ಈ ಪೋಸ್ಟ್ ಆಫೀಸ್ ಸ್ಕೀಮ್ಗಳಿಗೆ ಆಧಾರ್ ಬಯೋಮೆಟ್ರಿಕ್; ಡೆಪಾಸಿಟ್ ಸ್ಲಿಪ್ ಬೇಕಾಗಿಲ್ಲ, ಪೂರ್ತಿ ಪೇಪರ್ಲೆಸ್ ಪ್ರಕ್ರಿಯೆ
Post Office scheme: ಮಂತ್ಲಿ ಇನ್ಕಮ್ ಸ್ಕೀಮ್, ಕಿಸಾನ್ ವಿಕಾಸ್ ಪತ್ರ ಇತ್ಯಾದಿ ಕೆಲ ಆಯ್ದ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಅಕೌಂಟ್ ತೆರೆಯುವ ಪ್ರಕ್ರಿಯೆ ಸರಳಗೊಂಡಿದೆ. ಡೆಪಾಸಿಟ್ ಸ್ಲಿಪ್ ತುಂಬಿಸುವುದು ಇತ್ಯಾದಿ ಪೇಪರ್ವರ್ಕ್ ನಿಂತು ಆನ್ಲೈನ್ನಲ್ಲಿ ಕೆಲಸಗಳಾಗುತ್ತವೆ. ಈಗ ಅಂಚೆ ಕಚೇರಿಗಳಲ್ಲಿ ಇ-ಕೆವೈಸಿ ಸೌಲಭ್ಯವನ್ನು ಒದಗಿಸಲಾಗಿದೆ.

ಅಂಚೆ ಇಲಾಖೆ (Post Office) ಈಗ ಹೆಚ್ಚೆಚ್ಚು ಡಿಜಿಟಲೀಕರಣಗೊಳ್ಳುತ್ತಿದೆ. ಮಾಸಿಕ ಆದಾಯ ಯೋಜನೆ, ಟೈಮ್ ಡೆಪಾಸಿಟ್, ಕಿಸಾನ್ ವಿಕಾಸ್ ಪತ್ರ, ರಾಷ್ಟ್ರೀಯ ಉಳಿತಾಯ ಪತ್ರ ಇತ್ಯಾದಿ ಕೆಲ ಆಯ್ದ ಉಳಿತಾಯ ಯೋಜನೆಗಳ ಪ್ರಕ್ರಿಯೆಯನ್ನು ಅಂಚೆ ಇಲಾಖೆ ಸಂಪೂರ್ಣ ಡಿಜಿಟಲೀಕರಣಗೊಳಿಸಿದೆ. ಆ ನಿಟ್ಟಿನಲ್ಲಿ ಆಧಾರ್ ಬಯೋಮೆಟ್ರಿಲ್ ಅಥೆಂಟಿಕೇಶನ್ ಫೀಚರ್ ಅನ್ನು ಜಾರಿಗೆ ತಂದಿದೆ. ಇದರೊಂದಿಗೆ, ಅಕೌಂಟ್ ತೆರೆಯುವುದು ಇತ್ಯಾದಿ ಸಂಪೂರ್ಣ ಪ್ರಕ್ರಿಯೆ ಕಾಗದರಹಿತವಾಗಲಿದೆ. ಯಾವುದೇ ಡೆಪಾಸಿಟ್ ಸ್ಲಿಪ್ ಅನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
ಸರ್ಕಾರ ಹೊಸ ಸೇವಿಂಗ್ಸ್ ಅಕೌಂಟ್ಗಳನ್ನು ತೆರೆಯಲು ಆಧಾರ್ ಆಧಾರಿತ ಇ-ಕೆವೈಸಿಯನ್ನು (Aadhaar based e-kyc) 2025ರ ಜನವರಿ 6ರಂದು ಜಾರಿಗೆ ತಂದಿತ್ತು. ಗ್ರಾಹಕ ಮಾಹಿತಿ ಕಡತ ಅಥವಾ ಸಿಐಎಫ್, ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್ ತೆರೆಯಲು ಇದನ್ನು ಬಳಸಲಾಗುತ್ತಿದೆ. ಈಗ ಈ ಆಧಾರ್ ಆಧಾರಿತ ಇ-ಕೆವೈಸಿ ಪ್ರಕ್ರಿಯೆಯನ್ನು ಅಂಚೆ ಕಚೇರಿಯ ಕೆಲ ಜನಪ್ರಿಯ ಸೇವಿಂಗ್ ಸ್ಕೀಮ್ಗಳಿಗೆ ವಿಸ್ತರಿಸಲಾಗಿದೆ.
ಇದನ್ನೂ ಓದಿ: ಒಂದು ವರ್ಷದಲ್ಲಿ ಚಿನ್ನದ ಬೆಲೆ ಶೇ. 25 ಏರಿಕೆ; 5 ವರ್ಷದಲ್ಲಿ ಬೆಲೆ ಹೆಚ್ಚಳ ಎಷ್ಟು?
ಅಂಚೆ ಕಚೇರಿ ಸ್ಕೀಮ್: ಹಿಂದಿನ ಪ್ರಕ್ರಿಯೆಗೂ ಈಗಿನದಕ್ಕೂ ಏನು ವ್ಯತ್ಯಾಸ?
ಅಂಚೆ ಕಚೇರಿಯ ಸೇವಿಂಗ್ಸ್ ಸ್ಕೀಮ್ಗಳನ್ನು ತೆರೆಯಬೇಕಾದರೆ, ಸೇವಿಂಗ್ಸ್ ಅಕೌಂಟ್ ತೆರೆಯಬೇಕಾದರೆ ಕಾಗದದ ಅರ್ಜಿಗಳನ್ನು ಭರ್ತಿ ಮಾಡಬೇಕು. ಡೆಪಾಸಿಟ್ ಸ್ಲಿಪ್ಗಳನ್ನು ಸಲ್ಲಿಸಬೇಕು. ಆದರೆ, ಈಗ ಅಧಾರ್ ದೃಢೀಕರಣ ಮೂಲಕ ಅಕೌಂಟ್ ತೆರೆಯಲು ಸಾಧ್ಯವಾಗುತ್ತದೆ. ಎಲ್ಲಾ ಅಂಚೆ ಕಚೇರಿ ಸರ್ಕಲ್ಗಳಿಗೂ ಇಕೆವೈಸಿ ಅವಕಾಶ ಕಲ್ಪಿಸುವಂತೆ ಸರ್ಕಾರ ಸೂಚಿಸಿದೆ.
ಮುಂದಿನ ದಿನಗಳಲ್ಲಿ ಪೋಸ್ಟ್ ಆಫೀಸ್ ಸ್ಕೀಮ್ನಲ್ಲಿ ಅಕೌಂಟ್ ಅಂತ್ಯಗೊಳಿಸಲು, ವರ್ಗಾವಣೆ ಮಾಡಲು, ನಾಮಿನೇಶನ್ ಅಪ್ಡೇಟ್ ಮಾಡಲು ಇತ್ಯಾದಿ ಕಾರ್ಯಗಳಿಗೂ ಆಧಾರ್ ಆಧಾರಿತ ಬಯೋಮೆಟ್ರಿಕ್ ಅಥೆಂಟಿಕೇಶನ್ ಬಳಸುವಂತಾಗಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ಐಟಿಆರ್ನಲ್ಲಿ ತಪ್ಪು ಮಾಹಿತಿ ಕೊಟ್ರೆ ಸಿಕ್ಕಿಬೀಳ್ತೀರಿ; ಐಟಿ ಇಲಾಖೆ ಬಳಿ ಇವೆ ಹೊಸ ಎಐ ಟೂಲ್ಸ್
ಆಧಾರ್ ಬಯೋಮೆಟ್ರಿಕ್ಸ್ ಹೇಗೆ ಕೆಲಸ ಮಾಡುತ್ತದೆ?
ಪೋಸ್ಟ್ ಆಫೀಸ್ ಖಾತೆ ಆರಂಭಿಸಲು ನೀವು ಅಂಚೆ ಕಚೇರಿಗೆ ಹೋದಾಗ ಅಲ್ಲಿ ಕೌಂಟರ್ ಪೋಸ್ಟಲ್ ಅಸಿಸ್ಟೆಂಟ್ ಅವರು ಸಿಸ್ಟಂ ಮೆನು ಬಳಸುತ್ತಾರೆ. ಮೊದಲಿಗೆ ಪೂರ್ವಾನುಮತಿಗಾಗಿ ನಿಮ್ಮ ಬಯೋಮೆಟ್ರಿಕ್ ಡಾಟಾ (ಫಿಂಗರ್ ಪ್ರಿಂಟ್) ಪಡೆಯಲಾಗುತ್ತದೆ. ನಂತರ, ಹೆಸರು, ಯಾವ ಸ್ಕೀಮ್, ಠೇವಣಿ ಹಣ ಇತ್ಯಾದಿ ವಿವರವನ್ನು ಸಿಸ್ಟಂಗೆ ನೀಡಲಾಗುತ್ತದೆ. ಅಂತಿಮವಾಗಿ ಅದನ್ನು ಸಲ್ಲಿಸಲು ಎರಡನೇ ಬಾರಿ ಫಿಂಗರ್ ಪ್ರಿಂಟ್ ಪಡೆಯಲಾಗುತ್ತದೆ. ಇ-ಕೆವೈಸಿ ಅಕೌಂಟ್ ಓಪನಿಂಗ್ ಫಾರ್ಮ್ನಲ್ಲೇ ಠೇವಣಿ ಮೊತ್ತವನ್ನು ನಮೂದಿಸಿರುವುದರಿಂದ ಪ್ರತ್ಯೇಕವಾಗಿ ಡೆಪಾಸಿಟ್ ಸ್ಲಿಪ್ ತುಂಬುವ ಅವಶ್ಯಕತೆ ಇರುವುದಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ