ಆಡಿಯೋ, ವೀಡಿಯೋ ಬಾಂಬ್ ಏನಾದ್ರು ಮಾಡಿ; ಜನ ನ್ಯೂಕ್ಲಿಯರ್ ಬಾಂಬ್ ಇಟ್ಕೊಂಡು ನಿಮ್ಮನ್ನ ಮುಗಿಸಲು ಕಾಯ್ತಿದ್ದಾರೆ: ಸುಮಲತಾ ಅಂಬರೀಶ್

| Updated By: ganapathi bhat

Updated on: Jul 05, 2021 | 4:01 PM

ಮೊದಲು ಕುಮಾರಸ್ವಾಮಿ ಕೊಟ್ಟ ಹೇಳಿಕೆಗೆ ಕ್ಷಮೆ ಕೇಳಲಿ. ಆಮೇಲೆ ಏನುಬೇಕಾದರೂ ಬಿಡುಗಡೆ ಮಾಡಲಿ. ಚುನಾವಣೆವರೆಗೂ ಯಾಕೆ ಈಗಲೇ ಆಡಿಯೋ, ವಿಡಿಯೋ ಬಿಡುಗಡೆ ಮಾಡಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಆಡಿಯೋ, ವೀಡಿಯೋ ಬಾಂಬ್ ಏನಾದ್ರು ಮಾಡಿ; ಜನ ನ್ಯೂಕ್ಲಿಯರ್ ಬಾಂಬ್ ಇಟ್ಕೊಂಡು ನಿಮ್ಮನ್ನ ಮುಗಿಸಲು ಕಾಯ್ತಿದ್ದಾರೆ: ಸುಮಲತಾ ಅಂಬರೀಶ್
ಹೆಚ್ ಡಿ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್
Follow us on

ಬೆಂಗಳೂರು: ಕೆಆರ್​ಎಸ್ ಡ್ಯಾಂ ವಿಚಾರವಾಗಿ ಆರಂಭವಾದ ಸಂಸದೆ ಸುಮಲತಾ ಅಂಬರೀಶ್ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಆರೋಪ, ಪ್ರತ್ಯಾರೋಪ ವಿವಾದ ಮತ್ತೂ ಮುಂದುವರಿದಿದೆ. ಕುಮಾರಸ್ವಾಮಿ ಇಂದೇ ಆಡಿಯೋ, ವಿಡಿಯೋ ಬಿಡುಗಡೆ ಮಾಡಲಿ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸವಾಲು ಹಾಕಿದ್ದಾರೆ. ಆಡಿಯೋ ಬಾಂಬ್, ವೀಡಿಯೋ ಬಾಂಬ್ ಏನಾದ್ರು ಮಾಡಿ. ಜನ ನ್ಯೂಕ್ಲಿಯರ್ ಬಾಂಬ್ ಇಟ್ಟುಕೊಂಡು ಕಾಯ್ತಿದ್ದಾರೆ. ನಿಮ್ಮನ್ನ ಮುಗಿಸಲು ಜನರು ಕಾಯುತ್ತಿದ್ದಾರೆ ಎಂದು ಸುಮಲತಾ ಹೇಳಿದ್ದಾರೆ.

ಮೊದಲು ಕುಮಾರಸ್ವಾಮಿ ಕೊಟ್ಟ ಹೇಳಿಕೆಗೆ ಕ್ಷಮೆ ಕೇಳಲಿ. ಆಮೇಲೆ ಏನುಬೇಕಾದರೂ ಬಿಡುಗಡೆ ಮಾಡಲಿ. ಚುನಾವಣೆವರೆಗೂ ಯಾಕೆ ಈಗಲೇ ಆಡಿಯೋ, ವಿಡಿಯೋ ಬಿಡುಗಡೆ ಮಾಡಿ ಎಂದು ವಾಗ್ದಾಳಿ ನಡೆಸಿದ್ದಾರೆ. ಮಂಡ್ಯದಲ್ಲಿ ನಡೆಯುವ ಅಕ್ರಮಗಳನ್ನ ಪ್ರಶ್ನಿಸಿದ್ದಕ್ಕೆ ಇದೆಲ್ಲ ಆಗುತ್ತಿದೆ. ಮೈಶುಗರ್ ಕಾರ್ಖಾನೆ ತೆರೆಯಲು ಬಿಡದಿರುವುದು ಉದ್ದೇಶವಾಗಿದೆ. ಸೋಲಿನ ಹತಾಶೆ, ಚುನಾವಣೆ ಗಮನದಲ್ಲಿಟ್ಟುಕೊಂಡು ಕುಮಾರಸ್ವಾಮಿ ಈ ರೀತಿಯ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಸುಮಲತಾ ಆರೋಪಿಸಿದ್ದಾರೆ.

ಇದಕ್ಕೂ ಮೊದಲು, ಸಂಸದೆ ಸುಮಲತಾ ಅಂಬರೀಶ್ ವಿರುದ್ದ ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಸ್ಪಷ್ಟನೆ ನೀಡಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ಕೆಆರ್​ಎಸ್ ಆಣೆಕಟ್ಟಿನ ಬಾಗಿಲಿಗೆ ಸುಮಲತಾರನ್ನ ಮಲಗಿಸಿ ಎಂದು ‘ಕೆಆರ್​ಎಸ್​ ಡ್ಯಾಂ ಕಾವಲಿಗೆ ಇರಿಸಿ‘ ಎಂಬರ್ಥದಲ್ಲಿ ಹೇಳಿದ್ದೆ ಎಂದು ಜೆಡಿಎಸ್ ವರಿಷ್ಠರೂ ಆಗಿರುವ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ದಿಶಾ ಮೀಟಿಂಗ್​ನಲ್ಲಿ ಏಕೆ ಕೆಆರ್​ಎಸ್​ ಡ್ಯಾಂ ಬಗ್ಗೆ ಚರ್ಚೆ ನಡೆಸಿದ್ದಾರೋ ತಿಳಿದಿಲ್ಲ. ಸಂಸದರ ಜವಾಬ್ದಾರಿ ಏನೆಂದು ಅವರು ಅರಿತುಕೊಳ್ಳಬೇಕು. ಮಂಡ್ಯ ಸಂಸದರಾಗಿ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಹೋದಲ್ಲಿ ಬಂದಲ್ಲಿ ಒಂದೇ ವಿಚಾರ ಪ್ರಸ್ತಾಪಿಸುವುದು ಬೇಡ. ಹಾಗಾಗಿ ಕೆಆರ್​ಎಸ್ ರಕ್ಷಣೆಗೆ ಅವರನ್ನೇ ಕಳುಹಿಸಿ ಎಂದಿದ್ದೆ. ಅವರು ಏನು ಮಾಡಿದ್ದಾರೆ ಎಂಬುದನ್ನು ಚುನಾವಣೆ ಸಮಯದಲ್ಲಿ ಜನರ ಮುಂದೆ ಇಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಅಧಿಕಾರ ಯಾರಿಗೂ ಶಾಶ್ವತವಲ್ಲ, ಅವಕಾಶ ಬಳಸಿಕೊಳ್ಳಿ. ನಿಮ್ಮನ್ನು ಗೆಲ್ಲಿಸಿರುವ ಜನರಿಗೆ ಕೈಲಾದಷ್ಟು ಸಹಾಯ ಮಾಡಿ. ಚುನಾವಣೆ ಸಂದರ್ಭದಲ್ಲಿ ಜನರ ಮುಗ್ಧತೆ, ಸ್ವಾಭಿಮಾನಕ್ಕೆ ಎಲ್ಲಿ ಧಕ್ಕೆ ಆಗಿದೆ ಎಂಬುದನ್ನು ಜನರ ಮುಂದಿಡುವೆ. ಯಾರ ಜತೆ ಏನೆಲ್ಲ ಮಾಡಿದ್ದಾರೆಂದು ದಾಖಲೆ ಮುಂದಿಡುವೆ. ನನ್ನ ಸ್ನೇಹಿತ ತೀರಿಕೊಂಡಾಗ ಸರ್ಕಾರದ ವತಿಯಿಂದ ಗೌರವ ಸಲ್ಲಿಸಲಾಗಿತ್ತು. ಬೇರೆ ಯಾರೇ ಆಗಿದ್ದರೂ ಅಷ್ಟು ಗೌರವ ಸಿಗುತ್ತಿರಲಿಲ್ಲ. ಮಂಡ್ಯ ಜಿಲ್ಲೆಯ ಮೇಲಿನ ಅಭಿಮಾನದಿಂದ ಗೌರವ ಸಲ್ಲಿಸಿದ್ದೆ. ಸಂಸದರಾಗಿ ಹೇಗೆ ಕೆಲಸ ಮಾಡಬೇಕೆಂದು ಕಲಿತುಕೊಳ್ಳಬೇಕು. ಚುನಾವಣೆ ಅಂದ್ಮೇಲೆ ಸೋಲು ಗೆಲುವು ಸಹಜ ಪ್ರಕ್ರಿಯೆ. ದೇವೇಗೌಡರು, ಅಂಬರೀಶ್, ನಾನು ಎಲ್ಲರೂ ಸೋತಿದ್ದೇವೆ. ಇವರ ಪ್ರಶ್ನೆಗಳಿಗೆ ಚುನಾವಣೆ ಸಂದರ್ಭದಲ್ಲೇ ಉತ್ತರಿಸುವೆ. ಯಾವುದೇ ದಾಖಲೆಗಳಿಲ್ಲದೆ ನಾನು ಮಾತನಾಡುವುದಿಲ್ಲ. ಚುನಾವಣೆ ಬರಲಿ ಎಲ್ಲಾ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಟಿವಿ9 ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಕೆಆರ್​ಎಸ್ ಸೋರುತ್ತಿದ್ದರೆ ಅದರ ನೀರು ಸೋರದಂತೆ ಸುಮಲತಾರನ್ನ ಮಲಗಿಸಬೇಕು: ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ

ನಾನು ಮಂಡ್ಯ ಕ್ಷೇತ್ರದ ಜನರಿಗೆ ಉತ್ತರದಾಯಿ, ಕುಮಾರಸ್ವಾಮಿಗಲ್ಲ: ಕುಮಾರಸ್ವಾಮಿ ಲೆವೆಲ್​ಗೆ ಇಳಿದು ಮಾತನಾಡೊಲ್ಲ- ಸುಮಲತಾ

Published On - 3:41 pm, Mon, 5 July 21