
ಮಂಡ್ಯ: ತಾಲೂಕಿನ ಬೇಬಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಜೊತೆ ಅಸಭ್ಯ ವರ್ತನೆ ತೋರಿದ ಶಿಕ್ಷಕನ ವಿರುದ್ಧ ಶಿಕ್ಷಣ ಇಲಾಖೆಗೆ ಪತ್ರ ಬರೆದ ವಿದ್ಯಾರ್ಥಿನಿಯರು. ಕಾಮುಕ ಶಿಕ್ಷಕನ ವರ್ತನೆಗೆ ಬೇಸತ್ತ ವಿದ್ಯಾರ್ಥಿನಿಯರು ಪತ್ರ ಬರೆದು ತಮ್ಮ ಸಮಸ್ಯೆಯನ್ನ ಹೇಳಿಕೊಂಡಿದ್ದಾರೆ. ಇಂದು ದಿಢೀರ್ SDMC ಸಭೆ ಆಯೋಜನೆ ಮಾಡಲಾಗಿ, ಸಭೆಯಲ್ಲಿ ಕಾಮುಕ ಶಿಕ್ಷಕನ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸುವ ಮೂಲಕ ಹಲ್ಲೆಗೆ ಯತ್ನಿಸಿದ್ದಾರೆ. ಸ್ಥಳಕ್ಕೆ ಬಿಇಓ ಸೌಭಾಗ್ಯ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಆರೋಪಿ ಶಿಕ್ಷಕನ ಅಮಾನತ್ತಿಗೆ ಪೋಷಕರ ಪಟ್ಟು ಹಿಡಿದಿದ್ದಾರೆ.
ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಶೂಟೌಟ್ ಪ್ರಕರಣ; ಮೂವರು ಆರೋಪಿಗಳು ಪೊಲೀಸರ ವಶಕ್ಕೆ
ಬೆಂಗಳೂರು: ಕೆ.ಆರ್.ಪುರದಲ್ಲಿ ಡಿ.8ರಂದು ರೌಡಿಶೀಟರ್ ಶಿವಶಂಕರ್ ಮೇಲೆ ದಾಳಿ ನಡೆಸಿದಾಳಿ ನಡೆಸಿ ಆರೋಪಿಗಳು ಪರಾರಿಯಾಗಿದ್ದರು. ಈ ಕುರಿತು ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಿದ ಇಲಾಖೆ, ವಿಶೇಷ ತನಿಖಾ ತಂಡದಿಂದ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.
ಹೊಸಕೋಟೆ ಮೂಲಕ ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದ ಆರೋಪಿಗಳು, ಹೈವೇ ರಸ್ತೆಯಲ್ಲಿ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಗೊತ್ತಾಗಿದೆ. ಕೂಡಲೇ ಪೊಲೀಸರು ಮಾಹಿತಿ ಅನ್ವಯ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಖೆಡ್ಡಕ್ಕೆ ಬಿಳಿಸಿದ್ದಾರೆ. ಹಳೆ ದ್ವೇಷದ ಹಿನ್ನಲೆ ಶಿವಶಂಕರ್ ರೆಡ್ಡಿ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎಂದಿದ್ದಾರೆ. ಆಂಧ್ರಪ್ರದೇಶದ ಮದನಪಲ್ಲಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ಶಿವಶಂಕರ್ ರೆಡ್ಡಿ ಮೇಲೆ ಮೂರು ಕೊಲೆ ಪ್ರಕರಣ ದಾಖಲಾಗಿತ್ತು. ಜೈಲಿನಿಂದ ಹೊರಬಂದ ನಂತ ಶಿವಶಂಕರ್ ರೆಡ್ಡಿ ಆಂಧ್ರಪ್ರದೇಶದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದ. ತನನ್ನು ವಿರೋಧಿ ಗ್ಯಾಂಗ್ ಕೊಲೆ ಮಾಡುವ ಭಯದಿಂದ ಮದನಪಲ್ಲಿಗೆ ಹೆಚ್ಚು ತೆರಳದೆ ಬೆಂಗಳೂರಿನ ಕೆ ಆರ್ ಪುರಂ ದಲ್ಲಿ ನೆಲೆಸಿದ್ದ.
ಬೆಂಗಳೂರಿನ ಕೆ ಆರ್ ಪುರಂನಲ್ಲಿದ್ದ ಶಿವಶಂಕರ್ ರೆಡ್ಡಿಯನ್ನ ಕೊಲೆ ಮಾಡುವ ಉದ್ದೇಶದಿಂದ ಬೆಂಗಳೂರಿಗೆ ಬಂದಿದ್ದ ಗ್ಯಾಂಗ್ ಶಿವಶಂಕರ್ ಸೇರಿದಂತೆ ಆತನ ಕಾರು ಚಾಲಕನ ಮೇಲೆ ಗುಂಡು ಹಾರಿಸಿದ್ದರು. ಸಧ್ಯ ಅದೃಷ್ಟವಶಾತ್ ಇಬ್ಬರು ಪಾಣಪ್ರಾಯದಿಂದ ಪಾರಾಗಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಕೆ ಆರ್ ಪುರ ಪೊಲೀಸರು.
ಇದನ್ನೂ ಓದಿ:ನೀವು ಸೈಬರ್ ಕ್ರೈಮ್ ಸಂತ್ರಸ್ತರಾಗಿದ್ದರೆ ಏನು ಮಾಡಬೇಕು? ದೂರು ನೀಡುವುದು ಹೇಗೆ?
ಕಾರವಾರ: ಶಾರ್ಟ್ ಸರ್ಕ್ಯೂಟ್ನಿಂದ ಕೊಟ್ಟಿಗೆಗೆ ಬೆಂಕಿ; ಎರಡು ಹಸುಗಳು ಸಜೀವ ದಹನ
ಉತ್ತರ ಕನ್ನಡ: ಜಿಲ್ಲೆಯ ಶಿರಸಿ ತಾಲೂಕಿನ ಹೊಸಕೊಪ್ಪದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಕೊಟ್ಟಿಗೆಗೆ ಬೆಂಕಿ ತಗುಲಿ, ಫಕೀರವ್ವ ನಿಂಗಪ್ಪ ಜಾಡರ್ ಎಂಬುವರಿಗೆ ಸೇರಿದ 2 ಜಾನುವಾರುಗಳು ಸಜೀವ ದಹನವಾಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಶಿರಸಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:25 pm, Sat, 10 December 22