ನಿತಿನ್ ಗಡ್ಕರಿ ಕಚೇರಿಗೆ ಬೆದರಿಕೆ ಹಾಕಿದ ಕೈದಿಗೂ ದಾವೂದ್ ಇಬ್ರಾಹಿಂಗೂ ನಂಟು?

| Updated By: ಸುಷ್ಮಾ ಚಕ್ರೆ

Updated on: Jan 16, 2023 | 11:00 AM

ನಾಗ್ಪುರ ಪೊಲೀಸರ ತಂಡವು ಇಂದು ಜಯೇಶ್ ಪೂಜಾರಿಯನ್ನು ಪ್ರಶ್ನಿಸಲು ಅವಕಾಶ ನೀಡುವಂತೆ ಬೆಳಗಾವಿ ಜೈಲು ಆಡಳಿತಕ್ಕೆ ಮನವಿ ಮಾಡುವ ಸಾಧ್ಯತೆಯಿದೆ. ಈ ಬೆದರಿಕೆ ಕರೆಗಳ ಹಿಂದಿನ ಉದ್ದೇಶವನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.

ನಿತಿನ್ ಗಡ್ಕರಿ ಕಚೇರಿಗೆ ಬೆದರಿಕೆ ಹಾಕಿದ ಕೈದಿಗೂ ದಾವೂದ್ ಇಬ್ರಾಹಿಂಗೂ ನಂಟು?
ನಿತಿನ್ ಗಡ್ಕರಿ
Follow us on

ಬೆಳಗಾವಿ: ಬೆಳಗಾವಿಯ ಜೈಲಿನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರ ಕಚೇರಿಗೆ ಜೀವ ಬೆದರಿಕೆ ಕರೆ ಮಾಡಿದ ಆರೋಪಿಗಳು ತಾವು ದಾವೂದ್ ಇಬ್ರಾಹಿಂ (Dawood Ibrahim) ಗ್ಯಾಂಗ್‌ನವರು ಎಂದು ಹೇಳಿಕೊಂಡು 100 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಜೈಲು ಶಿಕ್ಷೆ ಅನುಭವಿಸುತ್ತಿರುವ ಕೈದಿ ಬೆಳಗಾವಿ ಜೈಲಿನಿಂದಲೇ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಸಲು ನಾಗಪುರ ಪೊಲೀಸರು ಬೆಳಗಾವಿಗೆ ತೆರಳಿದ್ದಾರೆ.

ಬೆದರಿಕೆ ಕರೆ ಮಾಡಿದವರನ್ನು ಕೊಲೆ ಪ್ರಕರಣದಲ್ಲಿ ನ್ಯಾಯಾಲಯವು ಮರಣದಂಡನೆ ಶಿಕ್ಷೆಗೆ ಗುರಿಪಡಿಸಿದ ಜಯೇಶ್ ಪೂಜಾರಿ ಎಂದು ಗುರುತಿಸಲಾಗಿದೆ. ಈ ಬೆದರಿಕೆ ಕರೆಗಳ ಹಿಂದಿನ ಉದ್ದೇಶವನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಈ ಬಗ್ಗೆ ಇನ್ನೂ ತನಿಖೆ ಬಾಕಿ ಇದೆ. ನಾಗ್ಪುರ ಪೊಲೀಸರ ತಂಡವು ಇಂದು ಜಯೇಶ್ ಪೂಜಾರಿಯನ್ನು ಪ್ರಶ್ನಿಸಲು ಅವಕಾಶ ನೀಡುವಂತೆ ಬೆಳಗಾವಿ ಜೈಲು ಆಡಳಿತಕ್ಕೆ ಮನವಿ ಮಾಡುವ ಸಾಧ್ಯತೆಯಿದೆ ಎಂದು ನಾಗ್ಪುರ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: Threat to Nitin Gadkari: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದ್ದು ಬೆಳಗಾವಿ ಹಿಂಡಲಗಾ ಜೈಲಿನ ಕೈದಿ

ಶನಿವಾರ ಬೆಳಗ್ಗೆ 11.25ರಿಂದ ಮಧ್ಯಾಹ್ನ 12.30ರವರೆಗೆ ನಾಗ್ಪುರದ ಖಮ್ಲಾ ಪ್ರದೇಶದಲ್ಲಿರುವ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಯ ಸ್ಥಿರ ದೂರವಾಣಿ ಸಂಖ್ಯೆಗೆ 3 ಬೆದರಿಕೆ ಕರೆಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಸೇರಿದ ನಾಗ್ಪುರ ಸಂಸದರ ಮನೆ ಮತ್ತು ಕಚೇರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

ತನ್ನ ಬೇಡಿಕೆಗಳನ್ನು ಈಡೇರಿಸದಿದ್ದರೆ ಸಚಿವರಿಗೆ ತೊಂದರೆ ಮಾಡುವುದಾಗಿ ಕರೆ ಮಾಡಿದವರು ಬೆದರಿಕೆ ಹಾಕಿದ್ದಾರೆ ಎಂದು ವರದಿಯಲ್ಲಿ ಸೇರಿಸಲಾಗಿದೆ. ಗಡ್ಕರಿ ಕಚೇರಿಯಲ್ಲಿರುವ ಫೋನ್ ಆಪರೇಟರ್‌ಗೆ ಕರೆ ಮಾಡಿದ ವ್ಯಕ್ತಿ ತಾನು ಡಿ ಗ್ಯಾಂಗ್‌ನ ಸದಸ್ಯ ಎಂದು ಹೇಳಿ, ಸಚಿವರಿಂದ 100 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ. ತನ್ನ ಬೇಡಿಕೆಯನ್ನು ಈಡೇರಿಸದಿದ್ದರೆ ಬಾಂಬ್‌ನಿಂದ ಸಚಿವರಿಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Threat to Nitin Gadkari: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ 3 ಬಾರಿ ಜೀವ ಬೆದರಿಕೆ ಕರೆ

ಪೊಲೀಸರ ಪ್ರಕಾರ, ಬಿಎಸ್‌ಎನ್‌ಎಲ್ ನೆಟ್‌ವರ್ಕ್ ನೋಂದಾಯಿತ ಸಂಖ್ಯೆಯಿಂದ ನಿತಿನ್ ಗಡ್ಕರಿ ಅವರ ಕಚೇರಿಯ ದೂರವಾಣಿಗೆ 3 ಬಾರಿ ಕರೆಗಳು ಬಂದಿವೆ. ಕಚೇರಿಯ ಸಿಬ್ಬಂದಿಯಿಂದ ದೂರು ಪಡೆದ ಬೆನ್ನಲ್ಲೇ ಪೊಲೀಸರು ಸಚಿವರ ನಾಗ್ಪುರ ಕಚೇರಿಯನ್ನು ಸುತ್ತುವರಿದಿದ್ದಾರೆ. ಅಲ್ಲದೆ ಕಚೇರಿ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ