ಚುನಾವಣೆ ಸೋತೆ, ಜೀವನದಲ್ಲೂ ಸೋತೆ: ರಾಜಕೀಯ ಬಗ್ಗೆ ರಮೇಶ್ ಕುಮಾರ್ ವೈರಾಗ್ಯದ ಮಾತು

ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ, ಮಾಜಿ ಸ್ಪೀಕರ್ ರಮೇಶ್ ಕುಮಾರ್​ 2023ರ ವಿಧಾನಸಭಾ ಚುನಾವಣೆ ಸೋಲಿನ ಬಳಿಕ ರಾಜ್ಯ ರಾಜಕಾರಣ ಹಾಗೂ ಪಕ್ಷದ ಕಾರ್ಯಚಟವಟಿಕೆಗಳಿಂದ ದುರು ಉಳಿದಿದ್ದಾರೆ. ವಿಧಾನಸಭೆ ಚುನಾವಣೆ ಮುಗಿದು ಒಂದು ವರ್ಷ ಕಳೆದರೂ ಸಹ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಳ್ಳದೇ ರಾಜಕೀಯ ನೇಪಥ್ಯಕ್ಕೆ ಸರಿದಿದ್ದ ರಮೇಶ್ ಕುಮಾರ್, ಕಳೆದ ಚುನಾವಣೆಯಲ್ಲಿ ತಮಗೆ ಮೋಸ ಮಾಡಿದವರ ವಿರುದ್ದ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ. ಅಲ್ಲದೇ ಈ ರಾಜಕೀಯ ಸಹವಾಸ ಸಾಕು ಎಂದು ಪರೋಕ್ಷವಾಗಿ ನಿವೃತ್ತಿ ಮಾತುಗಳನ್ನಾಡಿದ್ದಾರೆ.

ಚುನಾವಣೆ ಸೋತೆ, ಜೀವನದಲ್ಲೂ ಸೋತೆ: ರಾಜಕೀಯ ಬಗ್ಗೆ ರಮೇಶ್ ಕುಮಾರ್ ವೈರಾಗ್ಯದ ಮಾತು
ಮಾಜಿ ಸ್ಪೀಕರ್ ರಮೇಶ್ ಕುಮಾರ್
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ರಮೇಶ್ ಬಿ. ಜವಳಗೇರಾ

Updated on: Dec 15, 2024 | 6:22 PM

ಕೋಲಾರ, (ಡಿಸೆಂಬರ್ 15): ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಬಳಿಕ ರಾಜಕೀಯದಿಂದ ದೂರ ಉಳಿದಿದ್ದ ಮಾಜಿ ಸ್ಪೀಕರ್ ರಮೇಶ್​ ಕುಮಾರ್​ ಮತ್ತೆ ಸುದ್ದಿಯಲ್ಲಿದ್ದಾರೆ. ಕೋಲಾರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಜನ್ನಘಟ್ಟ ವೆಂಕಟಮುನಿಯಪ್ಪ ಒಂದನೇ ವರ್ಷದ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜಕೀಯ ಕುರಿತು ಬೇಸರದ ಭಾಷಣ ಮಾಡಿದ್ದಾರೆ. ಜೊತೆಗೆ ಕಳೆದ ಚುನಾವಣೆಯಲ್ಲಿ ತಮಗೆ ಮೋಸ ಮಾಡಿದವರ ವಿರುದ್ದ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.

ರಮೇಶ್ ಕುಮಾರ್ ಅವರು ಇತ್ತೀಚೆಗೆ ಯಾರ ಕೈಗೂ ಸಿಗುವುದಿಲ್ಲ ಎಂದು ಬಹಳ ಜನ ಮಾತಾಡ್ತಾರೆ. ಎಲ್ಲೂ ಬರುವುದೇ ಇಲ್ಲ. ಅಂತಾರೆ, ಆದ್ರೆ ಜೀವನದಲ್ಲಿ ಸೋತಿದ್ದೇನೆ, ಬದುಕಿನಲ್ಲಿ ಸೋತಾಗಿದೆ. ಮದುವೆ ಮುಂಜಿ, ರಥೋತ್ಸವ ಅದು ಇದು ಅಂತಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಬಹುದಿತ್ತು. ಮತ್ತೆ ಇನ್ನೊಂದು ಚುನಾವಣೆಗೆ ನಿಲ್ಲೋ ಆಸೆ ಇದ್ರೆ ಮಾತ್ರ, ಬಿಳಿ ಶರ್ಟ್ ಹಾಕಿಕೊಂಡು ಕಾಣಿಸಬಹುದಿತ್ತು .ಆದ್ರೆ ಜೀವನದಲ್ಲಿ ಸೋತೆ, ಚುನಾವಣೆಯಲ್ಲಿ ಸೋತಾಗಿದೆ ಎಂದು ಬೇಸರ ಹೊರಹಾಕಿದರು. ಈ ಮೂಲಕ ಪರೋಕ್ಷವಾಗಿ ರಾಜಕೀಯ ಸಹವಾಸ ಬೇಡ ಎನ್ನುವ ಅರ್ಥದಲ್ಲಿ ಹೇಳಿದರು.

ಇದನ್ನೂ ಓದಿ: ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ವಿರುದ್ಧ 64 ಎಕರೆ ಅರಣ್ಯ ಭೂಮಿ ಒತ್ತುವರಿ ಆರೋಪ 

ನಂಬಿಕೆ ದ್ರೋಹದಿಂದ ಸೋತೆ

ಚುನಾವಣೆಯಲ್ಲಿ ಸೋತು ನಾಲ್ಕಾಗಿತ್ತು. 5ನೇಯದು ಈ ಬಾರಿ ಆಗೋಯ್ತು.ಯಾಕೆ ಸೋತೆ ಅಂದ್ರೆ ನಂಬಿಕೆ ದ್ರೋಹ, ಜೊತೆಗೆ ಇದ್ದು, ಕೆಲಸ ಮಾಡಿ ಎಲ್ಲಾ ಸರಿ ಎಂದು ಹೇಳಿದವರು. ಗೊತ್ತೇ ಆಗಿಲ್ಲ ನನಗೆ ಯಾರೆಲ್ಲಾ ಮಹಾನುಭಾವರಿಗೆ ಕೃತಜ್ಞತೆಗಳು ಅರ್ಪಿಸಬೇಕು ಎಂದು ತಮ್ಮ ಸೋಲಿನ ಬಗ್ಗೆ ಪರೋಕ್ಷವಾಗಿ ಕೆಲವರಿಗೆ ಟಾಂಗ್ ಕೊಟ್ಟರು.

ಇನ್ನು ಬಹಳ‌ ಮುಖ್ಯವಾಗಿ ಮೊದಲನೆಯದಾಗಿ ವೆಂಕಟಮುನಿಯಣ್ಣ ಹಾಗೂ ತಿಮ್ಮರಾಯಣ್ಣ ಕುಟುಂಬಕ್ಕೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಎರಡನೆಯದಾಗಿ ಯೋಗ್ಯತೆ ಇದ್ದವರು, ಇಲ್ಲದವರು ಅನಿಲ್ ಕುಮಾರ್ ಅಂತಹವರ ಕಾರ್ಯಕ್ರಮ ಮಾಡಿ ನನ್ನನ್ನು ಕರೆಸಿಕೊಂಡಿದ್ದೀರಾ ನಿಮಗೆ ಕೋಟಿ ಕೋಟಿ ನಮಸ್ಕಾರಗಳು. ಮೂರನೇಯದಾಗಿ ಒಳ್ಳೆದು ಮಾಡಿದ್ರು, ಕೆಟ್ಟದು ಮಾಡಿದ್ರು ನನ್ನನ್ನೆ ಸರ್ವಸ್ವ ಅಂದು ಕೆಲವರು ನಂಬಿಕೊಂಡು ಬಿಟ್ರು ಅವರಿಗೂ ನಾನು ಕೋಟಿ ಕೋಟಿ ಕೃತಜ್ಞತೆಗಳು ಎಂದರು.

ಕತ್ತಿಗೆ ಕತ್ತಿ ಇಟ್ಟವರಿಗೆ ಕೃತಜ್ಞತೆ ಎಂದ ರಮೇಶ್ ಕುಮಾರ್

ಇವರೆಲ್ಲ ಮುಖ್ಯ ಅಲ್ಲ ನಾಲ್ಕನೇ ಗುಂಪಿದೆ. ಅವರು ಊಟಕ್ಕೆ ಕರೆದು ವಿಷ ಹಾಕಿದವರು. ಭುಜದ ಮೇಲೆ ಕೈ ಹಾಕಿ ಬೆನ್ನ ಹಿಂದೆ ತಿವಿದವರು. ಜೊತೆಯಲ್ಲಿ ಇದ್ದು ಕಾಲಿಗೆ ಅಡ್ಡ ಇಟ್ಟು ಬೀಳಿಸಿದವರು. ದೇವರಿಗೆ ನಮಸ್ಕಾರ ಮಾಡಕ್ಕೆ ಮಲಗಿದ್ದಾಗ ಕತ್ತಿಗೆ ಕತ್ತಿ ಇಟ್ಟವರಿಗೆ ಕೃತಜ್ಞತೆ ಅರ್ಪಿಸಿ ಭಗವಂತ ಇವರನ್ನ ಕಾಪಾಡಪ್ಪ ಎಂದು ಹೇಳಿದರು. ಈ ಮೂಲಕ ಯಾರೋಬ್ಬರ ಹೆಸರು ಹೇಳದೆ ತಮ್ಮ ಸೋಲಿಗೆ ಕಾರಣರಾದ ಸ್ವಪಕ್ಷದವರಿಗೆ ತಿವಿದರು.

ಇನ್ನು ಕಡೆ ಪಕ್ಷ ನನ್ನ ಮುಖ ನೋಡಲಿ ಎಂದು, ಮುಂದೆ ಇರುತ್ತೇನೋ ಇಲ್ಲೋ ಎನ್ನುವ ಕಾರಣಕ್ಕೆ ಕಾರ್ಯಕ್ರಮಕ್ಕೆ ಬಂದೆ ಎಂದು ಭಾಷಣದ ಉದ್ದಕ್ಕೂ ರಮೇಶ್ ಕುಮಾರ್ ಬೇಸರದ ಮಾತುಗಳನ್ನಾಡಿದರು. ಅಲ್ಲದೇ ಇವರ ಭಾಷಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಜಕೀಯದಿಂದ ದೂರ ಉಳಿಯುವ ತೀರ್ಮಾನ ಮಾಡಿದಂತಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ