ಮಂಡ್ಯದಲ್ಲಿ ಕೆಂಡ ಹಾಯುವ ವೇಳೆ ಆಯತಪ್ಪಿ ಕೊಂಡಕ್ಕೆ ಬಿದ್ದ ಅರ್ಚಕ..

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅಮೃತೇಶ್ವರಹಳ್ಳಿಯಲ್ಲಿ ಗ್ರಾಮದಲ್ಲಿ ಗ್ರಾಮದೇವತೆಯ ಹಬ್ಬ ಆಚರಣೆ ಮಾಡಲಾಗುತ್ತಿತ್ತು. ಗ್ರಾಮದೇವತೆಯ ಜಾತ್ರಾಮಹೋತ್ಸವದ ಅಂಗವಾಗಿ ವಾಡಿಕೆಯಂತೆ ಅಗ್ನಿ ಕೊಂಡ ಹಾಯುವಾಗ ಅರ್ಚಕರು ಆಯತಪ್ಪಿ ಕೊಂಡಕ್ಕೆ ಬಿದ್ದಿದ್ದಾರೆ.

ಮಂಡ್ಯದಲ್ಲಿ ಕೆಂಡ ಹಾಯುವ ವೇಳೆ ಆಯತಪ್ಪಿ ಕೊಂಡಕ್ಕೆ ಬಿದ್ದ ಅರ್ಚಕ..
ಆಯತಪ್ಪಿ ಕೊಂಡಕ್ಕೆ ಬಿದ್ದ ಅರ್ಚಕ
ಆಯೇಷಾ ಬಾನು Edited By:

Updated on: Mar 24, 2021 | 4:53 PM

ಮಂಡ್ಯ: ಗ್ರಾಮ ದೇವತೆ ಹಬ್ಬದ ಅಂಗವಾಗಿ ಕೆಂಡ ಹಾಯಲು ಹೋಗಿದ್ದ ಅರ್ಚಕ ಆಯತಪ್ಪಿ ಕೊಂಡಕ್ಕೆ ಬಿದ್ದ ಭಯಾನಕ ಘಟನೆಯೊಂದು ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ. ಅಗ್ನಿ ಕೊಂಡಕ್ಕೆ ಬಿದ್ದ ಅರ್ಚಕನಿಗೆ ಸುಟ್ಟ ಗಾಯಗಳಾಗಿದ್ದು ಆವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅಮೃತೇಶ್ವರಹಳ್ಳಿಯಲ್ಲಿ ಗ್ರಾಮದಲ್ಲಿ ಗ್ರಾಮದೇವತೆಯ ಹಬ್ಬ ಆಚರಣೆ ಮಾಡಲಾಗುತ್ತಿತ್ತು. ಗ್ರಾಮದೇವತೆಯ ಜಾತ್ರಾಮಹೋತ್ಸವದ ಅಂಗವಾಗಿ ವಾಡಿಕೆಯಂತೆ ಅಗ್ನಿ ಕೊಂಡ ಹಾಯುವಾ ಪದ್ಧತಿ ಇದೆ. ಹೀಗಾಗಿ ಅರ್ಚಕ ಕೊಂಡ ಹಾಯಲು ಹೋಗಿದ್ದಾರೆ. ಆದ್ರೆ ಆಯತಪ್ಪಿ ಕೊಂಡಕ್ಕೆ ಬಿದ್ದಿದ್ದಾರೆ. ತಕ್ಷಣವೇ ಭಕ್ತರು ಕೊಂಡಕ್ಕೆ ಬಿದ್ದ ಅರ್ಚಕರನ್ನು ಮೇಲಕ್ಕೆ ಎತ್ತಿದ್ದಾರೆ. ಗಾಯಾಳು ಅರ್ಚಕನನ್ನು ಎತ್ತಿಕೊಂಡು ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸ್ಥಳದಲ್ಲಿ ಕೆಲ ಕಾಲ ಆತಂಕದ ಛಾಯೆ ಮೂಡಿದ್ದು ಭಕ್ತರು ದೇವರಲ್ಲಿ ತಪ್ಪಾಗಿದ್ದರೆ ಕ್ಷಮಿಸು ಎಂದು ಪ್ರಾರ್ಥಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಗ್ರಾಮದೇವತೆಯ ಹಬ್ಬ ಆಚರಿಸಿಕೊಂಡು ಬಂದಿದ್ದು ಈ ಹಿಂದೆ ಕೂಡ ಜಿಲ್ಲೆಯಲ್ಲಿ ಇಂತಹ ಹಲವಾರು ಪ್ರಕರಣಗಳು ಸಂಭವಿಸಿವೆ. ಈ ಬಾರಿ ಸಹ ಇಂತಹ ಅಚಾತುರ್ಯ ಮರುಕಳಿಸಿದೆ. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ರಾಮನಗರದಲ್ಲಿ ಕೆಂಡ ಹಾಯುವ ವೇಳೆ ಕೊಂಡಕ್ಕೆ ಬಿದ್ದ ಅರ್ಚಕ: ಗ್ರಾಮಸ್ಥರಿಂದ ರಕ್ಷಣೆ

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us