ಜೀವಂತ ಕಾಡುಪ್ರಾಣಿ ಮಾರಾಟ ನಿಷೇಧಿಸಿದ ವಿಶ್ವ ಆರೋಗ್ಯ ಸಂಸ್ಥೆ: ವುಹಾನ್​ ಪ್ರಕರಣದಿಂದ ಪಾಠ ಕಲಿಯಲು ಸಲಹೆ

ಸಾಂಪ್ರದಾಯಿಕ ಮಾರುಕಟ್ಟೆಗಳಲ್ಲಿ ಜೀವಂತ ಪ್ರಾಣಿಗಳನ್ನು ಹಿಡಿದಿಟ್ಟುಕೊಳ್ಳುವುದು, ಹತ್ಯೆ ಮಾಡುವುದು ಕಾರ್ಮಿಕರು ಮತ್ತು ಗ್ರಾಹಕರಿಗೆ ರೋಗಗಳ ಹರಡುವಿಕೆಗೆ ಅಪಾಯವನ್ನು ಉಂಟುಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶಿ ಸೂತ್ರಗಳು ತಿಳಿಸಿದೆ.

ಜೀವಂತ ಕಾಡುಪ್ರಾಣಿ ಮಾರಾಟ ನಿಷೇಧಿಸಿದ ವಿಶ್ವ ಆರೋಗ್ಯ ಸಂಸ್ಥೆ: ವುಹಾನ್​ ಪ್ರಕರಣದಿಂದ ಪಾಠ ಕಲಿಯಲು ಸಲಹೆ
ವುಹಾನ್​ನ ಮಾರುಕಟ್ಟೆಯೊಂದರ ಚಿತ್ರಣ
Follow us
guruganesh bhat
|

Updated on:Apr 13, 2021 | 4:05 PM

ಜಿನೇವಾ: ಇನ್ಮುಂದೆ ಯಾವುದೇ ದೇಶದ ಪ್ರಾಣಿ ಮಾರುಕಟ್ಟೆಯಲ್ಲಿ ಜೀವಂತ ಕಾಡುಪ್ರಾಣಿಗಳನ್ನು (ಸಸ್ತನಿಗಳು) ಮಾರಾಟ ಮಾಡುವಂತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಚೀನಾದ ವುಹಾನ್​ನಲ್ಲಿ ಇಂಥದ್ದೇ ಜೀವಂತ ಪ್ರಾಣಿಗಳ ಮಾರುಕಟ್ಟೆಯಿಂದ ಹಾರುವ ಸಸ್ತನಿಗಳಾದ ಬಾವಲಿಗಳಿಂದ ಕೊರೊನಾ ಸೋಂಕು ಮನುಷ್ಯರಿಗೆ ಹರಡಿತು ಎಂಬುದು ಈವರೆಗೆ ಜಗತ್ತು ನಂಬಿಕೊಂಡಿರುವ ಸತ್ಯ. ಈ ಹಿನ್ನೆಲೆಯಲ್ಲಿಯೇ ಮುಂದಿನ ದಿನಗಳಲ್ಲಿ ಹುಟ್ಟಿಕೊಳ್ಳಬಹುದಾದ ಹೊಸ ಸೋಂಕು ಅಥವಾ ಕಾಯಿಲೆಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ವ ಆರೋಗ್ಯ ಸಂಸ್ಥೆ ಈ ಸೂಚನೆ ನೀಡಿರುವುದಾಗಿ ತಿಳಿಸಿದೆ. ವಿಶ್ವಸಂಸ್ಥೆಯ ಆದೇಶದಲ್ಲಿ ‘ಸಸ್ತನಿ’ ಎಂಬ ಉಲ್ಲೇಖ ಇರುವುದನ್ನು ಗಮನಿಸಬೇಕು.

ದೊಡ್ಡ ಸಂಖ್ಯೆಯ ಜನಸಾಮಾನ್ಯರಿಗೆ ಆಹಾರ ಮತ್ತು ದೈನಂದಿನ ಅಗತ್ಯಗಳನ್ನು ಪೂರೈಸುವಲ್ಲಿ ಸಂತೆಯಂಥ ಸ್ಥಳೀಯ ಮಾರುಕಟ್ಟೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಅಂತಹ ಸ್ಥಳೀಯ ಮಾರುಕಟ್ಟೆಗಳಲ್ಲಿ ಕೆಲಸ ನಿರ್ವಹಿಸುವ ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಜೀವಂತ (ಸಸ್ತನಿ) ವನ್ಯಜೀವಿಗಳನ್ನು ಮಾರಬಾರದು ಎಂದು ಡಬ್ಲ್ಯುಎಚ್​ಓ ಸೂಚನೆ ನೀಡಿದೆ. ಕೊರೊನಾ ಸೋಂಕು ಮೊದಲು ಪತ್ತೆಯಾದ ಚೀನಾ ದೇಶದ ವುಹಾನ್​ನ ಮಾಂಸದ ಮಾರುಕಟ್ಟೆಯ ಉದಾಹರಣೆಯನ್ನು ಗಮನದಲ್ಲಿಟ್ಟುಕೊಂಡು ವಿಶ್ವ ಆರೋಗ್ಯ ಸಂಸ್ಥೆ ಈ ನಿರ್ಣಯ ಕೈಗೊಂಡಿದೆ.

ವುಹಾನ್ ನಗರದ ಮಾಂಸದಂಗಡಿಗಳ ಮಾಲೀಕರಲ್ಲಿ, ಕೆಲಸ ಮಾಡುವವರಲ್ಲಿ ಮತ್ತು ಕಾಯಂ ಗ್ರಾಹಕರಲ್ಲಿ ಕೊರೊನಾ ಸೋಂಕು ಮೊದಲು ಪತ್ತೆಯಾಗಿತ್ತು. ಅಲ್ಲಿಂದಲೇ ಕೊವಿಡ್ ವೈರಾಣು ಜಗತ್ತಿನಾದ್ಯಂತ ಪ್ರಸಾರವಾಗಿತ್ತು ಎಂದು ನಂಬಲಾಗಿದೆ. ಈ ಕುರಿತು ಮಧ್ಯಂತರ ನಿಯಮಾವಳಿಗಳನ್ನು ಹೊರಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಎಲ್ಲಾ ದೇಶಗಳಿಗೂ ಆಹಾರ ಮಾರುಕಟ್ಟೆಯಲ್ಲಿ ಜೀವಂತ ಸಸ್ತನಿಗಳ ಮಾರಾಟವನ್ನು ನಿಷೇಧಿಸಲು ಮನವಿ ಮಾಡಿದೆ. ಪ್ರಾಣಿಗಳು, ಅದರಲ್ಲೂ ವನ್ಯಜೀವಿಗಳು ಮನುಷ್ಯರಲ್ಲಿ ಉದ್ಭವಿಸುವ ಶೇ 70ರಷ್ಟು ಸೋಂಕುಗಳಿಗೆ ಮೂಲವಾಗಿವೆ. ಒಬ್ಬರಿಂದ ಒಬ್ಬರಿಗೆ ಹರಡುವ ಲಕ್ಷಣಗಳಿರುವ ಸೋಂಕುಗಳು ಪ್ರಾಣಿಜನ್ಯವಾಗಿರುತ್ತವೆ. ಮುಂದೆ ಹೊಸ ಕಾಯಿಲೆ ಅಥವಾ ರೋಗಗಳು ಹುಟ್ಟುವ ಅಪಾಯವೂ ಸಹ ಜೀವಂತ ಸಸ್ತನಿಗಳಿಂದ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ.

ಸಾಂಪ್ರದಾಯಿಕ ಮಾರುಕಟ್ಟೆಗಳಲ್ಲಿ ಜೀವಂತ ಪ್ರಾಣಿಗಳನ್ನು ಹಿಡಿದಿಟ್ಟುಕೊಳ್ಳುವುದು, ಹತ್ಯೆ ಮಾಡುವುದು ಕಾರ್ಮಿಕರು ಮತ್ತು ಗ್ರಾಹಕರಿಗೆ ರೋಗಗಳ ಹರಡುವಿಕೆಗೆ ಅಪಾಯವನ್ನು ಉಂಟುಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶಿ ಸೂತ್ರಗಳು ತಿಳಿಸಿದೆ. ಇಷ್ಟೇ ಅಲ್ಲದೇ ಮುಂಜಾಗರೂಕತೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಜೀವಂತ ವನ್ಯಜೀವಿಗಳನ್ನು ಮಾರುವ ಮಾರುಕಟ್ಟೆಗಳನ್ನು ಮುಚ್ಚಲು ಸಹ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ.

ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಯಲ್ಲಿರುವುದರಿಂದ ಯಾವುದೇ ಕಾಡುಪ್ರಾಣಿಗಳನ್ನು ಜೀವಂತ ಅಥವಾ ನಿರ್ಜೀವ ಸ್ಥಿತಿಯಲ್ಲಿ ಮಾರಾಟ ಮಾಡುವುದು, ಮಾಂಸ ಸೇವನೆ, ಕೊಲ್ಲುವುದು, ಬೇಟೆಯಾಡುವುದು, ಅದರ ಭಾಗಗಳನ್ನು ತುಂಡರಿಸುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯು ಸಸ್ತನಿಗಳ ಜೊತೆಗೆ ಸರಿಸೃಪಗಳು, ಪಕ್ಷಿಗಳಿಗೂ ಅನ್ವಯಿಸುತ್ತದೆ.

ಇದನ್ನೂ ಓದಿ: ಕೊವಿಶೀಲ್ಡ್​, ಕೊವ್ಯಾಕ್ಸಿನ್​ ಜೊತೆಗೆ ಭಾರತದಲ್ಲಿ ಸಿಗಲಿದೆ ಸ್ಪುಟ್ನಿಕ್​-ವಿ ಕೊರೊನಾ ಲಸಿಕೆ; ಮೂರರಲ್ಲಿ ಯಾವುದು ಉತ್ತಮ?

ಕೊರೊನಾ ಹೆಚ್ಚಳ: ತಾಂತ್ರಿಕ ಸಲಹಾ ಸಮಿತಿಯಿಂದ ರಾಜ್ಯ ಸರ್ಕಾರಕ್ಕೆ 16 ಅಂಶಗಳ ಶಿಫಾರಸು

(WHO bans on sale of Wil Live Mammals to avoid new disease)

Published On - 4:04 pm, Tue, 13 April 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್