ಭಾರತದಲ್ಲಿ ಬಯೋಸೈನ್ಸ್ ಆಂದೋಲನಕ್ಕಾಗಿ ಕಿರಣ್ ಮಜುಂದಾರ್-ಷಾಗೆ ಜಮ್ಶೆಡ್ಜಿ ಟಾಟಾ ಪ್ರಶಸ್ತಿ

ಬಯೋಕಾನ್ ಸಮೂಹದ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ಅವರಿಗೆ ಇಂಡಿಯನ್ ಸೊಸೈಟಿ ಫಾರ್ ಕ್ವಾಲಿಟಿ (ISQ)ಯಿಂದ ಪ್ರತಿಷ್ಠಿತ ಜಮ್ಶೆಡ್ಜಿ ಟಾಟಾ ಪ್ರಶಸ್ತಿಯನ್ನು ನೀಡಲಾಗಿದೆ. ಭಾರತದಲ್ಲಿ ಜೈವಿಕ ವಿಜ್ಞಾನದ ಅಭಿವೃದ್ಧಿಗೆ ಅವರ ಕೊಡುಗೆಯನ್ನು ಗೌರವಿಸಿ ಈ ಪ್ರಶಸ್ತಿ ನೀಡಲಾಗಿದೆ. ಬೆಂಗಳೂರಿನಲ್ಲಿ ನಡೆದ ISQ ವಾರ್ಷಿಕ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕಿರಣ್ ಮಜುಂದಾರ್ ಷಾ ಅವರು ಈ ಗೌರವಕ್ಕೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಬಯೋಸೈನ್ಸ್ ಆಂದೋಲನಕ್ಕಾಗಿ ಕಿರಣ್ ಮಜುಂದಾರ್-ಷಾಗೆ ಜಮ್ಶೆಡ್ಜಿ ಟಾಟಾ ಪ್ರಶಸ್ತಿ
ಭಾರತದಲ್ಲಿ ಬಯೋಸೈನ್ಸ್ ಆಂದೋಲನಕ್ಕಾಗಿ ಕಿರಣ್ ಮಜುಂದಾರ್-ಷಾಗೆ ಜಮ್ಶೆಡ್ಜಿ ಟಾಟಾ ಪ್ರಶಸ್ತಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Dec 14, 2024 | 6:37 PM

ಬೆಂಗಳೂರು, ಡಿಸೆಂಬರ್​ 14: ಬಯೋಕಾನ್ ಸಮೂಹದ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ (Kiran Mazumdar-Shaw) ಅವರು ಭಾರತದಲ್ಲಿ ಜೈವಿಕ ವಿಜ್ಞಾನದ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಇಂಡಿಯನ್ ಸೊಸೈಟಿ ಫಾರ್ ಕ್ಯಾಲಿಟಿ (ISQ) ಯು ಪ್ರತಿಷ್ಠಿತ ‘ಜಮ್ಶೆಡ್ಜಿ ಟಾಟಾ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗಿದೆ.

ಬೆಂಗಳೂರಿನಲ್ಲಿ ನಡೆದ ಐಎಸ್​ಕ್ಯೂ ವಾರ್ಷಿಕ ಸಮ್ಮೇಳನ -2024ರಲ್ಲಿ ಪ್ರಶಸ್ತಿ ನೀಡಲಾಗಿದೆ. ಐಎಸ್​ಕ್ಯೂನಿಂದ 2004 ರಲ್ಲಿ ಸ್ಥಾಪಿಸಲಾದ ಜಮ್ಶೆಡ್ಜಿ ಟಾಟಾ ಪ್ರಶಸ್ತಿಯನ್ನು ‘ಆಧುನಿಕ ಭಾರತೀಯ ಕೈಗಾರಿಕಾ ಪಿತಾಮಹ‌ ಎಂದು ಕರೆಯುವ ಜಮ್ಶೆಡ್ಜಿ ಟಾಟಾ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಭಾರತೀಯ ಸಮಾಜಕ್ಕೆ ಗುಣಮಟ್ಟ, ಬದ್ಧತೆ ಮತ್ತು ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಉದ್ಯಮಿಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಇದನ್ನೂ ಓದಿ: ಸ್ಟ್ರೀಟ್ ಫುಡ್ ವ್ಯಾಪಾರಿಗಳಿಗೆ ವಿಶೇಷ ತರಬೇತಿ: ಕರ್ನಾಟಕ ಆರೋಗ್ಯ ಇಲಾಖೆಯಿಂದ ಹೊಸ ಪ್ರಯತ್ನ

ಐಎಸ್​ಕ್ಯೂ ಅಧ್ಯಕ್ಷ ಮತ್ತು ಟಿಕ್ಯೂಎಂ ಅಂತಾರಾಷ್ಟ್ರೀಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕಿರಣ್ ಜನಕ್ ಕುಮಾರ್ ಮೆಹ್ತಾ ಮಾತನಾಡಿ, 1978 ರಿಂದ ಭಾರತದಲ್ಲಿ ಜೀವ ವಿಜ್ಞಾನ ಆಂದೋಲನದಲ್ಲಿ ಮುಂಚೂನಿಯಲ್ಲಿರುವ ಕಿರಣ್ ಮಜುಂದಾರ್ ಷಾ ಅವರಿಗೆ ಈ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಗ್ರಾಹಕರಿಗೆ ಸೇವೆ ಸಲ್ಲಿಸಲು ಬಯೋಕಾನ್ ಲಿಮಿಟೆಡ್ ಮತ್ತು ಸಂಬಂಧಿತ ಕಂಪನಿಗಳನ್ನು ಸ್ಥಾಪಿಸುವ ಮೂಲಕ ಸಮಾಜಕ್ಕೆ ಅಪಾರ ಒಳಿತನ್ನು ಮಾಡಿದ್ದಾರೆ. ನಿಮ್ಮ ಮಹೋನ್ನತ ಕಾರ್ಯ ಭಾರತವನ್ನು ವಿಶ್ವದಲ್ಲಿ ಮಿಂಚುವಂತೆ ಮಾಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್: ಹೊಸ ವರ್ಷದಿಂದ ಮೆಟ್ರೋ ಟಿಕೆಟ್ ದರ ಹೆಚ್ಚಳ ಬಹುತೇಕ ಖಚಿತ

ಬಯೋಕಾನ್ ಗ್ರೂಪ್ ಅಧ್ಯಕ್ಷೆ ಕಿರಣ್ ಮಜುಂದಾರ್- ಷಾ ಮಾತನಾಡಿ, ನಾನು ಈ ಗೌರವಕ್ಕೆ ಭಾಜನರಾಗಿದ್ದಕ್ಕೆ ಆಭಾರಿಯಾಗಿದ್ದೇನೆ. ISQ ಸ್ಥಾಪಿಸಿದ 2024 ರ ಜಮ್ಶೆಡ್ಜಿ ಟಾಟಾ ಪ್ರಶಸ್ತಿಯನ್ನು ಸ್ವೀಕರಿಸಲು ವಿನೀತರಾಗಿದ್ದೇವೆ. ಈ ಪ್ರಶಸ್ತಿಯು ನನಗೆ ಬಹಳ ವಿಶೇಷವಾದುದಾಗಿದೆ. ಏಕೆಂದರೆ ಈ ಪ್ರಶಸ್ತಿಯು ಭಾರತದ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರ ಹೆಸರನ್ನು ಹೊಂದಿದೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಧರಣಿಯಲ್ಲಿ ಪಾಲ್ಗೊಂಡ ಸಚಿವೆಯನ್ನು ಸಿಎಂ ಸಸ್ಪೆಂಡ್ ಮಾಡಲಿ: ಸ್ವಾಮೀಜಿ
ಧರಣಿಯಲ್ಲಿ ಪಾಲ್ಗೊಂಡ ಸಚಿವೆಯನ್ನು ಸಿಎಂ ಸಸ್ಪೆಂಡ್ ಮಾಡಲಿ: ಸ್ವಾಮೀಜಿ
ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ಕಿಚ್ಚ ತೋರಲಿದ್ದಾರೆ ದಾರಿ
ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ಕಿಚ್ಚ ತೋರಲಿದ್ದಾರೆ ದಾರಿ
ನಮ್ಮ ಹೋರಾಟಗಳನ್ನು ನಿಲ್ಲಿಸುವ ವ್ಯರ್ಥ ಪ್ರಯತ್ನ ಸರ್ಕಾರ ಮಾಡ್ತಿದೆ: ಅಶೋಕ
ನಮ್ಮ ಹೋರಾಟಗಳನ್ನು ನಿಲ್ಲಿಸುವ ವ್ಯರ್ಥ ಪ್ರಯತ್ನ ಸರ್ಕಾರ ಮಾಡ್ತಿದೆ: ಅಶೋಕ
ಅಲ್ಲು ಅರ್ಜುನ್ ಬಂಧನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಗುಂಡೂರಾವ್
ಅಲ್ಲು ಅರ್ಜುನ್ ಬಂಧನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಗುಂಡೂರಾವ್
ಶಿಕ್ಷೆ ಕೊಡಿಸಲು ಜೈಲಿಂದ ತಪ್ಪಿಸಿಕೊಂಡ ಚೈತ್ರಾ-ತ್ರಿವಿಕ್ರಂ
ಶಿಕ್ಷೆ ಕೊಡಿಸಲು ಜೈಲಿಂದ ತಪ್ಪಿಸಿಕೊಂಡ ಚೈತ್ರಾ-ತ್ರಿವಿಕ್ರಂ
ಸತತ 33 ಗಂಟೆ 33 ನಿಮಿಷ ಹನುಮಾನ್ ಚಾಲಿಸ್ ಪಾರಾಯಣ: ಗಿನ್ನಿಸ್​ ದಾಖಲೆ
ಸತತ 33 ಗಂಟೆ 33 ನಿಮಿಷ ಹನುಮಾನ್ ಚಾಲಿಸ್ ಪಾರಾಯಣ: ಗಿನ್ನಿಸ್​ ದಾಖಲೆ
ನಟ ದರ್ಶನ್ 45 ದಿನಗಳಿಂದ ಹೊರಗಿದ್ದರೂ ಭೇಟಿಯ ಪ್ರಯತ್ನ ಮಾಡಿಲ್ಲ
ನಟ ದರ್ಶನ್ 45 ದಿನಗಳಿಂದ ಹೊರಗಿದ್ದರೂ ಭೇಟಿಯ ಪ್ರಯತ್ನ ಮಾಡಿಲ್ಲ
ಗದಗ: ಗೃಹಲಕ್ಷ್ಮಿ ಹಣದಿಂದ ಬೋರ್​ವೆಲ್ ಕೊರೆಸಿದ ಅತ್ತೆ, ಸೊಸೆ!
ಗದಗ: ಗೃಹಲಕ್ಷ್ಮಿ ಹಣದಿಂದ ಬೋರ್​ವೆಲ್ ಕೊರೆಸಿದ ಅತ್ತೆ, ಸೊಸೆ!
ಇಂಥ ಎಫ್​ಐಆರ್​ಗಳನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಲ್ಲ: ಶೆಟ್ಟರ್
ಇಂಥ ಎಫ್​ಐಆರ್​ಗಳನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಲ್ಲ: ಶೆಟ್ಟರ್
ಪತ್ನಿ ಮತ್ತು ಮಕ್ಕಳು ಓಡಿ ಬಂದು ಅರ್ಜುನ್​ರನ್ನು ತಬ್ಬಿಕೊಂಡರು!
ಪತ್ನಿ ಮತ್ತು ಮಕ್ಕಳು ಓಡಿ ಬಂದು ಅರ್ಜುನ್​ರನ್ನು ತಬ್ಬಿಕೊಂಡರು!