ಹೃದಯ ವಿದ್ರಾವಕ ಘಟನೆ… ತನ್ನ 3 ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆಗೆ ಶರಣು
ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆಯೊಬ್ಬಳು ತನ್ನ ಮೂರು ಚಿಕ್ಕ-ಚಿಕ್ಕ ಮಕ್ಕಳನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಂಡ್ಯ ಜಿಲ್ಲೆಯಲ್ಲಿ ಈ ಮನಕಲಕುವ ಘಟನೆ ನಡೆದಿದೆ.
ಮಂಡ್ಯ: ತಾಯಿಯೊಬ್ಬಳು(Mother) ತನ್ನ ಮೂವರು ಮಕ್ಕಳನ್ನು ಕೊಂದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಮಂಡ್ಯ (Mandya) ಜಿಲ್ಲೆಯ ಮದ್ದೂರು ತಾಲೂಕಿ ಮದೊದೂರಿನ ಗ್ರಾಮದಲ್ಲಿ ನಡೆದಿದೆ. ತಾಯಿ ಉಷ್ನಾ ಬಾನು, ತನ್ನ ಮಕ್ಕಳಾದ ಹಾರಿಸ್(7), ಆಲಿಸಾ(4), ಫಾತಿಮಾ(2)ಗೆ ವಿಷವುಣಿಸಿ ಕೊಂದಿದ್ದಾಳೆ. ಬಳಿಕ ತಾನೂ ಸಹ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇದನ್ನೂ ಓದಿ: Yadgiri: ಅಳುತ್ತಿದೆ ಎನ್ನುವ ಕಾರಣಕ್ಕೆ ತನ್ನ 9 ತಿಂಗಳು ಮಗುವನ್ನೇ ಕೊಂದ ಕ್ರೂರಿ ತಂದೆ!
ನರ್ಸಿಂಗ್ ಕೆಲಸಕ್ಕೆ ಹೋಗುತ್ತಿದ್ದ ಉಷ್ನಾ ಬಾನು ಹಾಗೂ ಪತಿ ಅಖಿಲ್ ಅಹ್ಮದ್ ಮಧ್ಯೆ ಕಳೆದ 1 ವರ್ಷದಿಂದ ವಿರಸವಿತ್ತು. ಕೌಟುಂಬಿಕ ಕಲಹಕ್ಕೆ ಬೇಸತ್ತು, ಉಷ್ನಾ ಬಾನು ಇಂದು(ಡಿಸೆಂಬರ್ 01) ಮನೆಯಲ್ಲಿ ಯಾರು ಇಲ್ಲದ ವೇಳೆ ತನ್ನ ಮೂರು ಮಕ್ಕಳಿಗೆ ವಿಷವುಣಿಸಿ ಬಳಿಕ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಮದ್ದೂರು ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ