ದಾವಣಗೆರೆ: ಹಿರಿಯ ಸ್ವಾತಂತ್ರ್ಯ ಯೋಧ ಜಿ.ಗೋವಿಂದರಾಜ್ (95) ನಿಧನ

ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಯೋಧ ಜಿ. ಗೋವಿಂದರಾಜ್​ ಇಂದು(ಜ.16) ತಮ್ಮ ನಿವಾಸದಲ್ಲಿ ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದ್ದಾರೆ.

ದಾವಣಗೆರೆ: ಹಿರಿಯ ಸ್ವಾತಂತ್ರ್ಯ ಯೋಧ ಜಿ.ಗೋವಿಂದರಾಜ್ (95) ನಿಧನ
ಸ್ವಾತಂತ್ರ್ಯ ಯೋಧ ಜಿ. ಗೋವಿಂದರಾಜ್
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Jan 16, 2023 | 11:10 AM

ದಾವಣಗೆರೆ: ‌ಜಿಲ್ಲೆಯ ಹರಿಹರ ನಗರದ ಹಿರಿಯ ಸ್ವಾತಂತ್ರ್ಯ ಯೋಧ ಜಿ.ಗೋವಿಂದರಾಜ್ (95) ಇಂದು ಅವರ ನಿವಾಸದಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ದೇಶದ ಸ್ವಾತಂತ್ರ್ಯ ಹೋರಾಟದ ವೇಳೆ ಹರಿಹರ ಹಾಗೂ ದಾವಣಗೆರೆ ಸೇರಿದಂತೆ ಹಲವಾರು ಕಡೆ ನಡೆದ ಹೋರಾಟದಲ್ಲಿ ಗೋವಿಂದರಾಜ್ ಭಾಗಿ ಆಗಿದ್ದರು. ಜೊತೆಗೆ ಆರ್ಯ ಈಡಿಗರ ಸಮಾಜದ ಅಧ್ಯಕ್ಷರಾಗಿಯೂ ಕೂಡ ಸೇವೆ ಸಲ್ಲಿಸಿದ್ದರು. ಇಂದು ಗೋವಿಂದರಾಜು ಅವರು ಮೂವರು ಪುತ್ರರು ಹಾಗೂ ಮೂರು ಜನ ಪುತ್ರಿಯರು ಸೇರಿದಂತೆ ಅಪಾರ ಬಂಧುಗಳನ್ನ ಅಗಲಿದ್ದು, ಹರಿಹರ ನಗರದ ಧಾಲ್ಮಿಯಾ ವಿಶ್ರಮ್​ಘಾಟ್​ನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

ದೇಶದಲ್ಲಿ ಅಂದು ಸ್ವಾತಂತ್ರ್ಯ ಹೋರಾಟದ ಕಾವು ಹೆಚ್ಚಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಮೂರು ಜನ 18 ರಿಂದ 20ವರ್ಷದೊಳಗಿನ ಚಿಗುರು ಮೀಸೆ ಯುವಕರು ಹೋರಾಟಕ್ಕೆ ಹೆಸರಾಗಿದ್ದರು. ಅವರೇ ಹರಿಹರದ ತ್ರಿಮೂರ್ತಿಗಳು ಚಂದ್ರಶೇಖರಯ್ಯ, ಜಿ.ಕೃಷ್ಣಮೂರ್ತಿ ಹಾಗೂ ಜಿ. ಗೋವಿಂದರಾಜ್. ಜಿಲ್ಲೆಯ ಹರಿಹರ ನಗರ ಸಿವಾಸಿಗಳಾದ ಇವರು ಪೋಸ್ಟ್​ ಆಫೀಸ್ ಸೇರಿದಂತೆ ಹಲವಾರು ಕಡೆ ಹೋರಾಟ ಮಾಡುತ್ತಲೇ ಇದ್ದರು. ಹರಿಹರ ಅಂದರೆ ಕೈಗಾರಿಕೆಗೆ ಪ್ರಸಿದ್ಧವಾದ ಸ್ಥಳ ಆದ್ದರಿಂದ ಹಲವಾರು ಕಂಪನಿಗಳಿದ್ದವು ಇದೇ ಕಾರಣಕ್ಕೆ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹತ್ತಾರು ಕಡೆಯಿಂದ ಬಂದ ಕಾರ್ಮಿಕ ವರ್ಗ ಇಲ್ಲಿ ನೆಲೆಸಿತ್ತು. ಇವರನ್ನೆಲ್ಲ ಹೋರಾಟಕ್ಕಾಗಿ ಸಜ್ಜುಗೊಳಿಸಿದ್ದು ಇದೇ ಹರಿಹರದ ತ್ರಿಮೂರ್ತಿಗಳು. ಅಂದು ಬ್ರಿಟಿಷ್ ಅಧಿಕಾರಿಗಳಿಗೆ ಕಿರಿಕಿರಿ ಆಗುವಷ್ಟು ಇವರ ಹೋರಾಟವಿದ್ದಿತ್ತು. ಈ ಮೂವರಲ್ಲಿ ಕೊನೆಯದಾಗಿ ಉಳಿದಿದ್ದ ಜಿ.ಗೋವಿಂದರಾಜ್ ಅವರು ಇಂದು ನಮ್ಮನ್ನೆಲ್ಲ ಅಗಲಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:00 am, Mon, 16 January 23

ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ