ಬಿ.ವೈ. ವಿಜಯೇಂದ್ರ ಮುಂದಿನ ಸಿಎಂ: ಸಚಿವ ಕೆ.ಸಿ.ನಾರಾಯಣಗೌಡ

ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮುಂದಿನ ಸಿಎಂ ಹಾಗುವ ಲಕ್ಷಣ ಇದೆ. ತಂದೆಗೆ ತಕ್ಕ ಮಗ ವಿಜಯೇಂದ್ರ ಅವರು ಎಂದು ಮಂಡ್ಯದ ಖಾಸಗಿ ಹೋಟೇಲ್ ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಭವಿಷ್ಯ ನುಡಿದಿದ್ದಾರೆ.

ಬಿ.ವೈ. ವಿಜಯೇಂದ್ರ ಮುಂದಿನ ಸಿಎಂ: ಸಚಿವ ಕೆ.ಸಿ.ನಾರಾಯಣಗೌಡ
ಕೆ ಸಿ ನಾರಾಯಣಗೌಡ
Follow us
TV9 Web
| Updated By: ವಿವೇಕ ಬಿರಾದಾರ

Updated on: Jun 07, 2022 | 2:13 PM

ಮಂಡ್ಯ: ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮುಂದಿನ ಸಿಎಂ ಹಾಗುವ ಲಕ್ಷಣ ಇದೆ. ತಂದೆಗೆ ತಕ್ಕ ಮಗ ವಿಜಯೇಂದ್ರ ಅವರು ಎಂದು ಮಂಡ್ಯದ ಖಾಸಗಿ ಹೋಟೇಲ್ ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಭವಿಷ್ಯ ನುಡಿದಿದ್ದಾರೆ. ದಕ್ಷಿಣ ಪದವಿದರರ ಕ್ಷೇತ್ರಕ್ಕೆ ಚುನಾವಣೆ ಹಿನ್ನಲೆ ತಮ್ಮ ಅಭ್ಯರ್ಥಿ ಮೈ.ವಿ ರವಿಶಂಕರ್ ಪರ ಬಿವೈ ವಿಜಯೇಂದ್ರ ಪ್ರಚಾರಕ್ಕೆ ಆಗಮಿಸಿದ ವೇಳೆ ಮಾತನಾಡಿದ  ಅವರು  ವಿಜಯೇಂದ್ರ ಅವರನ್ನು  ಬಹುಮತದಿಂದ ಗೆಲ್ಲಿಸಿದರೆ ಮಂಡ್ಯ ಜಿಲ್ಲೆಯಲ್ಲಿ ನಮಗೆ ಮತಷ್ಟು ಶಕ್ತಿ ಬರುತ್ತೆ. ನಾವು ಮಾಡಿದ ಕೆಲಸವನ್ನ ಎಲ್ಲರಿಗೂ ತಿಳಿಸಬೇಕು. ಮಂಡ್ಯಕ್ಕೆ ಎರಡೂ ಪಕ್ಷದಿಂದ ದೊಡ್ಡ ಕೊಡುಗೆ ಏನು ಇಲ್ಲ. ನಮ್ಮ ಯಡಿಯೂರಪ್ಪ ಅವರು ಕೊಡುಗೆ ಕೊಟ್ಟಿದ್ದಾರೆ.  2 ಸಾವಿರಕೋಟಿ ಜಲಧಾರೆ ಕೊಟ್ಟಿದ್ದಾರೆ. ನಮ್ಮ ಯಡಿಯೂರಪ್ಪ ಅವರು ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಇದನ್ನು ಓದಿ: ಶುಲ್ಕ ಪಟ್ಟಿ ನೋಡಿ ಸಂಶೋಧನಾ ವಿದ್ಯಾರ್ಥಿಗಳು ತಬ್ಬಿಬ್ಬು

ಕರ್ನಾಟಕದಲ್ಲಿ ಬಿಜೆಪಿಯನ್ನ ಮತ್ತೊಮ್ಮೆ ಅಧಿಕಾರಕ್ಕೆ ತಂದರು ಅವರನ್ನ ನಂಬಿ ನಾವೇಲ್ಲ ಬಿಜೆಪಿಗೆ ಹೋಗಿದ್ದೇವೆ ಕೊರೊನಾ ಸಂದರ್ಭದಲ್ಲಿ ನಮಗೆ ಹಣದ ಕೊರತೆ ಕೊಟ್ಟಿಲ್ಲ. ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ಬಲಗೈ ಬಂಟ ಆಗಿದ್ದಾರೆ.  ಯಡಿಯೂರಪ್ಪ ಅವರು ರಾಜಿನಾಮೇ ವೇಳೆ  ಆನಂದಿಂದ ಕಣ್ಣಿರಿಟ್ಟರು. ಮುಂದೆ 150 ಕ್ಕೂ ಹೆಚ್ಚು ಸೀಟ್ ಕೊಡುತ್ತಾರೆ ಅವರ ನೇತೃತ್ವದಲ್ಲಿ ನಾವು ಗೆದ್ದೆ ಗೆಲ್ಲುತ್ತೇವೆ. ಮಂಡ್ಯದಲ್ಲೂ 7 ಸೀಟುಗಳನ್ನ ಗೆಲ್ಲುತ್ತೇವೆ ಎಂದರು.

ಹಳೆ ಮೈಸೂರು ಭಾಗವನ್ನ ವಿಜಯೇಂದ್ರ ನೇತೃತ್ವ ವಹಿಸುತ್ತಾರೆ. ಕರ್ನಾಟಕದಲ್ಲಿ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಕೊಟ್ಟಿದ್ದಾರೆ. ಯಡಿಯೂರಪ್ಪ ಅವರ ಆಶಯದಂತೆ ವಿಜಯೇಂದ್ರ ಕೆಲಸ ಮಾಡ್ತಿದ್ದಾರೆ‌‌. ಮಂಡ್ಯದಲ್ಲಿ 5 ಸೀಟ್ ಗೆಲ್ಲಿಸಿಕೊಡ್ತೇವೆ. ಯಡಿಯೂರಪ್ಪ ಜನ್ಮ ಭೂಮಿ ಬೂಕನಕೆರೆ, ಮಂಡ್ಯದಲ್ಲಿ ವಿದ್ಯಾಭ್ಯಾಸ ಮಾಡಿದರು ಅವರು ಓದಿದ ಸ್ಕೂಲ್ ಕಾಲೇಜಿಗೆ ಅನುದಾನ ಕೊಟ್ಟಿದ್ದಾರೆ. 2ನೇ ಶಿಕಾರಿಪುರವಾಗಿ ಕೆ.ಆರ್.ಪೇಟೆ ಬದಲಾಗುತ್ತೆ ನಾನು ತ್ಯಾಗ ಮಾಡಿದ್ದೆ, ಅದಕ್ಕಾಗಿ ನಮ್ಮ ಕೆ.ಆರ್.ಪೇಟೆಗೆ ಸಾಕಷ್ಟು ಅನುದಾನ ನೀಡಿದ್ದಾರೆ ಎಂದು ತಿಳಿಸಿದರು.

ಇದನ್ನು ಓದಿ: ಹಿಜಾಬ್ ಧರಿಸಿ ಬಂದಿದ್ದ ಉಪ್ಪಿನಂಗಡಿ 24 ವಿದ್ಯಾರ್ಥಿನಿಯರಿಗೆ ಕಾಲೇಜಿಗೆ ಬಾರದಂತೆ ನಿರ್ಬಂಧ!

ಕಾರ್ಯಕ್ರಮಕ್ಕು ಮುಂಚೆ ಹಾಸ್ಯ ಪ್ರಸಂಗವೊಂದು ನಡೆಯಿತು. ಮಂಡ್ಯ ಜಿಲ್ಲೆಗೆ ಆಗಮಿಸಿದ ಬಿ.ವೈ ವಿಜಯೇಂದ್ರಗೆ ಬಿಜೆಪಿ ಮುಖಂಡರು ಸೇಬಿನ ಹಾರ ಹಾಕಿ ಸ್ವಾಗತ ಮಾಡಿದರು. ಈ ವೇಳೆ ಸೇಬು ನೋಡುತ್ತಿದ್ದಂತೆ ಮುಗಿ ಬಿದ್ದ ಕಾರ್ಯಕರ್ತರು, ಸೇಬನ್ನು ಕಿತ್ತು ತಿಂದಿದ್ದಾರೆ. ಇನ್ನು ವಿಜಯೇಂದ್ರಗೆ ಡೊಳ್ಳು ತಮಟೆ ವಾದ್ಯ ಹೂವಿನ ಹಾರ ಸೇಬಿನ ಹಾರ ಹಾಕಿ ಅದ್ದೂರಿ ಸ್ವಾಗತ ಕೋರಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ