ದೇವರ ಕಾರ್ಯ ಮುಗಿಸಿ ವಾಪಸ್ ಬರುವಾಗ ಕ್ಯಾಂಟರ್ ಪಲ್ಟಿ, 30 ಮಂದಿಗೆ ಗಾಯ
ಮಂಡ್ಯ: ಕ್ಯಾಂಟರ್ ಪಲ್ಟಿಯಾಗಿ 30 ಜನರು ಗಾಯಗೊಂಡಿರುವ ಘಟನೆ ಮಳವಳ್ಳಿ ತಾಲೂಕಿನ ಮುತ್ತತ್ತಿ ಬಳಿ ಸಂಭವಿಸಿದೆ. ಮುತ್ತತ್ತಿಯ ಮುತ್ತೆತ್ತರಾಯಸ್ವಾಮಿ ದೇವಾಲಯಕ್ಕೆ ತೆರಳಿ ವಾಪಸ್ ಆಗುವಾಗು ಅವಘಡ ಸಂಭವಿಸಿದೆ. ದೇವರ ಕಾರ್ಯ ಮುಗಿಸಿ ವಾಪಸ್ ಬರುವ ವೇಳೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿಯಾಗಿದೆ. ಘಟನೆಯಲ್ಲಿ ಟಿ.ಮಲ್ಲಿಗೆರೆ ಗ್ರಾಮದ ಜನರು ಗಾಯಗೊಂಡಿದ್ದು, ಹಲಗೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on
ಮಂಡ್ಯ: ಕ್ಯಾಂಟರ್ ಪಲ್ಟಿಯಾಗಿ 30 ಜನರು ಗಾಯಗೊಂಡಿರುವ ಘಟನೆ ಮಳವಳ್ಳಿ ತಾಲೂಕಿನ ಮುತ್ತತ್ತಿ ಬಳಿ ಸಂಭವಿಸಿದೆ. ಮುತ್ತತ್ತಿಯ ಮುತ್ತೆತ್ತರಾಯಸ್ವಾಮಿ ದೇವಾಲಯಕ್ಕೆ ತೆರಳಿ ವಾಪಸ್ ಆಗುವಾಗು ಅವಘಡ ಸಂಭವಿಸಿದೆ.
ದೇವರ ಕಾರ್ಯ ಮುಗಿಸಿ ವಾಪಸ್ ಬರುವ ವೇಳೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿಯಾಗಿದೆ. ಘಟನೆಯಲ್ಲಿ ಟಿ.ಮಲ್ಲಿಗೆರೆ ಗ್ರಾಮದ ಜನರು ಗಾಯಗೊಂಡಿದ್ದು, ಹಲಗೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.