AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲೇರಿಯಾ ನಿರ್ಮೂಲನೆಗೆ ಮಂಗಳೂರಿನಲ್ಲಿ ಕೈಗೊಂಡ ಕ್ರಮಕ್ಕೆ ಜಾಗತಿಕ ಮಟ್ಟದಲ್ಲಿ ಜೈ ಹೋ…

ಮಲೇರಿಯಾ ನಿರ್ಮೂಲನೆಗೆ ಮಂಗಳೂರಿನಲ್ಲಿ ಜಾರಿಗೆ ಐ.ಟಿ. ಆಧಾರಿತ ನಿಗಾ ವ್ಯವಸ್ಥೆಯು ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದಿದೆ. ಏನಿದು ವ್ಯವಸ್ಥೆ ಇದಕ್ಕೆ ಈ ಪರಿಯ ಮಾನ್ಯತೆ ಸಿಕ್ಕಿದ್ದು ಹೇಗೆ ಎಂದು ತಿಳಿಯಿರಿ.

ಮಲೇರಿಯಾ ನಿರ್ಮೂಲನೆಗೆ ಮಂಗಳೂರಿನಲ್ಲಿ ಕೈಗೊಂಡ ಕ್ರಮಕ್ಕೆ ಜಾಗತಿಕ ಮಟ್ಟದಲ್ಲಿ ಜೈ ಹೋ...
ಸಾಂದರ್ಭಿಕ ಚಿತ್ರ
Srinivas Mata
|

Updated on: Apr 15, 2021 | 3:33 PM

Share

ದಶಕಗಳಷ್ಟು ಹಳೆಯ ಮಲೇರಿಯಾ ಹಬ್ಬುವ ಚಕ್ರವು ಅಂತೂ ಮಂಗಳೂರಿನಲ್ಲಿ ದೇಶೀಯವಾದ ಐ.ಟಿ. (ಮಾಹಿತಿ ತಂತ್ರಜ್ಞಾನ) ಸಲ್ಯೂಷನ್ ಸಹಾಯದಿಂದ ಮುರಿದಿದೆ. ಹೊಸ ಮಲೇರಿಯಾ ಪ್ರಕರಣಗಳು ಶೇಕಡಾ 83ರಷ್ಟು ಕಡಿಮೆಯಾಗಿದ್ದು, ಆ ಸಂಸ್ಥೆಯಿಂದ ಮಲೇರಿಯಾ ಕಂಟ್ರೋಲ್ ಸಿಸ್ಟಮ್ (ಎಂಸಿಎಸ್) ಜಾರಿಯಾದ ಐದು ವರ್ಷಗಳೊಳಗೆ ಇದು ಸಾಧ್ಯವಾಗಿದೆ. ಎಂಸಿಎಸ್ ಯಶಸ್ಸಿನ ಬಗ್ಗೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಈ ಬಗ್ಗೆ ಬ್ರಿಟಿಷ್ ಜರ್ನಲ್ – ಮಲೇರಿಯಾ ಎಕ್ಸ್​ಪ್ರೆಸ್ ಮಾರ್ಚ್ ಆನ್​ಲೈನ್ ಎಡಿಷನ್​ನಲ್ಲಿ ಲೇಖನ ಪ್ರಕಟಿಸಿದೆ. ಇದರ ಜತೆಗೆ, ಹೇಗೆ ದೇಶೀಯವಾಗಿ ಅಭಿವೃದ್ಧಿಪಡಿಸಿದ ಜಿಐಎಸ್ (ಜಿಯಾಗ್ರಫಿಕ್ ಇನ್ಫರ್ಮೇಷನ್ ಸಿಸ್ಟಮ್)- ಟ್ಯಾಗ್ಡ್ ಸ್ಮಾರ್ಟ್ ನಿಗಾ ವ್ಯವಸ್ಥೆಯು ನಗರ ಪ್ರದೇಶದ ಮಲೇರಿಯಾ ನಿರ್ಮೂಲನ ಮಾಡಬಲ್ಲದು ಎಂಬ ಬಗ್ಗೆ ಇದೇ ಮೊದಲ ಬಾರಿಗೆ ನಡೆದ ಅಧ್ಯಯನ ಮೆಡಿಕಲ್ ಎಕ್ಸ್​ಪ್ರೆಸ್ ಒಳಗೊಂಡ ವಿಜ್ಞಾನ ಜರ್ನಲ್​ನಲ್ಲಿ ಪ್ರಕಟವಾಗಿದೆ.

ಎಲ್ಲಿ ಮಲೇರಿಯಾ ಹೊರೆ ಹೆಚ್ಚಿದೆಯೋ ಆ ದೇಶಗಳಲ್ಲಿ ಮಲೇರಿಯಾ ನಿಗಾ ಪ್ರಮಾಣ ದುರ್ಬಲವಾಗಿದೆ ಎಂದು ಅಧ್ಯಯನಕ್ಕೆ ಸಂಬಂಧಿಸಿದ ಹಿರಿಯ ಲೇಖಕ ಡಾ. ಸುಶಾಂತ್ ಕುಮಾರ್ ಅಭಿಪ್ರಾಯ ಪಡುತ್ತಾರೆ. ನ್ಯಾಷನಲ್ ವೆಕ್ಟರ್ ಬೋರ್ನ್ ಡಿಸೀಸ್ ಕಂಟ್ರೋಲ್ ಪ್ರೋಗ್ರಾಂ (NVBDCP) ಪ್ರಕಾರ, ನಗರ ಮಲೇರಿಯಾದಲ್ಲಿ ಅತಿ ಹೆಚ್ಚು ಅಪಾಯ ಇರುವುದು ಮಂಗಳೂರಿನಲ್ಲಿ ಎಂದು ತಿಳಿಸಲಾಗಿದೆ.

ಕರ್ನಾಟಕದ ಒಟ್ಟು ಮಲೇರಿಯಾ ಪ್ರಕರಣಗಳ ಪೈಕಿ ಶೇ 85ರಷ್ಟು ಮಂಗಳೂರಿನಲ್ಲಿ ಕೆಎಂಸಿಯಲ್ಲಿ ಪ್ರೊಫೆಸರ್ ಆಗಿರುವ ಬಿ. ಶಾಂತಾರಾಂ ಬಾಳಿಗ ಅವರು ತಿಳಿಸುವ ಪ್ರಕಾರ, ಕರ್ನಾಟಕದಲ್ಲಿನ ಒಟ್ಟು ಮಲೇರಿಯಾ ಪ್ರಕರಣಗಳಲ್ಲಿ ಮಂಗಳೂರಿನ ಕೊಡುಗೆ ಶೇಕಡಾ 85ರಷ್ಟು ಎನ್ನುತ್ತಾರೆ. ಕಳೆದ ಮೂರು ದಶಕಗಳಿಂದ (ನಿರ್ಮಾಣ ಕ್ಷೇತ್ರದಲ್ಲಿ ಭಾರೀ ಹೆಚ್ಚಳ ಆದ ಮೇಲೆ) ಮಂಗಳೂರಿನಲ್ಲಿ ಮಲೇರಿಯಾ ಸ್ಥಳೀಯವಾಗಿ ಹೆಚ್ಚಾಗಿದೆ. ಈ ಹಿಂದೆ ಕೈಗೊಂಡ ರಾಷ್ಟ್ರೀಯ ಮಲೇರಿಯಾ ನಿರ್ಮೂಲನಾ ಕಾರ್ಯಕ್ರಮ (NMEP) ಇಲ್ಲಿ ಫಲಿತಾಂಶ ನೀಡಲು ಸಾಧ್ಯವಾಗಿಲ್ಲ ಎಂದು ಅವರು ಹೇಳುತ್ತಾರೆ.

ಪ್ರಕರಣಗಳ ವರದಿ ಮತ್ತು ಅದಕ್ಕೆ ತೆಗೆದುಕೊಳ್ಳುವ ಕ್ರಮಗಳು ಮ್ಯಾನ್ಯುಯಲ್ ಆಗಿರುತ್ತಿತ್ತು. ಇದರಿಂದ ನಿಗಾ ತಡವಾಗುತ್ತಿತ್ತು, ಇತರರಲ್ಲಿ ಅಸಮರ್ಪಕ ನಿರ್ವಹಣೆ ಕಾರಣಕ್ಕೆ ಮಲೇರಿಯಾ ನಿರ್ಮೂಲನಾ ಕಾರ್ಯಕ್ರಮ ಮಂಗಳೂರಿನಲ್ಲಿ ವಿಫಲ ಆಗುತ್ತಿತ್ತು ಎನ್ನುತ್ತಾರೆ ಬಾಳಿಗಾ. ಆದರೆ ಮಲೇರಿಯಾ ನಿಗಾ ಮತ್ತು ನಿಯಂತ್ರಣ ಕಾರ್ಯಕ್ರಮವನ್ನು ಡಿಜಿಟೈಸ್ ಮಾಡಲು ತೀರ್ಮಾನಿಸಲಾಯಿತು. 2015ರ ಅಕ್ಟೋಬರ್​ನಲ್ಲಿ ಎಂಸಿಎಸ್ ಆರಂಭಿಸಲಾಯಿತು. ಈ ಹೊಸ ವಿಧಾನದಲ್ಲಿ, ಯಾವುದೇ ಲ್ಯಾಬೊರೇಟರಿ ಅಥವಾ ಕ್ಲಿನಿಕ್​ನಲ್ಲಿ ಮಲೇರಿಯಾ ಪ್ರಕರಣ ಪತ್ತೆ ಮಾಡಿದರೆ 48 ಗಂಟೆಗಳೊಳಗೆ ಆನ್​ಲೈನ್​ನಲ್ಲಿ ಅಪ್​ಲೋಡ್ ಮಾಡಬೇಕಾಯಿತು.

ಟ್ಯಾಬ್ ಸಾಧನದ ಮೂಲಕ ಅಲರ್ಟ್ ಹೊಸ ಪ್ರಕರಣದ ಬಗ್ಗೆ ಆನ್​ಲೈನ್​ನಲ್ಲಿ ದಾಖಲಾಗುತ್ತಿದ್ದಂತೆ ಟ್ಯಾಬ್ ಸಾಧನದ ಮೂಲಕ 54 ತರಬೇತಾದ ಬಹುಪಯೋಗಿ ಸಿಬ್ಬಂದಿಗೆ ಅಲರ್ಟ್ ಹೋಗುತ್ತಿತ್ತು. ಈ ಜಿಐಎಸ್ ಟ್ಯಾಗ್ ಆದ ಟ್ಯಾಬ್​ನಲ್ಲಿ ಇರುವ ಅಪ್ಲಿಕೇಷನ್​ಗಳು ಸಿಬ್ಬಂದಿಗೆ ಸಹಾಯ ಮಾಡುತ್ತವೆ. ಯಾರಿಗೆ ಕಾಯಿಲೆ ಬಂದಿರುತ್ತದೋ ಅಂಥವರ ಸಂಪರ್ಕಕ್ಕೆ ಬಂದವರ ರಕ್ತದ ಸ್ಯಾಂಪಲ್ ಸಂಗ್ರಹ ಮತ್ತು ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳ ನಾಶ ಇತ್ಯಾದಿ ಕ್ರಮಗಳಿಗೆ ಮುಂದಾಗುತ್ತಾರೆ.

ಈ ಫೀಚರ್ ಮೂಲಕ ರೋಗಿಗಳ ಫಾಲೋಅಪ್ ಮಾಡಲಾಗುತ್ತದೆ. ಮತ್ತು ಒಂದು ವೇಳೆ ಪ್ಲಾಸ್ಮೋಡಿಯಂ ವಿವಾಕ್ಸ್ ಮಲೇರಿಯಾದಲ್ಲಿ 14 ದಿನದೊಳಗೆ ಪ್ರಕರಣ ಮುಕ್ತಾಯ ಆಗಬೇಕು. ಐ.ಟಿ.- ಆಧಾರಿತ ಸೇವೆಗೆ ಹಲವು ಅಡೆತಡೆಗಳು ಎದುರಾದವು. ಬಹುಪಯೋಗಿ ಸಿಬ್ಬಂದಿಯನ್ನು ಆ ಕೆಲಸದಿಂದ ಬೇರೆ ಉದ್ದೇಶಗಳಿಗೆ ವಾಪಸ್ ಕರೆಸಿಕೊಳ್ಳಲು ಮಂಗಳೂರು ನಗರ ಪಾಲಿಕೆ ನಿರ್ಧರಿಸಿತು. ಆದರೂ ಮನೆಗೇ ಭೇಟಿ ನೀಡುವುದು ಮತ್ತು ಪ್ರಕರಣ ಪೂರ್ಣ ಮಾಡುವುದು (ಶೇ 90ರಷ್ಟು ಪ್ರಕರಣ ಪೂರ್ಣಗೊಂಡಿದೆ) ಮುಂದುವರಿಯಿತು. ಕಾಯಿಲೆ ಹಬ್ಬುವ ಚಕ್ರವನ್ನು ಮುರಿಯಲಾಯಿತು ಎಂದು ಬಾಳಿಗಾ ಹೇಳುತ್ತಾರೆ.

ಎಲ್ಲ ಬಗೆಯ ಸಂಪರ್ಕದ ಮೂಲಕ ಹಬ್ಬುವ ಇತರ ಕಾಯಿಲೆಗಳನ್ನು ಸಹ ಈ ರೀತಿ ಸ್ಮಾರ್ಟ್ ನಿಗಾ ವ್ಯವಸ್ಥೆ ಮೂಲಕವಾಗಿ ನಿಗಾ ಮಾಡಿ, ಹತೋಟಿಗೆ ತರುವುದಕ್ಕೆ ಸಾಧ್ಯವಿದೆ ಎನ್ನುತ್ತಾರೆ ಬಾಳಿಗಾ. ಡಾ. ಘೋಷ್ ಮಾತನಾಡಿ, 2016ರಿಂದ 2030ರ ತನಕ ಮಲೇರಿಯಾ ನಿರ್ಮೂಲನೆ ಮಾಡುವ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ತಾಂತ್ರಿಕ ಸ್ಟ್ರಾಟೆಜಿ (GTS) ಅನ್ನು ಡಿಜಿಟೈಸ್ಡ್ ಸ್ಮಾರ್ಟ್ ಸರ್ವೇಲನ್ಸ್ ವ್ಯವಸ್ಥೆ ಪೂರ್ಣಗೊಳಿಸುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ಡೆಕ್ಕನ್ ಹೆರಾಲ್ಡ್​ನಲ್ಲಿ ವರದಿ ಆಗಿದೆ.

ಇದನ್ನೂ ಓದಿ: ಜೀವಂತ ಕಾಡುಪ್ರಾಣಿ ಮಾರಾಟ ನಿಷೇಧಿಸಿದ ವಿಶ್ವ ಆರೋಗ್ಯ ಸಂಸ್ಥೆ: ವುಹಾನ್​ ಪ್ರಕರಣದಿಂದ ಪಾಠ ಕಲಿಯಲು ಸಲಹೆ

(Malaria contains surveillance tool which was used in Mangaluru got global recognition.)

ಹಾಲು ಹಾಕುವ ಮುನ್ನ ಹಾಲಿನ ಪಾತ್ರೆಗೆ ಎಂಜಲು ಉಗುಳಿದ ವ್ಯಾಪಾರಿ
ಹಾಲು ಹಾಕುವ ಮುನ್ನ ಹಾಲಿನ ಪಾತ್ರೆಗೆ ಎಂಜಲು ಉಗುಳಿದ ವ್ಯಾಪಾರಿ
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ