
ರಾಯಚೂರು: ಲಿಂಗಸುಗೂರಿನಲ್ಲಿ ಸಿನಿಮೀಯ ಶೈಲಿಯಲ್ಲಿ ವ್ಯಕ್ತಿಯ ಅಪಹರಣ ಸಂಬಂಧ ಆರೋಪಿಗಳ ಪತ್ತೆಗೆ ಎಎಸ್ಪಿ ಹರಿಬಾಬು ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ.
ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಲಿಂಗಸುಗೂರು ಬಸ್ ನಿಲ್ದಾಣದ ಮುಂದೆ ವ್ಯಕ್ತಿಯನ್ನು ಅಪಹರಿಸಿದ್ದರು. ಸ್ನೇಹಿತರಂತೆ ನಟಿಸಿ ವ್ಯಕ್ತಿಯ ಅಪಹರಿಸಿದ್ದಾರೆ. ಈ ವೇಳೆ ಕಿಡ್ನ್ಯಾಪ್ ತಡೆಯಲು ಯತ್ನಿಸಿದವರಿಗೆ ಅಪಹರಣಕಾರರು ಪಿಸ್ತೂಲ್ ಮತ್ತು ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿದ್ದಾರೆ.
ವ್ಯಕ್ತಿಯನ್ನು ಮಹಾರಾಷ್ಟ್ರ ನಂಬರಿನ ಕಾರಿನಲ್ಲಿ ಎಳೆದೊಯ್ದು ದುಷ್ಕರ್ಮಿಗಳು ಕಾಲ್ಕಿತ್ತಿದ್ದಾರೆ. ಕಿಡ್ನಾಪ್ ಮಾಡಿದ ಸಂಪೂರ್ಣ ಘಟನೆ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಹರಣ, ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸ್ ದಾಖಲಿಸಿ, ಅಪಹರಣಕಾರರ ಪತ್ತಗೆ ಲಿಂಗಸುಗೂರು ಪೊಲೀಸರ ಶೋಧ ನಡೆಸುತ್ತಿದ್ದಾರೆ.