AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಲ್ಕು ವರ್ಷದ ಕಾತುರಕ್ಕೆ ಕೊನೆಗೂ ಬಿತ್ತು ಬ್ರೇಕ್, ಮೈಶುಗರ್ ಕಾರ್ಯಾರಂಭ

ಮೈಶುಗರ್ ಕಾರ್ಖಾನೆ 4 ವರ್ಷದ ಬಳಿಕ ಕಬ್ಬು ನುರಿಸುವ ಕಾರ್ಯ ಆರಂಭಿಸಿದೆ. ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯಕ್ಕೆ ಸಚಿವರಾದ ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣ ಗೌಡರು ಚಾಲನೆ ನೀಡಿದರು.

ನಾಲ್ಕು ವರ್ಷದ ಕಾತುರಕ್ಕೆ ಕೊನೆಗೂ ಬಿತ್ತು ಬ್ರೇಕ್, ಮೈಶುಗರ್ ಕಾರ್ಯಾರಂಭ
ನಾಲ್ಕು ವರ್ಷದ ಕಾತುರಕ್ಕೆ ಕೊನೆಗೂ ಬಿತ್ತು ಬ್ರೇಕ್, ಮೈಶುಗರ್ ಕಾರ್ಯಾರಂಭ
TV9 Web
| Edited By: |

Updated on: Sep 01, 2022 | 10:23 PM

Share

ಮಂಡ್ಯ: ನಾಲ್ಕು ವರ್ಷದ ಕಾತುರಕ್ಕೆ ಕೊನೆಗೂ ಬ್ರೇಕ್ ಬಿದ್ದಿದ್ದು ಮೈಶುಗರ್ ಕಾರ್ಯಾರಂಭವಾಗಿದೆ. ಮೈಶುಗರ್ ಕಾರ್ಖಾನೆ 4 ವರ್ಷದ ಬಳಿಕ ಕಬ್ಬು ನುರಿಸುವ ಕಾರ್ಯ ಆರಂಭಿಸಿದೆ. ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯಕ್ಕೆ ಸಚಿವರಾದ ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣ ಗೌಡರು ಚಾಲನೆ ನೀಡಿದರು. ಯಂತ್ರಕ್ಕೆ ಕಬ್ಬು ಹಾಕುವ ಮೂಲಕ ಚಾಲನೆ ನೀಡಿದ್ರು. ಸಚಿವರಿಗೆ ಸಂಸದೆ ಸುಮಲತಾ, ಶಾಸಕರಾದ ಸಿ.ಎಸ್.ಪುಟ್ಟರಾಜು, ಡಾ.ಕೆ.ಅನ್ನದಾನಿ, ಅಧಿಕಾರಿಗಳು, ರೈತರು ಸಾಥ್ ನೀಡಿದ್ರು.

ಕೊನೆಗೂ ನಾಲ್ಕು ವರ್ಷಗಳ ಕಾಯುವಿಕೆಗೆ ಬ್ರೇಕ್ ಬಿದ್ದಿದೆ. ಮೈ ಶುಗರ್ ಕಾರ್ಖಾನೆ ಮತ್ತೆ ಪುನರಾಂಭವಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಉಸ್ತುವಾರಿ ಸಚಿವರು ಅಧಿಕೃತವಾಗಿ ಕಬ್ಬು ನುರಿಯುವುದಕ್ಕೆ ಚಾಲನೆ ನೀಡಿದ್ದಾರೆ. ಇನ್ನೇನು ಕಬ್ಬು ಅರಗಯಲು ಮೈಶುಗರ್ ಶಕ್ತವಾಗಿದೆ ಅನ್ನೋದ್ರೊಳೊಗೆ ಇದ್ದಕ್ಕಿದ್ದಂತೆ ಯಂತ್ರ ಸ್ಥಗಿತಗೊಂಡು ಸಚಿವ ಗೋಪಾಲಯ್ಯ ಹಾಗೂ ಶಾಸಕರು ತಬ್ಬಿಬ್ಬಾದ ಘಟನೆ ಮಂಡ್ಯದಲ್ಲಿ ನಡೆದಿದೆ. ಸರ್ಕಾರ ಕೊಟ್ಟ ಮಾತಿನಂತೆ ಇಂದು ಅಧಿಕೃತವಾಗಿ 4 ಲಕ್ಷ ಟನ್ ಕಬ್ಬನ್ನ ಕಾರ್ಖಾನೆ ನುರಿಯಲು ಸಜ್ಜಾಗಿದೆ. ಪೂಜೆ ನಡೆಸಿದ ಬಳಿಕ ಯಂತ್ರಕ್ಕೆ ಚಾಲನೆ ನೀಡಲಾಯ್ತು ಆದ್ರೆ ಅರ್ಧ ಗಂಟೆಗಳ ಕಾಲ ಯಂತ್ರ ಸ್ಥಗಿತಗೊಂಡು ಆತಂಕ ಮೂಡಿಸಿತ್ತು ತಕ್ಷಣವೇ ಎಚ್ಚೆತ್ತ ತಾಂತ್ರಿಕ ಸಿಬ್ಬಂದಿ ಲೋಪದೋಷವನ್ನ ಸರಿ ಪಡಿಸಿ ಆತಂಕವನ್ನ ದೂರ ಮಾಡಿದ್ರು.

ಸದ್ಯ ಮೈಶುಗರ್ ಕಾರ್ಖಾನೆ ಅಧಿಕೃತವಾಗಿ ಆರಂಭವಾಗಿದೆ. ಕೊಟ್ಟ ಮಾತಿನಂತೆ ಸರ್ಕಾರ ನಡೆದು ಕೊಂಡಿದೆ. ಈಗ ಶುರುವಾದ ಕಬ್ಬು ನುರಿಯುವ ಕಾರ್ಯ ಹಾಗೇ ಮುಂದುವರೆಯ ಬೇಕಿದೆ. ರೈತರ ಬಾಳಲ್ಲಿ ಮೈಶುಗರ್ ಕಾರ್ಖಾನೆ ಮಂದಹಾಸ ಮೂಡಿಸುತ್ತೆ ಅಂತ ಎಲ್ರು ಭರವಸೆಯನ್ನಿಟ್ಟಿದ್ದಾರೆ. ಆದ್ರೆ ಅಲ್ಪ ಕಾಲಕ್ಕೆ ನಡೆಸಿ ಆಮೇಲೆ ಮತ್ತೆ ಮೈಶುಗರ್ ಗೆ ಬೀಗ ಹಾಕಲಾಗುತ್ತೆ ಇದೆಲ್ಲವು ಚುನಾವಣಾ ಗಿಮಿಕ್ ಅಂತ ಕೆಲವರು ಮಾತಾಡಿ ಕೊಳ್ಳುತ್ತಿದ್ದಾರೆ.

ಅದೇನೆ ಆಗ್ಲಿ ನಾಲ್ಕು ವರ್ಷಗಳ ಕಾಯುವಿಕೆಗೆ ಬ್ರೇಕ್ ಬಿದ್ದಿದೆ. ಸದ್ಯ ಕಾರ್ಖಾನೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಇದು ಹೀಗೆ ಯಾವುದೇ ವಿಘ್ನಗಳಿಲ್ಲದೆ ಮುಂದುವರೆದು ಕೊಂಡು ಹೋಗಲಿ ಎಂದು ದೇವರ ಬಳಿ ರೈತರು ಕಾರ್ಮಿಕರು ಪ್ರಾರ್ಥನೆ ಮಾಡಿ ಕೊಳ್ಳುತ್ತಿದ್ದಾರೆ.

ವರದಿ: ಸೂರಜ್ ಪ್ರಸಾದ್, ಟಿವಿ9 ಮಂಡ್ಯ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್