ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ರೈತರು, ತಮ್ಮ ಪರ ದನಿಯೆತ್ತದ ಕಾರಣ ಕಾರ್ಯಕ್ರಮಕ್ಕೆ ಬಹಿಷ್ಕಾರ!
ಫಲವತ್ತಾದ ಜಮೀನುಗಳನ್ನು ಬಿಟ್ಟುಕೊಡುವುದಿಲ್ಲವೆಂದು ರೈತರು ಕಳೆದ ಮೂರು ತಿಂಗಳುಗಳಿಂದ ನಿರಶನ ನಡೆಸುತ್ತಿದ್ದಾರೆ.
ಬಾಗಲಕೋಟೆ: ಇದು ಅನಿರೀಕ್ಷಿತ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಕಾರ್ಯಕ್ರಮವನ್ನು ಅವರು ಪ್ರತಿನಿಧಿಸುವ ಬಾದಾಮಿ ಕ್ಷೇತ್ರದ ರೈತರು ಬಹಿಷ್ಕರಿಸುವ ನಿರ್ಧಾರ ತೆಗೆದುಕೊಂಡಿರುವುದನ್ನು ಬಿಜೆಪಿಯ ನಾಯಕರು ಸಹ ನಿರೀಕ್ಷಿಸಿರಲಾರರು. ಕ್ಷೇತ್ರದ ಹಲಕುರ್ಕಿ (Halkurki) ಗ್ರಾಮದ ರೈತರು ವಿಮಾನ ನಿಲ್ದಾಣ ಯೋಜನೆಗಾಗಿ (airport project) ಕೆಐಎಡಿಬಿ ಇಲಾಖೆಯು ತಮ್ಮ ಜಮೀನುಗಳ ಸ್ವಾಧೀನ ಮಾಡಿಕೊಳ್ಳುವ ಕುರಿತು ನೋಟೀಸ್ ನೀಡಿದ್ದರೂ ಸದನದಲ್ಲಿ ಸಿದ್ದರಾಮಯ್ಯ ತಮ್ಮ ಪರ ಧ್ವನಿ ಎತ್ತದಿರುವುದು ಅವರಲ್ಲಿ ತೀವ್ರ ನಿರಾಶೆಯನ್ನುಂಟು ಮಾಡಿದೆ. ಹಾಗಾಗೇ, ಡಿಸೆಂಬರ್ 12 ರಿಂದ ಬಾದಾಮಿ ಕ್ಷೇತ್ರದಲ್ಲಿ 3 ದಿನ ಪ್ರವಾಸ ಕೈಗೊಳ್ಳಲಿರುವ ಸಿದ್ದರಾಮಯ್ಯ ಹಲಕುರ್ಕಿಕೆಗೆ ಬಂದಾಗ ಅವರ ಸಭೆಯನ್ನು ಬಹಿಷ್ಕರಿಸಲು ರೈತಾಪಿ ಸಮುದಾಯ ನಿರ್ಧರಿಸಿದೆ. ಫಲವತ್ತಾದ ಜಮೀನುಗಳನ್ನು ಬಿಟ್ಟುಕೊಡುವುದಿಲ್ಲವೆಂದು ರೈತರು ಕಳೆದ ಮೂರು ತಿಂಗಳುಗಳಿಂದ ನಿರಶನ ನಡೆಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos