AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ; 33 ಡಿವೈಎಸ್ಪಿಗಳು, 132 ಇನ್ಸ್​​ಪೆಕ್ಟರ್​ಗಳ ವರ್ಗಾವಣೆ

ಓರ್ವ DySP ವರ್ಗಾವಣೆ ರದ್ದು ಮಾಡಿ 33 ಡಿವೈಎಸ್ಪಿಗಳು, 132 ಇನ್ಸ್ ಪೆಕ್ಟರ್​ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಯು.ಡಿ.ಕೃಷ್ಣಕುಮಾರ್-ಡಿವೈಎಸ್​ಪಿ, ಬಿಡಿಎ, ಬೆಂಗಳೂರು. ಟಿ.ಎಂ.ಶಿವಕುಮಾರ್-ಎಸಿಪಿ, ಮಡಿವಾಳ ಉಪವಿಭಾಗ. ಹೆಚ್.ಬಿ.ರಮೇಶ್ ಕುಮಾರ್-ACP ಸೇರಿ 33 ಡಿವೈಎಸ್ಪಿಗಳ ವರ್ಗಾವಣೆ ಮಾಡಲಾಗಿದೆ.

ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ; 33 ಡಿವೈಎಸ್ಪಿಗಳು, 132 ಇನ್ಸ್​​ಪೆಕ್ಟರ್​ಗಳ ವರ್ಗಾವಣೆ
ವಿಧಾನಸೌಧ
Jagadisha B
| Edited By: |

Updated on:Jan 30, 2024 | 9:26 AM

Share

ಬೆಂಗಳೂರು, ಜ.30: ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ (Karnataka Police Department) ಭಾರೀ ವರ್ಗಾವಣೆ ಮಾಡಿದ್ದು, ಓರ್ವ DySP ವರ್ಗಾವಣೆ ರದ್ದು ಮಾಡಿ 33 ಡಿವೈಎಸ್ಪಿಗಳು, 132 ಇನ್ಸ್ ಪೆಕ್ಟರ್​ಗಳನ್ನು ವರ್ಗಾವಣೆ ಮಾಡಿದೆ. ಜೊತೆಗೆ ಹೊಸದಾಗಿ ಸೃಷ್ಟಿಯಾದ ಹುದ್ದೆಗಳಿಗೂ ನೇಮಕ ಮಾಡಿ ಸರ್ಕಾರ (Karnataka Government) ಆದೇಶ ಹೊರಡಿಸಿದೆ.

ಯು.ಡಿ.ಕೃಷ್ಣಕುಮಾರ್-ಡಿವೈಎಸ್​ಪಿ, ಬಿಡಿಎ, ಬೆಂಗಳೂರು. ಟಿ.ಎಂ.ಶಿವಕುಮಾರ್-ಎಸಿಪಿ, ಮಡಿವಾಳ ಉಪವಿಭಾಗ. ಹೆಚ್.ಬಿ.ರಮೇಶ್ ಕುಮಾರ್-ACP, ವಿವಿ ಪುರಂ ಉಪವಿಭಾಗ. ಎಂ.ಎನ್.ನಾಗರಾಜ್-ಎಸಿಪಿ, ಸಿಸಿಬಿ ಬೆಂಗಳೂರು. ಅನುಷಾರಾಣಿ-ACP, ಡಿಸಿಆರ್​ಇ, ಮೈಸೂರು ಸೇರಿದಂತೆ ಒಟ್ಟು 33 DySPಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಸಂಪಂಗಿರಾಮನಗರ ಪೊಲೀಸ್​ ಠಾಣೆ ಇನ್ಸ್​ಪೆಕ್ಟರ್ ರವಿಕಿರಣ್, ರಾಮನಗರ ಕುಂಬಳಗೋಡು ಠಾಣೆ ಇನ್ಸ್​​ಪೆಕ್ಟರ್ ಮಂಜುನಾಥ್ ಜಿ ಹೂಗಾರ್. ಕಾಟನ್​ಪೇಟೆ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ನರೇಂದ್ರ ಬಾಬು, ಸಿಸಿಬಿ ಬೆಂಗಳೂರು ಇನ್ಸ್​ಪೆಕ್ಟರ್ ಕೆ.ಲಕ್ಷ್ಮೀ ನಾರಾಯಣ್, ಹಲಸೂರು ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ಸಂತೋಷ್ ಕೆ, ಜಯನಗರ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ದೀಪಕ್ ಆರ್ ಸೇರಿ ಒಟ್ಟು 132 ಇನ್ಸ್​ಪೆಕ್ಟರ್​ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಕೆಲಸ ನೋಡಿ ಬಿಜೆಪಿಗೆ ಬೆಂಬಲ ಕೊಟ್ಟಿದ್ದೇನೆ, ಈಗಲೂ ಬೆಂಬಲವಿದೆ: ಮಂಡ್ಯ ಸಂಸದೆ ಸುಮಲತಾ

ಶಾಲಾ ಮುಖ್ಯ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಮುಂದೂಡಿಕೆ

2023-24ನೇ ಸಾಲಿನ ಮುಖ್ಯ ಶಿಕ್ಷಕ ಮತ್ತು ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಲು ಜ.30ರಂದು ನಡೆಸಲು ನಿರ್ಧರಿಸಿದ್ದ ಶಾಲಾ ಶಿಕ್ಷಣ ಇಲಾಖೆಯು ವರ್ಗಾವಣೆ ಕೌನ್ಸೆಲಿಂಗ್ ಫೆ.3ಕ್ಕೆ ಮುಂದೂಡಿದೆ. ಫೆ.3ರಂದು ‘ಬಿ’ ವಲಯದಿಂದ ‘ಎ’ ವಲಯಕ್ಕೆ ಹಾಗೂ ‘ಸಿ’ ವಲಯದಿಂದ ‘ಬಿ’ ವಲಯಕ್ಕೆ ಮುಖ್ಯ ಶಿಕ್ಷಕರು ಮತ್ತು ಹಿರಿಯ ಮುಖ್ಯ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ನಡೆಯಲಿದೆ.

ಪ್ರಸಕ್ತ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ವೃಂದಕ್ಕೆ ಹಾಗೂ ಮುಖ್ಯ ಶಿಕ್ಷಕರ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಹಿರಿಯ ಮುಖ್ಯ ಶಿಕ್ಷಕರ ವೃಂದಕ್ಕೆ ಸ್ಥಾನವನ್ನು ಬಡ್ತಿ ನೀಡಲು ಅಧಿಸೂಚನೆ ಹೊರಡಿಸಲಾಗಿತ್ತು.

ರಾಜ್ಯದ ಪ್ರಮುಖ ಸುದ್ದಿಗಳನ್ನುಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:24 am, Tue, 30 January 24