಟೋ ಮೀಟರ್
ಪಾರದರ್ಶಕ ಮತ್ತು ಸರ್ಕಾರದಿಂದ ಅನುಮೋದಿತ ಮೀಟರ್ ದರದ ಆಟೋರಿಕ್ಷಾ ಸೇವೆಗಳನ್ನು ನೀಡುವುದು. ಅನಾಹತ್ ಫೌಂಡೇಶನ್ – ನಗರ ಪ್ರದೇಶದ ಬಡವರಿಗಾಗಿ ಪ್ರಾಥಮಿಕ ಮತ್ತು ಆರೋಗ್ಯ ರಕ್ಷಣೆ ಸುಧಾರಿಸುವುದು. ಆರೋಗ್ಯ ಸೇವೆಯು ಎಲ್ಲಾ ನಾಗರಿಕರಿಗೆ ತಲುಪುವಂತೆ ಮಾಡುವುದು.
ಬದಲಾಗೋಣ
ಸುಸ್ಥಿರತೆಯ ತ್ಯಾಜ್ಯ ನಿರ್ವಹಣಾ ಯೋಜನೆದೃಷ್ಟಿ ಅವರು ಉತ್ಪಾದಿಸುವ ತ್ಯಾಜ್ಯಕ್ಕೆ ನಾಗರಿಕರನ್ನು ಹೊಣೆಗಾರರನ್ನಾಗಿ ಮಾಡುವ ಮೂಲಕ 1% ಕ್ಕಿಂತ ಕಡಿಮೆ ತ್ಯಾಜ್ಯವನ್ನು ವ್ಯವಸ್ಥಿತ ಗುಂಡಿಗಳಿಗೆ ಕಳುಹಿಸುವುದು. ನಾಗರಿಕರು ಮತ್ತು ಮುನ್ಸಿಪಲ್ ಕಾರ್ಪೊರೇಷನ್ ನಡುವೆ ಒಂದು ಸಹಕಾರ ಬೆಳೆಸುವುದು.
ಇದನ್ನೂ ಓದಿ: ಸ್ಟ್ರೀಟ್ ಫುಡ್ ವ್ಯಾಪಾರಿಗಳಿಗೆ ವಿಶೇಷ ತರಬೇತಿ: ಕರ್ನಾಟಕ ಆರೋಗ್ಯ ಇಲಾಖೆಯಿಂದ ಹೊಸ ಪ್ರಯತ್ನ
ಈ ಐದು ಬೆಸ್ಟ್ ಐಡಿಯಾಗಳನ್ನ ನೀಡಿದ ತಂಡಕ್ಕೆ ತಲಾ 10 ಲಕ್ಷ ರೂ. ನೀಡಲಾಗಿದೆ. ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ ಜೀರೋಧಾದ ಸಹ ಸಂಸ್ಥಾಪಕ ನಿಖಿಲ್ ಕಾಮತ್, ಬೆಂಗಳೂರು ನನಗೆ ತುಂಬಾ ನೀಡಿದೆ. ಅದರ ಪ್ರತಿಯಾಗಿ ಬೆಂಗಳೂರಿಗೆ ಏನಾದರೂ ನೀಡುವುದು ನನ್ನ ಮಾರ್ಗವಾಗಿದೆ. ಈ ಚಾಲೆಂಜ್ ಈ ನಗರದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಜನರನ್ನು ಒಟ್ಟುಗೂಡಿಸುತ್ತದೆ. ಇದರಲ್ಲಿ ಭಾಗವಹಿಸಿದ ಎಲ್ಲರಿಗೂ ದೊಡ್ಡ ಧನ್ಯವಾದಗಳು. ಈ ಆಲೋಚನೆಗಳು ಹೇಗೆ ವಿಕಸನಗೊಳ್ಳುತ್ತವೆ ಮತ್ತು ಮುಂಬರುವ ವರ್ಷಗಳಲ್ಲಿ ಬದಲಾವಣೆಯನ್ನು ಮಾಡುತ್ತವೆ ಎಂಬುದನ್ನು ನೋಡಲು ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.