ಸೋನಿಯಾ ಹಾಗೂ ರಾಹುಲ್ ಗಾಂಧಿಗೆ ಪ್ರಶ್ನೆ: ಬಿಜೆಪಿ ಕಾರ್ಯಕರ್ತರಿಂದ ಪೋಸ್ಟರ್ ಅಭಿಯಾನ
ಸಿದ್ದರಾಮಯ್ಯ ಸರ್ಕಾರ ರೈತರಿಗೆ ಹೊಡೆದಿದ್ದೇಕೆ ಎಂದು ಸೋನಿಯಾ ಹಾಗೂ ರಾಹುಲ್ ಗಾಂಧಿಗೆ ಪ್ರಶ್ನೆ ಕೇಳುವ ಪೋಸ್ಟರ್ ಅಭಿಯಾನವನ್ನು ಜಿಲ್ಲೆಯ ನಾಗಮಂಗಲದಲ್ಲಿ ಬಿಜೆಪಿ ಕಾರ್ಯ ಕರ್ತರಿಂದ ಮಾಡಲಾಗಿದೆ.
ಮಂಡ್ಯ: ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧ ಬಿಜೆಪಿಯಿಂದ ಪೋಸ್ಟರ್ ಅಭಿಯಾನ (poster campaign) ಮಾಡಲಾಗಿದೆ. ರೈತರು ಮಹದಾಯಿ ನೀರು ಕೇಳಿದರೆ ಬಾಸುಂಡೆ ನೀಡಿದ್ದೇಕೆ. ಸಿದ್ದರಾಮಯ್ಯ ಸರ್ಕಾರ ರೈತರಿಗೆ ಹೊಡೆದಿದ್ದೇಕೆ ಎಂದು ಸೋನಿಯಾ ಹಾಗೂ ರಾಹುಲ್ ಗಾಂಧಿಗೆ ಪ್ರಶ್ನೆ ಕೇಳುವ ಪೋಸ್ಟರ್ ಅಭಿಯಾನವನ್ನು ಜಿಲ್ಲೆಯ ನಾಗಮಂಗಲದಲ್ಲಿ ಬಿಜೆಪಿ ಕಾರ್ಯ ಕರ್ತರಿಂದ ಮಾಡಲಾಗಿದೆ. ಮಂಡ್ಯ ಹಾಗೂ ನಾಗಮಂಗಲ ಬಸ್ ನಿಲ್ದಾಣದಲ್ಲಿ ಪೋಸ್ಟರ್ ಅಂಟಿಸಲಾಗಿದೆ. ಯಾತ್ರೆ ಸಾಗುವ ಮಾರ್ಗ ಮಧ್ಯೆ ಪೋಸ್ಟರ್ ಅಂಟಿಸಲು ಚಿಂತನೆ ನಡೆಸಲಾಗುತ್ತಿದೆ. ಕಾಂಗ್ರೆಸ್ ವಿರುದ್ಧ ಪೋಸ್ಟರ್ ಅಂಟಿಸಿದ್ದಕ್ಕೆ ಬಿಜೆಪಿ ವಿರುದ್ಧ ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆ ಗರಂ ಆಗಿದೆ.
ನಾಗಮಂಗಲ ತಲುಪಿದ ‘ಭಾರತ್ ಜೋಡೋ’ ಪಾದಯಾತ್ರೆ
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕೆ.ಮಲ್ಲೇನಹಳ್ಳಿಗೆ ಭಾರತ್ ಜೋಡೋ ಯಾತ್ರೆ ತಲುಪಿದೆ. ರಾಹುಲ್ ಜೊತೆ ಕೆ.ಸಿ.ವೇಣುಗೋಪಾಲ್, ಚಲುವನಾರಾಯಣಸ್ವಾಮಿ, ಧ್ರುವನಾರಾಯಣ ಸೇರಿ ಹಲವರು ಹೆಜ್ಜೆ ಹಾಕಿದ್ದಾರೆ. ಇಂದು (ಶುಕ್ರವಾರ) ಕೆ.ಮಲ್ಲೇನಹಳ್ಳಿಯಿಂದ ಪಾದಯಾತ್ರೆ ಶುರುವಾಗಿದೆ. ನಾಗಮಂಗಲದ ವಕೀಲರು ರಾಹುಲ್ ಗಾಂಧಿಗೆ ವಿಶೇಷ ಉಡುಗೊರೆ ನೀಡಲಿದ್ದಾರೆ. ಸ್ವಾಮಿ ವಿವೇಕಾನಂದ, ಮಹಾತ್ಮಗಾಂಧಿ ಫೋಟೊ, ಟಿಪ್ಪು ಸುಲ್ತಾನ್ ಪುಸ್ತಕ, ಕುವೆಂಪು ಪುಸ್ತಕವನ್ನು ಇವರು ರಾಹುಲ್ಗೆ ಉಡುಗೊರೆಯಾಗಿ ನೀಡಲಿದ್ದಾರೆ.
ನಾಗಮಂಗಲ ತಾಲೂಕಲ್ಲಿ ಫ್ಲೆಕ್ಸ್ ಬ್ಯಾನರ್ ಜಟಾಪಟಿ ಭಾರತ್ ಜೋಡೋ ಯಾತ್ರೆಯ ಕಟೌಟ್ ಅಳವಡಿಕೆ ಬಗ್ಗೆ ಚೆಲುವರಾಯಸ್ವಾಮಿ ಹಾಗೂ ಎಂ ಕೃಷ್ಣಪ್ಪ ನಡುವೆ ಕಿರಿಕ್ ಆಗಿದೆ. ನಿನ್ನೆ ನಾಗಮಂಗಲ ಕ್ಷೇತ್ರದಲ್ಲಿ ರಾಹುಲ್ ಪಾದಯಾತ್ರೆಗೆ ವಿಜಯನಗರ ಕೃಷ್ಣಪ್ಪ ಹಾಗೂ ಪ್ರಿಯಾ ಕೃಷ್ಣ ಜನರನ್ನು ಕರೆತಂದಿದ್ದರು. ಹೀಗಾಗಿ ಪಾದಯಾತ್ರೆ ಮಾರ್ಗದಲ್ಲಿ ಎಂ ಕೃಷ್ಣಪ್ಪ, ಪ್ರಿಯಾ ಕೃಷ್ಣ ಕಟೌಟ್ ಬಳಸಲಾಗಿತ್ತು. ಭಾರೀ ಗಾತ್ರದ ಕಟೌಟ್ ನಲ್ಲಿ ಚೆಲುವರಾಯಸ್ವಾಮಿ ಫೋಟೊ ಕೈಬಿಟ್ಟಿದ್ದಕ್ಕೆ ಚೆಲುವರಾಯಸ್ವಾಮಿ ಬೆಂಬಲಿಗರ ಜಗಳ ಮಾಡಿದ್ದಾರೆ. ತಮ್ಮ ಫೋಟೋ ಅಳವಡಿಸದಿರುವುದಕ್ಕೆ ಚೆಲುವರಾಯಸ್ವಾಮಿ ಕೂಡಾ ಸಿಟ್ಟುಗೊಂಡಿದ್ದಾರೆ.
ಪುಟಾಣಿ ಫೋಟೋ ತೆಗೆದ ರಾಹುಲ್ ಗಾಂಧಿ
ತನ್ನದೇ ಮೊಬೈಲ್ ನಲ್ಲಿ ಮಗುವಿನ ಫೋಟೋ ಸೆರೆ ಹಿಡಿದಿದ್ದಾರೆ ರಾಹುಲ್ ಗಾಂಧಿ. ಮಗುವಿನೊಂದಿಗೆ ಬಂದ ವ್ಯಕ್ತಿಯೊಬ್ಬರು ರಾಹುಲ್ ಜತೆ ಮಾತನಾಡಿದಾಗ ರಾಹುಲ್ ಪುಣಾಣಿ ರಾಹುಲ್ ಗೆ ಹ್ಯಾಂಡ್ ಶೇಖ್ ಮಾಡಿದ್ದಾನೆ.ರಾಹುಲ್ ತಮ್ಮ ಮೊಬೈಲ್ ನಲ್ಲಿ ಮಗುವಿನ ಫೋಟೊ ಕ್ಲಿಕ್ಕಿಸಿ ಖುಷಿ ಪಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:18 pm, Fri, 7 October 22