ಮಹಿಳೆಯಿಂದ ಮೋಸ; ಫೇಸ್​ಬುಕ್​​ನಲ್ಲಿ ಲೈವ್​ ಬಂದು ವಿಷ ಕುಡಿದ ಕಾಮಿಡಿಯನ್

ತೀರ್ಥಾನಂದ್ ಅವರು ಫೇಸ್​ಬುಕ್ ಲೈವ್ ಬಂದಿದ್ದಾರೆ. ಈ ವೇಳೆ ಅವರು ಲಿವ್​-ಇನ್ ರಿಲೇಷನ್​ಶಿಪ್ ಬಗ್ಗೆ, ಬ್ಲಾಕ್​ಮೇಲ್ ಮಾಡುತ್ತಿರುವ ಬಗ್ಗೆ, ಹಣ ಕಿತ್ತಿರುವ ಬಗ್ಗೆ ಅವರು ಆರೋಪಿಸಿದ್ದಾರೆ.

ಮಹಿಳೆಯಿಂದ ಮೋಸ; ಫೇಸ್​ಬುಕ್​​ನಲ್ಲಿ ಲೈವ್​ ಬಂದು ವಿಷ ಕುಡಿದ ಕಾಮಿಡಿಯನ್
ಕಪಿಲ್ ಶರ್ಮಾ ಜೊತೆ ತೀರ್ಥಾನಂದ್
Follow us
|

Updated on: Jun 14, 2023 | 10:40 AM

ನಟ ಹಾಗೂ ಕಾಮಿಡಿಯನ್ ತೀರ್ಥಾನಂದ್​ ರಾವ್ (Tirthanand Rao) ಅವರು ಕಪಿಲ್ ಶರ್ಮಾ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ‘ಕಾಮಿಡಿ ಸರ್ಕಸ್​​ ಕೆ ಆಜೂಬೆ’ ಶೋನಲ್ಲಿ ಕಪಿಲ್ ಶರ್ಮಾ (Kapil Sharma) ಜೊತೆ ಅವರು ಕೆಲಸ ಮಾಡಿದ್ದರು. ಈಗ ಅವರು ಫೇಸ್​ಬುಕ್ ಲೈವ್ ಬಂದು ವಿಷ ಕುಡಿದಿದ್ದಾರೆ. ‘ನನ್ನ ಸಾವಿಗೆ ಆ ಮಹಿಳೆಯೇ ಕಾರಣ’ ಎಂದು ಕಿಡಿಕಾರಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ತೀರ್ಥಾನಂದ್ ಅವರ ಆರೋಗ್ಯದ ಬಗ್ಗೆ ಎಲ್ಲರಿಗೂ ಆತಂಕ ಮೂಡಿದೆ.

ತೀರ್ಥಾನಂದ್ ಅವರು ಫೇಸ್​ಬುಕ್ ಲೈವ್ ಬಂದಿದ್ದಾರೆ. ಈ ವೇಳೆ ಅವರು ಲಿವ್​-ಇನ್ ರಿಲೇಷನ್​ಶಿಪ್ ಬಗ್ಗೆ, ಬ್ಲಾಕ್​ಮೇಲ್ ಮಾಡುತ್ತಿರುವ ಬಗ್ಗೆ, ಹಣ ಕಿತ್ತಿರುವ ಬಗ್ಗೆ ಅವರು ಆರೋಪಿಸಿದ್ದಾರೆ. ಈ ಸಂಬಂಧ ದೂರು ದಾಖಲಾಗಿದ್ದು, ಆ ಯುವತಿ ಯಾರು ಎಂಬಿತ್ಯಾದಿ ವಿಚಾರ ಇನ್ನಷ್ಟೇ ಬಯಲಿಗೆ ಬರಬೇಕಿದೆ.

‘ಮಹಿಳೆಯಿಂದಾಗಿ ನಾನು 3-4 ಲಕ್ಷ ರೂಪಾಯಿ ಸಾಲದಲ್ಲಿದ್ದೇನೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನನಗೆ ಅವಳ ಪರಿಚಯ ಆಯಿತು. ಆಕೆ ನನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಆದರೆ ಇದಕ್ಕೆ ಕಾರಣ ನನಗೆ ತಿಳಿದಿಲ್ಲ. ನಂತರ ಆಕೆ ನನಗೆ ಕರೆ ಮಾಡಿ ಭೇಟಿಯಾಗಬೇಕೆಂದು ಹೇಳುತ್ತಿದ್ದಳು’ ಎಂದು ತೀರ್ಥಾನಂದ್ ವಿಡಿಯೋದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಇನ್ನೂ ಮುಗಿಯಲಿಲ್ಲ ಮುನಿಸು; ಕಪಿಲ್ ಶರ್ಮಾ ಶೋಗೆ ಸುನೀಲ್ ಗ್ರೋವರ್ ಬರೋದು ಅನುಮಾನ 

ಇದಾದ ಬಳಿಕ ಅವರು ವಿಷದ ಬಾಟಲಿ ತೆಗೆದುಕೊಂಡು ಕುಡಿದ್ದಾರೆ. ಆ ಬಳಿಕ ಅವರ ಗೆಳೆಯ ಮನೆಗೆ ಬಂದಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಅಂದಹಾಗೆ, ಈ ರೀತಿ ಅವರು ಆತ್ಮಹತ್ಯೆಗೆ ಪ್ರಯತ್ನಿಸಿರೋದು ಇದೇ ಮೊದಲೇನು ಅಲ್ಲ. 2021ರ ಡಿಸೆಂಬರ್​ನಲ್ಲಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆಯೂ ಅವರು ಲೈವ್ ಬಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ