ಪ್ರೀತಿಸಿ ಮದುವೆಯಾಗಿದ್ದ ಯುವತಿ ಕೈಕೊಟ್ಟ ಹಿನ್ನೆಲೆ ಮೊಬೈಲ್‌ ಟವರ್‌ ಏರಿದ ಪತಿರಾಯ

|

Updated on: Nov 24, 2019 | 9:49 AM

ಚಿಕ್ಕಬಳ್ಳಾಫುರ: ಪ್ರೀತಿಸಿ ಮದುವೆಯಾಗಿದ್ದ ಯುವತಿ ಕೈಕೊಟ್ಟ ಹಿನ್ನೆಲೆ ಮೊಬೈಲ್‌ ಟವರ್‌ ಏರಿ ಯುವಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕೋಡಪಲ್ಲಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಯುವಕನ ಹೆಸರು ಶ್ರೀಕಾಂತ್ ಈತ ಪಕ್ಕದ ಗ್ರಾಮದ ಶ್ರಾವಣಿಯನ್ನು ಪ್ರೀತಿಸಿದ್ದ, ಇತ್ತೀಚೆಗೆ ಇವರಿಬ್ಬರು ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ರು. ಇವರಿಬ್ಬರದ್ದು ಅಂತರ್ಜಾತಿ ವಿವಾಹ. ಆದರೆ ಶ್ರಾವಣಿ ಶ್ರೀಕಾಂತ್​ನ ಪ್ರೀತಿಗೆ ಎಳ್ಳು ನೀರು ಬಿಟ್ಟಿದ್ದಾಳೆ. ಹೀಗಾಗಿ ಮನನೊಂದ ಶ್ರೀಕಾಂತ್ ಮೊಬೈಲ್‌ ಟವರ್‌ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಬಾಗೇಪಲ್ಲಿ ಠಾಣೆ […]

ಪ್ರೀತಿಸಿ ಮದುವೆಯಾಗಿದ್ದ ಯುವತಿ ಕೈಕೊಟ್ಟ ಹಿನ್ನೆಲೆ ಮೊಬೈಲ್‌ ಟವರ್‌ ಏರಿದ ಪತಿರಾಯ
Follow us on

ಚಿಕ್ಕಬಳ್ಳಾಫುರ: ಪ್ರೀತಿಸಿ ಮದುವೆಯಾಗಿದ್ದ ಯುವತಿ ಕೈಕೊಟ್ಟ ಹಿನ್ನೆಲೆ ಮೊಬೈಲ್‌ ಟವರ್‌ ಏರಿ ಯುವಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕೋಡಪಲ್ಲಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಯುವಕನ ಹೆಸರು ಶ್ರೀಕಾಂತ್ ಈತ ಪಕ್ಕದ ಗ್ರಾಮದ ಶ್ರಾವಣಿಯನ್ನು ಪ್ರೀತಿಸಿದ್ದ, ಇತ್ತೀಚೆಗೆ ಇವರಿಬ್ಬರು ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ರು.

ಇವರಿಬ್ಬರದ್ದು ಅಂತರ್ಜಾತಿ ವಿವಾಹ. ಆದರೆ ಶ್ರಾವಣಿ ಶ್ರೀಕಾಂತ್​ನ ಪ್ರೀತಿಗೆ ಎಳ್ಳು ನೀರು ಬಿಟ್ಟಿದ್ದಾಳೆ. ಹೀಗಾಗಿ ಮನನೊಂದ ಶ್ರೀಕಾಂತ್ ಮೊಬೈಲ್‌ ಟವರ್‌ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಬಾಗೇಪಲ್ಲಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಹಳ ಪ್ರಯತ್ನಗಳ ನಂತರ ಶ್ರೀಕಾಂತ್​ನ ಮನವೋಲಿಸಿ ಪೊಲೀಸರು ಕೆಳಗಿಳಿಸಿದ್ದಾರೆ.