ರಾಮನಗರ: ನಾಯಿಯನ್ನೂ ಬಿಡದ ಕಾಮುಕರು: ಅಸಭ್ಯ ವರ್ತನೆ
ರಾಮನಗರದ ಚನ್ನಪಟ್ಟಣದಲ್ಲಿ ನಾಯಿಯೊಂದಿಗೆ ಅನೈಸರ್ಗಿಕ ಲೈಂಗಿಕ ಕೃತ್ಯ ನಡೆಸುತ್ತಿದ್ದ ಬಳ್ಳಾರಿ ಮೂಲದ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ವ್ಯಕ್ತಿಗೆ ಸ್ಥಳೀಯರ ಧರ್ಮದೇಟು ಕೂಡ ನೀಡಿದ್ದಾರೆ. ಪ್ರಕರಣ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಈ ಘಟನೆಯಿಂದ ಜನರಲ್ಲಿ ಆಕ್ರೋಶ ವ್ಯಕ್ತವಾಗಿದೆ.
ರಾಮನಗರ, ಡಿಸೆಂಬರ್ 14: ರಾಜ್ಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಅಸಭ್ಯ ವರ್ತನೆ, ಕಿರುಕುಳದಂತಹ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಈ ಮಧ್ಯೆ ಕೆಲ ಕಾಮುಕರು ಪ್ರಾಣಿಗಳನ್ನು (animals) ಬಳಸಿಕೊಂಡು ಅನೈಸರ್ಗಿಕ ಲೈಂಗಿಕಕ್ರಿಯೆಯಲ್ಲಿ ತೊಡಗುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ಇಂತಹದೊಂದು ಘಟನೆ ನಡೆದ ಬೆನ್ನಲ್ಲೇ ಇದೀಗ ರಾಮನಗರದಲ್ಲೂ ನಡೆದಿದೆ.
ಸ್ಥಳೀಯರಿಂದ ಧರ್ಮದೇಟು
ನಾಯಿಯೊಂದಿಗೆ ಅನೈಸರ್ಗಿಕ ಲೈಂಗಿಕಕ್ರಿಯೆ ಮಾಡುತ್ತಿದ್ದ ವ್ಯಕ್ತಿಗೆ ಸ್ಥಳೀಯರು ಧರ್ಮದೇಟು ನೀಡಿರುವಂತಹ ಘಟನೆ ಜಿಲ್ಲೆಯ ಚನ್ನಪಟ್ಟಣ ಸಾತನೂರು ರಸ್ತೆ ಬಳಿ ನಡೆದಿದೆ. ಬಳ್ಳಾರಿ ಮೂಲದ ಬಸವ ಎಂಬ ವ್ಯಕ್ತಿಯಿಂದ ವಿಕೃತಿ ಮೆರೆಯಲಾಗಿದೆ. ಸದ್ಯ ಬಸವನನ್ನು ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಬೀದಿ ನಾಯಿ ಜೊತೆ ಅಸಭ್ಯವಾಗಿ ವರ್ತಿಸಿ ಅತ್ಯಾಚಾರ ಯತ್ನ, ಕೊಪ್ಪದಲ್ಲಿ ಯುವಕನ ವಿರುದ್ಧ ಎಫ್ಐಆರ್
ನಿರ್ಜನ ಪ್ರದೇಶದಲ್ಲಿ ನಾಯಿ ಕಟ್ಟಿ ಹಾಕಿದ್ದ ಬಸವ, ಬಳಿಕ ಅದರ ಜೊತೆ ಅನೈಸರ್ಗಿಕ ಲೈಂಗಿಕಕ್ರಿಯೆ ಮಾಡುತ್ತಿದ್ದ. ಇದನ್ನು ಸ್ಥಳೀಯರು ಗಮನಿಸಿದ್ದಾರೆ. ನಾಯಿಯೊಂದಿಗೆ ಸಂಭೋಗ ಮಾಡುವಾಗಲೇ ಸಿಕ್ಕಬಿದ್ದ ಬಸವನಿಗೆ ಸ್ಥಳೀಯರು ಥಳಿಸಿದ್ದಾರೆ.
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಸವನನ್ನು ವಿಚಾರಣೆ ಮಾಡಲಾಗಿದ್ದು, ಪ್ರಕರಣ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ.
ಕುಡಿದ ಮತ್ತಿನಲ್ಲಿ ಬೀದಿ ನಾಯಿಯ ಮೇಲೆ ಅಸಹಜ ಲೈಂಗಿಕಕ್ರಿಯೆ: ಯುವಕನ ವಿರುದ್ಧ ಎಫ್ಐಆರ್
ಇನ್ನು ಇತ್ತೀಚೆಗೆ ಕಾಫಿ ನಾಡು ಚಿಕ್ಕಮಗಳೂರಿನಲ್ಲೂ ಇಂತಹದೊಂದು ಘಟನೆ ನಡೆದಿತ್ತು. ಯುವಕನೊಬ್ಬ ಬೀದಿ ನಾಯಿ ಜತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಕೇಳಿಬಂದಿತ್ತು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆತನ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
ಇದನ್ನೂ ಓದಿ: ಬೆಂಗಳೂರು ನಮ್ಮ ಮೆಟ್ರೋದಲ್ಲಿ ರೊಮ್ಯಾನ್ಸ್: ಯುವಕ-ಯುವತಿ ವಿರುದ್ಧ ಪ್ರಯಾಣಿಕ ಆಕ್ರೋಶ
ಬೀದಿ ನಾಯಿಗಳ ಜೊತೆ ಯುವಕ ಅಸಭ್ಯವಾಗಿ ವರ್ತಿಸುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಜಯಪುರ ಪಟ್ಟಣದ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಸ್ವಯಂಪ್ರೇರಿತವಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ನವೆಂಬರ್ 9ರಂದು ಕೃತ್ಯದ ವಿಡಿಯೋ ಬೆಳಕಿಗೆ ಬಂದಿದ್ದು, ಸಿಸಿಟಿವಿ ದೃಶ್ಯದ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸ್ ಕಾನ್ಸ್ಟೇಬಲ್ ನೀಡಿದ ದೂರಿನ ಮೆರೆಗೆ ಎಫ್ಐಆರ್ ದಾಖಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:13 pm, Sat, 14 December 24