AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನೂ ಮುಗಿಯಲಿಲ್ಲ ಮುನಿಸು; ಕಪಿಲ್ ಶರ್ಮಾ ಶೋಗೆ ಸುನೀಲ್ ಗ್ರೋವರ್ ಬರೋದು ಅನುಮಾನ

ಸುನೀಲ್ ಅವರಿಗೆ ಈ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಮತ್ತೆ ಕಪಿಲ್ ಶರ್ಮಾ ಜೊತೆ ಕೈ ಜೋಡಿಸುತ್ತೀರೆ ಎಂದು ಕೇಳಲಾಗಿದೆ. ಇದಕ್ಕೆ ಅವರು ಉತ್ತರಿಸಿದ್ದಾರೆ.

ಇನ್ನೂ ಮುಗಿಯಲಿಲ್ಲ ಮುನಿಸು; ಕಪಿಲ್ ಶರ್ಮಾ ಶೋಗೆ ಸುನೀಲ್ ಗ್ರೋವರ್ ಬರೋದು ಅನುಮಾನ
ಸುನೀಲ್​-ಕಪಿಲ್ ಶರ್ಮಾ
ರಾಜೇಶ್ ದುಗ್ಗುಮನೆ
|

Updated on:Apr 08, 2023 | 9:04 AM

Share

ಸುನೀಲ್ ಗ್ರೋವರ್ ಹಾಗೂ ಕಪಿಲ್ ಶರ್ಮಾ (Kapil Sharma) ಮಧ್ಯೆ ಮುನಿಸು ಏರ್ಪಟ್ಟಿತ್ತು. ಪರಸ್ಪರ ಆಡಿಕೊಂಡ ಮಾತಿನಿಂದ ಇಬ್ಬರೂ ಬೇರೆ ಆದರು. ಆ ಬಳಿಕ ಇಬ್ಬರೂ ಮತ್ತೆ ಒಂದಾಗಲೇ ಇಲ್ಲ. ಕಪಿಲ್ ಶರ್ಮಾ ಶೋನಲ್ಲಿ ಪ್ರಮುಖ ಎನಿಸಿಕೊಂಡಿದ್ದ ಸುನೀಲ್ (Sunil Grover) ಅವರು ಹೊರ ನಡೆದಿದ್ದು ಫ್ಯಾನ್ಸ್​ಗೆ ಬೇಸರ ಮೂಡಿಸಿತ್ತು. ಇತ್ತೀಚೆಗೆ ಅವರು ಮತ್ತೆ ಕಪಿಲ್ ಶರ್ಮಾ ಶೋಗೆ ಮರಳಲಿದ್ದಾರೆ ಎನ್ನಲಾಗಿತ್ತು. ಆದರೆ, ಅದು ಸುಳ್ಳಾಗುವ ಸೂಚನೆ ಸಿಕ್ಕಿದೆ. ಸುನೀಲ್ ಗ್ರೋವರ್ ಅವರು ಮತ್ತೆ ಕಪಿಲ್ ಶರ್ಮಾ ಶೋಗೆ ಬರುವುದಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.

ಸುನೀಲ್ ಅವರಿಗೆ ಈ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಮತ್ತೆ ಕಪಿಲ್ ಶರ್ಮಾ ಜೊತೆ ಕೈ ಜೋಡಿಸುತ್ತೀರೆ ಎಂದು ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ಅವರು, ‘ಅಂತಹದ್ದೇನೂ ಇಲ್ಲ. ಅವರನ್ನು (ಕಪಿಲ್ ಶರ್ಮಾ) ಕೇಳಿ. ನಾನು ನನ್ನ ಕೆಲಸದಲ್ಲಿ ಬ್ಯುಸಿ ಇದ್ದೇನೆ. ನಾನು ಮಾಡುತ್ತಿರುವ ಕೆಲಸದಲ್ಲಿ ಖುಷಿ ಇದೆ. ಅವರೂ ಅವರ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಫಿಕ್ಷನ್​ನಲ್ಲಿ ನನಗೆ ಖುಷಿ ಸಿಕ್ಕಿದೆ. ಈಗ ಹೊಸ ಅನುಭವಗಳನ್ನು ಪಡೆಯುತ್ತಿದ್ದೇನೆ. ಇದೀಗ ಕಾಮಿಡಿ ಶೋಗೆ ಸೇರುವ ಯಾವುದೇ ಯೋಜನೆಗಳಿಲ್ಲ’ ಎಂದಿದ್ದಾರೆ. ಈ ಮೂಲಕ ಅವರು ಕಪಿಲ್ ಶರ್ಮಾ ಶೋಗೆ ಮರಳುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಕಪಿಲ್ ಶರ್ಮಾ ಭೇಟಿ ಮಾಡಿದ ಗಣೇಶ್; ಜನಪ್ರಿಯ ಶೋಗೆ ಗೋಲ್ಡನ್ ಸ್ಟಾರ್ ಅತಿಥಿ

‘ದಿ ಕಪಿಲ್​ ಶರ್ಮಾ ಶೋ’ ಮೂಲಕ ಹೆಚ್ಚು ಗುರುತಿಸಿಕೊಂಡವರು ಸುನೀಲ್​ ಗ್ರೋವರ್. ಗುಲಾಟಿ ಹಾಗೂ ಮಷೂರ್​ ಗುಲಾಟಿ ಪಾತ್ರದ ಮೂಲಕ ಫೇಮಸ್ ಆದರು. ಆದರೆ, ಸುನೀಲ್​ ಹಾಗೂ ಕಪಿಲ್​ ನಡುವೆ ಮನಸ್ತಾಪ ಮೂಡಿತು. ಹೀಗಾಗಿ, ಇಬ್ಬರೂ ಬೇರೆ ಆದರು.

ಸುನೀಲ್ ಗ್ರೋವರ್​ಗೆ ಹೃದಯ ಸರ್ಜರಿ

ಸುನೀಲ್​ ಗ್ರೋವರ್ ಅವರನ್ನು 2022ರ ಫೆಬ್ರವರಿಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರಿಗೆ ಹೃದಯ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾದರು. ಸುನೀಲ್​ ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಕೋರಿಕೊಂಡಿದ್ದರು. ಅವರಿಗೆ ವೈದ್ಯರು ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದರು. ಅವರು ಈಗ ಸಂಪೂರ್ಣವಾಗಿ ಚೇತರಿಕೆ ಕಂಡಿದ್ದಾರೆ. ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:58 am, Sat, 8 April 23