ಮತ್ತೆ ಮುನ್ನೆಲೆಗೆ ಬಂದ ಶ್ರೀರಂಗ ಪಟ್ಟಣದ ಜಾಮೀಯ ಮಸೀದಿಯ ವಿವಾದ: ಟಿವಿ 9ಗೆ ಋಷಿ ಕುಮಾರ ಸ್ವಾಮಿ ಹೇಳಿಕೆ
1784 ರಲ್ಲಿ ದೇವಾಸ್ಥಾನವನ್ನ ಹೊಡೆದು ಅದರ ಮೇಲೆ ಮಸೀದಿಯ ಗೋಪುರ ನಿರ್ಮಾಣ ಮಾಡಲಾಗಿದೆ. 1784 ಹಿಂದೆ ಅದು ಪ್ರಸಿದ್ದ ಕೋಟೆ ಆಂಜನೇಯ (ಮೂಡಲ ಆಂಜನೇಯ) ಶ್ರೀರಂಗ ಪಟ್ಟದ ರಂಗನಾಥ ಸ್ವಾಮಿಯ ಅಷ್ಟ ದಿಕ್ಕುಗಳಲ್ಲು ಹನುಮನ ದೇವಾಲಯಗಳಿವೆ.
ಮಂಡ್ಯ: ಶ್ರೀರಂಗ ಪಟ್ಟಣದ ಜಾಮೀಯ ಮಸೀದಿಯ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಟಿಪ್ಪು ಸುಲ್ತಾನ್ ಕಾಲದಲ್ಲಿ ಕೋಟೆ ಆಂಜನೇಯ ಸ್ವಾಮಿಯ ದೇವಾಲಯವನ್ನ ಕೆಡವಲಾಗಿತ್ತು. ದೇವಾಲಯವನ್ನ ಕೆಡವಿ ಅಲ್ಲಿ ಮಸೀದಿಯನ್ನ ನಿರ್ಮಾಣ ಮಾಡಲಾಗಿದೆ. ಮಸೀದಿಯ ಓಳಗಡೆ ಹೊಯ್ಸಳರ ಲಾಂಚನಗಳಿವೆ ಕಂಬ ಹಾಗೂ ಕಲ್ಯಾಣಿ ಸಹವಿದೆ. ಪ್ರತಿ ಕಂಬದಲ್ಲಿ ಗಂಡಬೇರುಂಡ ಹಾಗೂ ಸಿಂಹದ ಲಾಂಚನವಿದೆ. ಮೈಸೂರು ಅರಸರ ಆಳ್ವಿಕೆಯ ಹಿಂದಯೇ ಈ ದೇವಾಲಯವನ್ನ ಕಟ್ಟಲಾಗಿತ್ತು. ಟಿಪ್ಪು ಆಳ್ವಿಕೆಯಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಾಲಯವನ್ನ ಮಸೀದಿಯನ್ನಾಗಿ ಪರಿವರ್ತಿಸಲಾಗಿದೆ. ಈ ಹಿಂದೆ ಇದು ದೇವಾಲಯವಾಗಿತ್ತು ಅನ್ನೋದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ಪ್ರತಿ ಕಂಬದ ಮೇಲಿನ ಶಿಲ್ಪ ಕಲೆಗಳು ಇದನ್ನ ಸಾರಿ ಹೇಳುತ್ತೆ. ಹನುಮ ಜಯಂತಿ ದಿನ 6 ಲಕ್ಷ ಮಾಲಾಧಾರಿಗಳು ಜಾಮೀಯಾ ಮಸೀದಿಗೆ ತೆರಳುತ್ತೇವೆ. ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ಶ್ರೀರಂಗ ಪಟ್ಟಣದಲ್ಲಿದ್ದ ನೂರಾರು ದೇವಾಲಯಗಳನ್ನ ಹೊಡೆದು ಹಾಕಲಾಗಿದೆ ಎಂದು ಟಿವಿ9 ಗೆ ರುಷಿ ಕುಮಾರ ಸ್ವಾಮಿ ಹೇಳಿಕೆ ನೀಡಿದ್ದಾರೆ.
1784 ರಲ್ಲಿ ದೇವಾಸ್ಥಾನವನ್ನ ಹೊಡೆದು ಅದರ ಮೇಲೆ ಮಸೀದಿಯ ಗೋಪುರ ನಿರ್ಮಾಣ ಮಾಡಲಾಗಿದೆ. 1784 ಹಿಂದೆ ಅದು ಪ್ರಸಿದ್ದ ಕೋಟೆ ಆಂಜನೇಯ (ಮೂಡಲ ಆಂಜನೇಯ) ಶ್ರೀರಂಗ ಪಟ್ಟದ ರಂಗನಾಥ ಸ್ವಾಮಿಯ ಅಷ್ಟ ದಿಕ್ಕುಗಳಲ್ಲು ಹನುಮನ ದೇವಾಲಯಗಳಿವೆ. ಮುಖ್ಯವಾಗಿದ್ದದ್ದ ಮೂಡಲ ಬಾಗಿಲು ಆರ್ಕ್ಯಲಾಜೀಕಲ್ ಇಲಾಖೆ 1935 ದಾಖಲೆ ಮಾಡುತ್ತೆ. ಪ್ರಾಚೀನ ದೇವಸ್ಥಾನವನ್ನ ಹೊಡೆದು ಟಿಪ್ಪು ಸುಲ್ತಾನ್ ಜಾಮೀಯ ಹೆಸರನ್ನಿಟ್ಟಿದ್ದಾನೆ. ಜೆಡಿ ಹೊಳೆ ಬೃಹದಾಕಾರ ನಂದಿಯ ವಿಗ್ರಹ ಹೊಡೆದು ಜೆಡಿ ಹೊಳೆಗೆ ಎಸೆಯುತ್ತಾನೆ. ಶಿವನ ದೇವಾಸ್ಥಾನದ ಇದ್ದ ಟಿಪ್ಪು ಅರಮನೆಗೆ ಸುಲ್ತಾನ ಹೆಂಡತಿಯರು ಸ್ನಾನ ಮಾಡುವುದನ್ನ ನೋಡುತ್ತಾರೆಂದು ದೇವಾಲಯವನ್ನ ಹೊಡೆದಾಕಲಾಯಿತು ಎಂಬ ಕಾರಣ ನೀಡುತ್ತಾರೆ. ಹಾಗೂ ಗಂಟಾ ನಾದ ಕೇಳುತ್ತದೆ ಎಂದು ಶಿವನ ದೇವಾಲಯ ಹೊಡೆದು ಹಾಕಲಾಯಿತು.
ರಾಜ್ಯದ ಇನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.