ಮನುಷ್ಯರಂತೆ ಕೋತಿಯ ಅಂತಿಮಸಂಸ್ಕಾರ ನೆರವೇರಿಸಿದ ಗ್ರಾಮಸ್ಥರು, 11ನೇ ದಿನಕ್ಕೆ ತಿಥಿ ಇದೆ

|

Updated on: Jun 24, 2023 | 1:36 PM

ವಿದ್ಯುತ್ ಶಾಕ್ ನಿಂದ ಕೋತಿ ಮೃತಪಟ್ಟ ಹಿನ್ನೆಲೆ ಮೊತ್ತಹಳ್ಳಿ ಗ್ರಾಮಸ್ಥರಲ್ಲಿ ದುಃಖ ಮನೆ ಮಾಡಿತ್ತು. ಚಟ್ಟ ಕಟ್ಟಿ ಅದರ ಮೇಲೆ ಕೋತಿಯ ಶವವನ್ನಿಟ್ಟು, ತಮಟೆ ಬಾರಿಸುತ್ತಾ ಗ್ರಾಮದಲ್ಲಿ ಮೆರವಣಿಗೆ ಮಾಡಿದರು.

ಮನುಷ್ಯರಂತೆ ಕೋತಿಯ ಅಂತಿಮಸಂಸ್ಕಾರ ನೆರವೇರಿಸಿದ ಗ್ರಾಮಸ್ಥರು, 11ನೇ ದಿನಕ್ಕೆ ತಿಥಿ ಇದೆ
ಮನುಷ್ಯರಂತೆ ಕೋತಿಯ ಅಂತಿಮಸಂಸ್ಕಾರ
Follow us on

ಮಂಡ್ಯ: ಮನುಷ್ಯರಿಗೆ ಮಾಡುವಂತೆ ಸತ್ತ ಕೋತಿಯ (Monkey) ಅಂತಿಮಸಂಸ್ಕಾರವನ್ನು ಗ್ರಾಮಸ್ಥರು ನಡೆಸಿದರು. ಮಂಡ್ಯ ಜಿಲ್ಲೆ ಮಂಡ್ಯ (Mandya) ತಾಲೂಕಿನ ಮೊತ್ತಹಳ್ಳಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ (Electrocution) ಕೋತಿ ಸಾವನ್ನಪ್ಪಿತ್ತು. ಆ ಕೋತಿಯ ಅಂತ್ಯಸಂಸ್ಕಾರವನ್ನು (Last Rites) ಗ್ರಾಮಸ್ಥರು ಸಂಪ್ರದಾಯಬದ್ಧವಾಗಿ ಮಾಡಿದರು. ಅಂದಹಾಗೆ ಆ ಕಪಿರಾಯ ಗ್ರಾಮಸ್ಥರ ಜೊತೆ ಮನೆ ಮಗುವಿನಂತೆ ಇಷ್ಟು ದಿನ ಆಟವಾಡಿಕೊಂಡಿತ್ತು. ಹಾಗಾಗಿ ಗ್ರಾಮಸ್ಥರೂ ಆ ಮಂಗನನ್ನ ಪ್ರೀತಿಯಿಂದ ನೋಡಿಕೊಂಡಿದ್ದರು.

ವಿದ್ಯುತ್ ಶಾಕ್ ನಿಂದ ಕೋತಿ ಮೃತಪಟ್ಟ ಹಿನ್ನೆಲೆ ಗ್ರಾಮಸ್ಥರಲ್ಲಿ ದುಃಖ ಮನೆ ಮಾಡಿತ್ತು. ಚಟ್ಟ ಕಟ್ಟಿ ಅದರ ಮೇಲೆ ಕೋತಿಯ ಶವವನ್ನಿಟ್ಟು, ನಾಲ್ಕು ಜನ ಅದನ್ನು ಹೊತ್ತುಕೊಂಡು, ತಮಟೆ ಬಾರಿಸುತ್ತಾ ಗ್ರಾಮದಲ್ಲಿ ಮೆರವಣಿಗೆ ಮಾಡಿದರು.

ಬಳಿಕ ಮನುಷ್ಯರಿಗೆ ಮಾಡುವ ಶವಸಂಸ್ಕಾರದ ರೀತಿ ಕೋತಿಗೂ ಅಂತ್ಯಸಂಸ್ಕಾರ ನೆರವೇರಿಸಿದರು ಗ್ರಾಮಸ್ಥರು. ಗ್ರಾಮದ ಮುಖಂಡ ಸಚ್ಚಿನ್ ನೇತೃತ್ವದಲ್ಲಿ ಕೋತಿಯ ಅಂತ್ಯಸಂಸ್ಕಾರ ನೆರವೇರಿತು. 11 ದಿನಕ್ಕೆ ತಿಥಿ ಕಾರ್ಯ ಮಾಡುವುದಕ್ಕೂ ಗ್ರಾಮಸ್ಥರು ಅದಾಗಲೇ ಸಿದ್ದತೆ ನಡೆಸಿದ್ದಾರೆ.

ಮಂಡ್ಯ ಜಿಲ್ಲಾ ವರದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ