ಮಂಡ್ಯ, ಡಿ.17: ಫೇಸ್ ಬುಕ್(Facebook)ನಲ್ಲಿ ಮಹಿಳೆಯರನ್ನು ಪರಿಚಯ ಮಾಡಿಕೊಂಡು ತನ್ನ ಸಮಸ್ಯೆಯ ಹೇಳಿ ಹಣ ದೋಚುತ್ತಿದ್ದ ಆಸಾಮಿಯನ್ನ ಮಂಡ್ಯ(Mandya) ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಂಜನ್ ಗೌಡ ಬಂಧಿತ ಆರೋಪಿ. ನೋಡುವುದಕ್ಕೆ ಅಂದವಾಗಿ ಕಂಡರು ಇತ ಮಾಡುತ್ತಿದ್ದದ್ದು ಮಾತ್ರ ಖತರ್ನಾಕ್ ಕೆಲಸ. ಈತನ ಬಣ್ಣದ ಮಾತಿಗೆ ಅದೆಷ್ಟೋ ಮಹಿಳೆಯರು(Womans) ಲಕ್ಷಾಂತರ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. ಎಲ್ಲಿ ಗಂಡನಿಗೆ, ಕುಟುಂಬಸ್ಥರಿಗೆ ಗೊತ್ತಾಗಿ ಬಿಡುತ್ತೆ ಎಂದು ಎಷ್ಟೋ ಜನ ಮಹಿಳೆಯರು ದೂರು ಕೊಡಲು ಸಹಾ ಹಿಂದೇಟು ಹಾಕಿದ್ದಾರೆ. ಆದರೆ, ಇತ್ತೀಚೆಗೆ ಈತನಿಂದ ಮೋಸಹೋದ ಮಹಿಳೆಯೊಬ್ಬಳು, ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಅದರಂತೆ ಪೊಲೀಸರು ಆರೋಪಿ ರಂಜನ್ನನ್ನು ಬಂಧಿಸಿ ವಿಚಾರಣೆ ಮಾಡಿದಾಗ, ಇದೇ ರೀತಿ ಹತ್ತಾರು ಮಹಿಳೆಯರಿಗೆ ಮೋಸ ಮಾಡಿರುವುದು ಕೂಡ ಗೊತ್ತಾಗಿದೆ. ಬಳಿಕ ಆರೋಪಿಯಿಂದ 182 ಗ್ರಾಂ ಚಿನ್ನಾಭರಣವನ್ನು ಕೂಡ ವಶಕ್ಕೆ ಪಡೆದಿದ್ದಾರೆ.
ಮಂಡ್ಯ ತಾಲೂಕಿನ ಚಂದಗಾಲು ಗ್ರಾಮದ ನಿವಾಸಿಯಾದ ಆರೋಪಿ ರಂಜನ್ ಗೌಡ, ಬಿಕಾಂ ಫೇಲ್ ಆಗಿದ್ದ. ಯಾವುದೇ ಕೆಲಸ ಮಾಡದೇ ಫೇಸ್ ಬುಕ್ ನೋಡುತ್ತಾ. ಅಲ್ಲಿ ಮಹಿಳೆಯರು ಹಾಗೂ ವಿಧವೆಯರನ್ನ ಪರಿಚಯ ಮಾಡಿಕೊಂಡು, ನಂತರ ಅವರ ಬಳಿ ಬಣ್ಣದ ಮಾತುಗಳನ್ನಾಡಿ, ಇವನ ಬುಟ್ಟಿಗೆ ಬೀಳುತ್ತಿದ್ದಂತೆ ತನಗೆ ಕಷ್ಟವಿದೆ. ಸ್ವಲ್ಪ ಹಣಕೊಡಿ ಎಂದು ಕೇಳುತ್ತಿದ್ದ. ಹಣವಿಲ್ಲ ಅಂದಾಗ ನಿಮ್ಮ ಚಿನ್ನಾಭರಣ ಕೊಡಿ, ಅಡವಿಟ್ಟು ಆನಂತರ ಬಿಡಿಸಿಕೊಡುತ್ತೇನೆ ಎಂದು ಹೇಳುತ್ತಿದ್ದ. ಈತನ ಮಾತನ್ನ ಕೇಳಿ ಅದೆಷ್ಟೋ ಮಹಿಳೆಯರು ಚಿನ್ನಾಭರಣ ಕೊಡುತ್ತಿದ್ದರು. ಚಿನ್ನಾಭರಣ ಕೊಡುತ್ತಿದ್ದಂತೆ ನಂತರ ಮೊಬೈಲ್ ಸ್ವೀಚ್ ಆಫ್ ಮಾಡಿ, ಮಹಿಳೆಯರಿಗೆ ಕೈಗೆ ಸಿಗದೇ ಪರಾರಿಯಾಗುತ್ತಿದ್ದ.
ಇದನ್ನೂ ಓದಿ:ಮಹಿಳೆಯಿಂದ ಮೋಸ; ಫೇಸ್ಬುಕ್ನಲ್ಲಿ ಲೈವ್ ಬಂದು ವಿಷ ಕುಡಿದ ಕಾಮಿಡಿಯನ್
ಇದೇ ರೀತಿ ಸಾಕಷ್ಟು ಮಹಿಳೆಯರಿಗೆ ಆರೋಪಿ ರಂಜನ್ ಗೌಡ ಮೋಸ ಮಾಡಿದ್ದಾನೆ. ಎಷ್ಟೋ ಹೆಣ್ಣುಮಕ್ಕಳು ದೂರು ಕೊಡಲು ಸಹಾ ಹಿಂದೇಟು ಹಾಕಿದ್ದಾರೆ. ದೂರು ಕೊಟ್ಟರೇ ತನ್ನ ಗಂಡನಿಗೆ, ಕುಟುಂಬಸ್ಥರಿಗೆ ಗೊತ್ತಾಗಿ ಬಿಡುತ್ತದೆ ಎಂದು ದೂರು ಕೊಡಲು ಸಹಾ ಹಿಂದೇಟು ಹಾಕಿದ್ದಾರೆ. ಮಂಡ್ಯ, ತುಮಕೂರು, ಬೆಂಗಳೂರು ಮೂಲದ ಸಾಕಷ್ಟು ಮಹಿಳೆಯರಿಗೆ ಪಂಗನಾಮ ಹಾಕಿದ್ದಾನೆ. ಇನ್ನು ಇತ ಈ ಹಿಂದೆ ಕೂಡ ಇದೇ ರೀತಿ ಮೋಸ ಮಾಡಿ ಜೈಲು ಪಾಲಾಗಿದ್ದು, ಜೈಲಿನಿಂದ ಬಂದ ಮೇಲೂ ತನ್ನ ಚಾಳಿಯನ್ನ ಮುಂದುವರೆಸಿದ್ದ. ಇನ್ನು ಮಹಿಳೆಯರಿಂದ ಪಡೆದ ಚಿನ್ನಾಭರಣಗಳನ್ನ ಕೆಲವು ಕಡೆ ಅಡವಿಟ್ಟರೇ, ಮತ್ತಷ್ಟು ಚಿನ್ನಾಭರಣವನ್ನ ಮಾರಾಟ ಮಾಡಿ ಮೋಜು ಮಸ್ತಿ ಮಾಡುತ್ತಿದ್ದ. ಒಟ್ಟಾರೆ ಫೇಸ್ ಬುಕ್ ಮೂಲಕ ಮಹಿಳೆಯರನ್ನ ಪರಿಚಯ ಮಾಡಿಕೊಂಡು ಮೋಸ ಮಾಡುತ್ತಿದ್ದ ಆರೋಪಿಯನ್ನ ಪೊಲೀಸರು ಜೈಲಿಗೆ ಅಟ್ಟಿದ್ದಾರೆ. ಇನ್ನಾದರೂ ಫೇಸ್ ಬುಕ್ ಬಳಕೆ ಮಾಡುವ ಮಹಿಳೆಯರು ಎಚ್ಚರವಹಿಸಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ