4 ದಶಕಗಳ ಹಿಂದೆ ಸತ್ತ ವ್ಯಕ್ತಿ ಪ್ರತ್ಯಕ್ಷ, ಚಿತ್ರನಾಯಕನಹಳ್ಳಿಯಲ್ಲಿ ವಿಚಿತ್ರ ಘಟನೆ!
ಚಿತ್ರದುರ್ಗ: ನಾಲ್ಕು ದಶಕಗಳ ಹಿಂದೆ ಅನಾರೋಗ್ಯದಿಂದ ಸಾವಿಗೀಡಾಗಿದ್ದ ವ್ಯಕ್ತಿ ಮರಳಿ ಗ್ರಾಮಕ್ಕೆ ಬಂದಿರುವ ವಿಚಿತ್ರ ಘಟನೆಯೊಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಚಿತ್ರನಾಯಕನಹಳ್ಳಿಯಲ್ಲಿ ನಡೆದಿದೆ. ಈರಜ್ಜ ಎಂಬ ವ್ಯಕ್ತಿ 4 ದಶಕಗಳ ಹಿಂದೆ ಅನಾರೋಗ್ಯದಿಂದ ಸಾವಿಗೀಡಾಗಿದ್ದರು. ಸಂಬಂಧಿಕರು ಈರಜ್ಜನ ಅಂತ್ಯಸಂಸ್ಕಾರವನ್ನೂ ಮಾಡಿದ್ದರು. ಆದ್ರೆ ಅಂತ್ಯಸಂಸ್ಕಾರದ ಮರುದಿನ ಸಮಾಧಿ ಸ್ಥಳದಲ್ಲಿ ಮಣ್ಣು ಹರಡಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆದರೆ ಈಗ ಈರಜ್ಜ ಮರಳಿ ಮನೆಗೆ ಬಂದಿರುವುದು ಕುಟುಂಬಸ್ಥರಿಗೆ ಅಚ್ಚರಿಯ ಜೊತೆ ಸಂತಸ ತಂದಿದೆ. ಈರಜ್ಜ ಈಗಾಗಲೇ ಆಂಧ್ರ ಪ್ರದೇಶದಲ್ಲಿ […]
ಚಿತ್ರದುರ್ಗ: ನಾಲ್ಕು ದಶಕಗಳ ಹಿಂದೆ ಅನಾರೋಗ್ಯದಿಂದ ಸಾವಿಗೀಡಾಗಿದ್ದ ವ್ಯಕ್ತಿ ಮರಳಿ ಗ್ರಾಮಕ್ಕೆ ಬಂದಿರುವ ವಿಚಿತ್ರ ಘಟನೆಯೊಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಚಿತ್ರನಾಯಕನಹಳ್ಳಿಯಲ್ಲಿ ನಡೆದಿದೆ.
ಈರಜ್ಜ ಎಂಬ ವ್ಯಕ್ತಿ 4 ದಶಕಗಳ ಹಿಂದೆ ಅನಾರೋಗ್ಯದಿಂದ ಸಾವಿಗೀಡಾಗಿದ್ದರು. ಸಂಬಂಧಿಕರು ಈರಜ್ಜನ ಅಂತ್ಯಸಂಸ್ಕಾರವನ್ನೂ ಮಾಡಿದ್ದರು. ಆದ್ರೆ ಅಂತ್ಯಸಂಸ್ಕಾರದ ಮರುದಿನ ಸಮಾಧಿ ಸ್ಥಳದಲ್ಲಿ ಮಣ್ಣು ಹರಡಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆದರೆ ಈಗ ಈರಜ್ಜ ಮರಳಿ ಮನೆಗೆ ಬಂದಿರುವುದು ಕುಟುಂಬಸ್ಥರಿಗೆ ಅಚ್ಚರಿಯ ಜೊತೆ ಸಂತಸ ತಂದಿದೆ.
ಈರಜ್ಜ ಈಗಾಗಲೇ ಆಂಧ್ರ ಪ್ರದೇಶದಲ್ಲಿ ಮತ್ತೊಂದು ಮದುವೆ ಆಗಿದ್ದಾರಂತೆ. ಏನೇ ಆಗ್ಲಿ ನಾಲ್ಕು ದಶಕಗಳ ಬಳಿಕ ಮರಳಿ ತನ್ನ ಸ್ವಂತ ಗ್ರಾಮಕ್ಕೆ ಬಂದಿರುವ ಪತಿಗೆ, ಪತ್ನಿ ಈರಜ್ಜಿ ಸ್ವಾಗತಿಸಿದ್ದಾರೆ.
Published On - 6:19 pm, Tue, 29 October 19