ಮಂಡ್ಯ: ಮಗಳ ಕೊಳೆತ (Rotten) ಶವದ ಜತೆ ಮಾನಸಿಕ ಅಸ್ವಸ್ಥ ತಾಯಿ 4 ದಿನ ಕಳೆದಿರುವ ಘಟನೆ ಜಿಲ್ಲೆಯ ಹಾಲಹಳ್ಳಿಯ ಮನೆಯೊಂದರಲ್ಲಿ ಸಂಭವಿಸಿದೆ. ರೂಪಾ ಎಂಬ ಮಹಿಳೆ (Woman) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. 10 ವರ್ಷಗಳ ಹಿಂದೆ ರೂಪಾಗೆ ವಿವಾಹವಾಗಿತ್ತು. ಆದರೆ ಪತಿಯನ್ನು ತೊರೆದು ತವರಿಗೆ ಬಂದಿದ್ದರು. ರೂಪಾಗೆ ಫೋನ್ ಕಾಲ್ ಮಾಡಿದರೆ ತೆಗೆಯುತ್ತಿರಲಿಲ್ಲ. ಜೊತೆಗೆ ಆಕೆಯ ಮನೆಯಿಂದ ವಾಸನೆ ಬರುತ್ತಿತ್ತು. ನಾಗಮ್ಮನ ಮನೆಯಿಂದ ಕೊಳೆತ ವಾಸನೆ ಬರುತ್ತಿದ್ದರಿಂದ ನೆರೆಹೊರೆಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಹೋಮ್ ಗಾರ್ಡ್ ಆಗಿ ಕೆಲಸ ಮಾಡಿ ಕೊಂಡಿದ್ದ ರೂಪಾ, ಕಳೆದ ವರ್ಷ ಈ ಕೆಲಸವನ್ನ ತೊರೆದಿದ್ದರು. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿದ ನಂತರ ರೂಪಾ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಸದ್ಯ ಈ ಪ್ರಕರಣ ಮಂಡ್ಯದ ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪ್ರಕರಣಕ್ಕೆ ಬಿಗ್ ಟ್ವಿಸ್ಟ್:
ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ರೂಪಾಳನ್ನ ಕೊಲೆಗೈದಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಬುಧವಾರ ರಾತ್ರಿ ರೂಪಾಳ ಜೊತೆ ವೃದ್ಧೆ ಮಶಣಮ್ಮ ಜಗಳ ತೆಗೆದಿದ್ದರಂತೆ. ಈ ವೇಳೆ ವೃದ್ಧೆ ಮಶಣಮ್ಮನ ಕಪಾಳಕ್ಕೆ ರೂಪಾ ಹೊಡೆದಿದ್ದಾಳೆ. ಈ ಹಿನ್ನೆಲೆ ರೂಪಳ ಮೇಲೆ ಮಶಣಮ್ಮರ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ. ರೂಪಾಳ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಮುಷ್ಠಿ ಮಾಡಿ ಗುದ್ದಿದ್ದಾರೆ. ಈ ಹಿನ್ನೆಲೆ ಎದೆ ನೋವಿನಿಂದ ರೂಪಾ ಸಾವನ್ನಪ್ಪಿದ್ದಾರೆಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: Automobile News: BSA ಬ್ರಾಂಡ್ ಹೆಸರಿನಲ್ಲಿ ಅಭಿವೃದ್ಧಿಯಾಗುತ್ತಿದೆ ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್
ಚಾಕು ಇರಿದಿದ್ದ ಆರೋಪಿಗಳು ಅರೆಸ್ಟ್!
ಧಾರವಾಡ: ಚಾಕು ಇರಿತ ಕೇಸ್ನ ನಾಲ್ವರು ಆರೋಪಿಗಳನ್ನು ಕಲಘಟಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ದುಷ್ಕರ್ಮಿಗಳು ಮೇ 25ರಂದು ಅರ್ಜುನ್ ಕಾಳೆಗೆ ಚಾಕು ಇರಿದಿದ್ದರು. ಗಂಭೀರ ಗಾಯಗೊಂಡಿದ್ದ ಅರ್ಜುನ್ನನ್ನು ಕಿಮ್ಸ್ಗೆ ದಾಖಲಿಸಲಾಗಿತ್ತು. ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ 7 ಜನರ ಗುಂಪು ಚಾಕು ಇರಿದಿತ್ತು. ನಂತರ 2 ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಕಲಘಟಗಿ ಪಟ್ಟಣದ ಅಮೀಜ್ ಖಾನ್ ಬಾರಿಗಿಡದ, ಅಬ್ದುಲ್ ಅಪ್ರೀದ್ ಖಾನ್ ಬಿಜಾಪುರ, ಮೊಹಮ್ಮದ್ ಹುಸೇನ್ ಬಂಧನಕ್ಕೊಳಗಾಗಿದ್ದಾರೆ.
ಈಜಲು ತೆರಳಿದ್ದ ಬಾಲಕ ಸಾವು:
ರಾಯಚೂರು: ಸ್ನೇಹಿತರ ಜೊತೆ ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕ ಸಾವನ್ನಪ್ಪಿದ್ದಾನೆ. ಜಿಲ್ಲೆ ಮಸ್ಕಿ ತಾಲೂಕಿನ ಅಕುಶದೊಡ್ಡಿ ಗ್ರಾಮದ ನಿವಾಸಿ ಮಂಜುನಾಥ(14) ಮೃತ ಯುವಕ. ಹೂವಿನಬಾವಿ ಕೆರೆಯಲ್ಲಿ ಈಜಲು ತೆರಳಿದ್ದಾಗ ಬಾಲಕ ನಿರಿನಲ್ಲಿ ಮುಳುಗಿದ್ದ. ಸದ್ಯ ಬಾಲಕ ಮಂಜುನಾಥನ ಶವವನ್ನು ಗ್ರಾಮಸ್ಥರು ಹೊರ ತೆಗೆದಿದ್ದಾರೆ. ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:50 am, Tue, 31 May 22