Shocking: ಶುಲ್ಕ ಪಟ್ಟಿ ನೋಡಿ ಸಂಶೋಧನಾ ವಿದ್ಯಾರ್ಥಿಗಳು ತಬ್ಬಿಬ್ಬು
ಸಂಶೋಧನೆಗೆ ಬಳಸುವ ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಸ್ಕ್ಯಾನಿಂಗ್‌ಗಾಗಿ ಪ್ರತಿ ಸ್ಯಾಂಪಲ್‌ಗೆ ಹಾಗೂ ಮಾಡ್ಯುಲೇಟೆಡ್ ಡಿಫರೆನ್ಷಿಯಲ್ ಸ್ಕ್ಯಾನಿಂಗ್‌ಗಾಗಿ ಶುಲ್ಕಗಳನ್ನು ವಿಧಿಸಿದೆ. ಇದು ಸಂಶೋಧನೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆ ಬಿದ್ದಂತಾಗಿದೆ.
ನವದೆಹಲಿ: ದೆಹಲಿ ವಿಶ್ವವಿದ್ಯಾನಿಲಯದ ಉತ್ತರ ಕ್ಯಾಂಪಸ್‌ನಲ್ಲಿರುವ ಯೂನಿವರ್ಸಿಟಿ ಸೈನ್ಸ್ ಇನ್‌ಸ್ಟ್ರುಮೆಂಟೇಶನ್ ಸೆಂಟರ್ (USIC) ಮೇ 1 ರಂದು ವಿಜ್ಞಾನ ಪಿಎಚ್‌ಡಿ ವಿದ್ಯಾರ್ಥಿಗಳು ಬಳ ಪ್ರಯೋಗಾಲಯ ಉಪಕರಣಗಳಿಗೆ ಶುಲ್ಕಗಳ ಪಟ್ಟಿಯನ್ನು ಪ್ರಕಟಿಸಿತು. ಈ ಶುಲ್ಕ ಪಟ್ಟಿ ನೋಡಿದ ವಿದ್ಯಾರ್ಥಿಗಳು ದಂಗಾಗಿದ್ದಾರೆ. ಏಕೆಂದರೆ ಅವರು ಸಂಶೋಧನೆ (Research)ಗೆ ಬಳಸುವ ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಸ್ಕ್ಯಾನಿಂಗ್‌ಗಾಗಿ ಪ್ರತಿ ಸ್ಯಾಂಪಲ್‌ಗೆ ಹಾಗೂ ಮಾಡ್ಯುಲೇಟೆಡ್ ಡಿಫರೆನ್ಷಿಯಲ್ ಸ್ಕ್ಯಾನಿಂಗ್‌ಗಾಗಿ ಶುಲ್ಕ (Fee)ಗಳನ್ನು ವಿಧಿಸಿದೆ. ಇದು ಸಂಶೋಧನೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆ ಬಿದ್ದಂತಾಗಿದೆ.
ಸಂಶೋಧನೆಯ ಭಾಗವಾಗಿ ಪ್ರಯೋಗಗಳನ್ನು ಮಾಡುವಾಗ ಬಳಸುವ ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಸ್ಕ್ಯಾನಿಂಗ್‌ಗಾಗಿ ಪ್ರತಿ ಸ್ಯಾಂಪಲ್‌ಗೆ 150 ರೂ.ಗಳಿಂದ, ಮಾಡ್ಯುಲೇಟೆಡ್ ಡಿಫರೆನ್ಷಿಯಲ್ ಸ್ಕ್ಯಾನಿಂಗ್‌ಗಾಗಿ ಗಂಟೆಗೆ 500 ರೂ.ವರೆಗೆ ಶುಲ್ಕ ವಿಧಿಸಲಾಗುತ್ತದೆ. ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ಶಿಕ್ಷಣ ಸಚಿವ ಬಿಸಿ ನಾಗೇಶ್ಗೆ ಸಿದ್ದರಾಮಯ್ಯರಿಂದ ಪ್ರಶ್ನೆಗಳ ಸುರಿಮಳೆ
ಖಾಸಗಿ ಸುದ್ದಿ ಸಂಸ್ಥೆ indianexpress ಜೊತೆ ಮಾತನಾಡಿದ ಭೌತಶಾಸ್ತ್ರ ಪಿಎಚ್‌ಡಿ ವಿದ್ವಾಂಸರೊಬ್ಬರ ಪ್ರಕಾರ, “1984 ರಲ್ಲಿ ಯುಎಸ್‌ಐಸಿ ಸ್ಥಾಪನೆಯಾದಾಗಿನಿಂದ ಉಪಕರಣಗಳಿಗೆ ಯಾವುದೇ ಹಣವನ್ನು ವಿಧಿಸಲಾಗಿಲ್ಲ. ಬದಲಾಗಿ ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) / ಕೌನ್ಸಿಲ್‌ನಿಂದ ವಿದ್ಯಾರ್ಥಿಗಳ ಮೇಲ್ವಿಚಾರಕರು ಮತ್ತು ಪ್ರಾಧ್ಯಾಪಕರಿಗೆ ಬಿಡುಗಡೆ ಮಾಡಿದ ನಿಧಿಯಿಂದ ವೆಚ್ಚವನ್ನು ಭರಿಸಲಾಗಿದೆ” ಎಂದಿದ್ದಾರೆ.
ಮೂರನೇ ವರ್ಷದ ರಸಾಯನಶಾಸ್ತ್ರ ಪಿಎಚ್‌ಡಿ ವಿದ್ಯಾರ್ಥಿಯು ಹೇಳುವಂತೆ, “ಸಂಶೋಧನೆ ಮಾಡುವಾಗ ಅಪೇಕ್ಷಿತ ಫಲಿತಾಂಶವನ್ನು ಪಡೆಯಲು 15-20 ಹಿಟ್ ಪ್ರಯೋಗಗಳ ಅಗತ್ಯವಿರುವ ವಸ್ತುಗಳನ್ನು ನಾವು ಸಂಶ್ಲೇಷಿಸುತ್ತೇವೆ. ಅದನ್ನು ಉಪಕರಣಗಳ ಸಹಾಯದಿಂದ ಮತ್ತಷ್ಟು ನಿರೂಪಿಸಬೇಕಾಗುತ್ತದೆ. ಪ್ರತಿಯೊಂದು ಮಾದರಿಗೆ ನಾವು ಹಣ ಪಾವತಿಸಬೇಕೆಂದರೆ ಹೆಚ್ಚಿನ ಪ್ರಯೋಗಗಳನ್ನು ಮಾಡಲು ಕಷ್ಟಸಾಧ್ಯವಾಗುತ್ತದೆ. ಇದು ಅಂತಿಮವಾಗಿ ಕಡಿಮೆ ಗುಣಮಟ್ಟದ ಫಲಿತಾಂಶಗಳನ್ನು ನೀಡಲಿದೆ” ಎಂದು ವಿವರಿಸಿದರು.
“ನಾವು ಈ ಶುಲ್ಕಗಳನ್ನು ಅನುಸರಿಸಿದರೆ ಪ್ರಯೋಗಗಳನ್ನು ಮಾಡಲು ನಮ್ಮ ದೈನಂದಿನ ವೆಚ್ಚಗಳು 500 ರೂ.ಗೆ ಏರಬಹುದು” ಎಂದು ಇನ್ನೊಬ್ಬ ಭೌತಶಾಸ್ತ್ರದ ಪಿಎಚ್‌ಡಿ ವಿದ್ಯಾರ್ಥಿ ಹೇಳಿದರು. ಇದನ್ನೂ ಓದಿ: ಬಯೋ ಸ್ಪೆಕ್ಟ್ರಂ ಸಮೀಕ್ಷೆ : ರಾಜ್ಯದ ಇನ್ಕ್ಯುಬೇಟರ್ ಗಳಿಗೆ ಎರಡು ಅಗ್ರಸ್ಥಾನಗಳು
ಸುಮಾರು 250 ವಿದ್ಯಾರ್ಥಿಗಳು ಉಪಕುಲಪತಿ ಯೋಗೇಶ್ ಸಿಂಗ್ ಅವರಿಗೆ ಶುಲ್ಕ ವಿಧಿಸುವ ವಿಚಾರದ ಬಗ್ಗೆ ಪರಿಶೀಲಿಸುವಂತೆ ಪತ್ರವನ್ನು ಸಲ್ಲಿಸಿದ್ದಾರೆ. ಯುಜಿಸಿ ಅಥವಾ ಸಿಎಸ್‌ಐಆರ್ ಒದಗಿಸುವ ಆಕಸ್ಮಿಕ ನಿಧಿ ಸೇರಿದಂತೆ ಸಂಶೋಧನಾ ಗುಂಪುಗಳು ಬಹಳ ಸೀಮಿತ ಹಣವನ್ನು ಹೊಂದಿವೆ ಎಂದು ವಿದ್ಯಾರ್ಥಿಗಳು ಪತ್ರದಲ್ಲಿ ತಿಳಿಸಿದ್ದಾರೆ. 20,000 ವಾರ್ಷಿಕ ಆಕಸ್ಮಿಕ ನಿಧಿಯು ಅಸಮರ್ಪಕವಾಗಿದೆ ಎಂದು ವಿದ್ಯಾರ್ಥಿಗಳು ಸುದ್ದಿಸಂಸ್ಥೆಗೆ ತಿಳಿಸಿದರು.
ಮೂರನೇ ವರ್ಷದ ಸಸ್ಯಶಾಸ್ತ್ರದ ಪಿಎಚ್‌ಡಿ ವಿದ್ಯಾರ್ಥಿಯೊಬ್ಬರು ನೀಡಿದ ಮಾಹಿತಿಯಂತೆ, “ಈ ಶುಲ್ಕಗಳ ಪಟ್ಟಿಯ ಪ್ರಕಾರ ಪ್ರಯೋಗಗಳು ಮತ್ತು ಸಂಶೋಧನೆಗಳನ್ನು ಕೈಗೊಳ್ಳಲು ತಲಾ ಸರಾಸರಿ ವಾರ್ಷಿಕ ವೆಚ್ಚ 60,000 -70,000 ರೂ. ಅಂಚಿನಲ್ಲಿರುವ ಹಿನ್ನೆಲೆ ವಿದ್ಯಾರ್ಥಿಗಳು ತಮ್ಮ ಸಂಶೋಧನೆಯನ್ನು ನಿಲ್ಲಿಸಬೇಕೇ ಎಂದು ಪರಿಗಣಿಸುತ್ತಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:52 pm, Sun, 5 June 22