ಭಾರತ್ ಜೋಡೋ ಪಾದಯಾತ್ರೆಯ ಜೋಶ್​ನಲ್ಲಿದ್ದ ಡಿಕೆ ಶಿವಕುಮಾರ್​ಗೆ ಇಡಿ ಶಾಕ್: ನಾಳೆ ವಿಚಾರಣೆಗೆ ಬರಲೇ ಬೇಕೆಂದು ಸೂಚನೆ

ಡಿಕೆ ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಅವರಿಗೆ ಇಡಿ ಸಮನ್ಸ್​​ ನೀಡಿದೆ. ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಆದ್ರೆ ಡಿಕೆ ಶಿವಕುಮಾರ್ ವಿಚಾರಣೆಗೆ ಹೋಗುವುದಿಲ್ಲ ಎಂದಿದ್ದಾರೆ.

ಭಾರತ್ ಜೋಡೋ ಪಾದಯಾತ್ರೆಯ ಜೋಶ್​ನಲ್ಲಿದ್ದ ಡಿಕೆ ಶಿವಕುಮಾರ್​ಗೆ ಇಡಿ ಶಾಕ್: ನಾಳೆ ವಿಚಾರಣೆಗೆ ಬರಲೇ ಬೇಕೆಂದು ಸೂಚನೆ
ಡಿಕೆ ಶಿವಕುಮಾರ್
Follow us
TV9 Web
| Updated By: ಆಯೇಷಾ ಬಾನು

Updated on: Oct 06, 2022 | 2:35 PM

ಮಂಡ್ಯ: ಐಕ್ಯತಾ ಱಲಿಯಲ್ಲಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಜ್ಜೆ ಹಾಕುತ್ತಿದ್ದು ಡಿಕೆಶಿಗೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​​ ನೀಡಿದ್ದಾರೆ. ಭಾರತ್ ಜೋಡೋ ಉಸ್ತುವಾರಿ ನೋಡಿಕೊಳ್ಳುತ್ತಿರುವ ಡಿಕೆಶಿ ಈಗ ಚಿಂತೆಗೆ ಬಿದ್ದಿದ್ದಾರೆ.

ಕಳೆದ ಎರಡು ದಿನಗಳಿಂದ ಬ್ರೇಕ್​​ನಲ್ಲಿದ್ದ ಕಾಂಗ್ರೆಸ್ ಇಂದು ಮಂಡ್ಯದಿಂದ 5ನೇ ದಿನದ ಭಾರತ್ ಜೋಡೋ ಯಾತ್ರೆ ಪುನರಾರಂಭಿಸಿದೆ. ಮಂಡ್ಯದಲ್ಲಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಇದೇ ಮೊದಲ ಬಾರಿಗೆ ಸೋನಿಯಾ ಗಾಂಧಿ ಹೆಜ್ಜೆ ಹಾಕಿದ್ದಾರೆ. ಇದರ ನಡುವೆ ಡಿಕೆ ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಅವರಿಗೆ ಇಡಿ ಸಮನ್ಸ್​​ ನೀಡಿದೆ. ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಆದ್ರೆ ಡಿಕೆ ಶಿವಕುಮಾರ್ ವಿಚಾರಣೆಗೆ ಹೋಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಭೂತಾನ್​ನ ಅಡಿಕೆ ಆಮದಿಗೆ ಅನುಮತಿ ನೀಡಿರುವ ಬಿಜೆಪಿ ಸರ್ಕಾರದಿಂದ ವಿಶ್ವಾಸ ದ್ರೋಹ; ಸಿದ್ದರಾಮಯ್ಯ ಆಕ್ರೋಶ

ಇಡಿ ಸಮನ್ಸ್​ ಕುರಿತು ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ನಾನು ‘ಜೋಡೋ’ ಪಾದಯಾತ್ರೆ ಇನ್‌ಚಾರ್ಜ್ ಇದ್ದೇನೆ. ನಾಳೆ ವಿಚಾರಣೆಗೆ ಬರುವುದಕ್ಕೆ ಆಗಲ್ಲ ಅಂತ ಕೇಳಿಕೊಂಡಿದ್ದೆ. ಒಪ್ಪದೇ ನಾಳೆ ಬರಲೇಬೇಕೆಂದು ಇಡಿ ಸಮನ್ಸ್ ನೀಡಿದೆ. ಈ ಬಗ್ಗೆ ನಮ್ಮ ನಾಯಕರ ಜೊತೆ ಚರ್ಚೆ ಮಾಡುತ್ತೇನೆ. ನಾಯಕರು ಹೋಗಂದ್ರೆ ಹೋಗ್ತೀನಿ ಬೇಡ ಅಂದ್ರೆ ಬಿಡ್ತೇನೆ ಎಂದರು. ವಿಚಾರಣೆ ಹಾಜರಾಗಲು ಸಮಯಾವಕಾಶ ಕೋರಿದ್ದೆ. ಆದರೆ ಇಡಿ ಕಾಲಾವಕಾಶ ನೀಡಲು ನಿರಾಕರಿಸಿದೆ. ನನಗೂ, ನನ್ನ ಸಹೋದರ ಡಿ.ಕೆ.ಸುರೇಶ್​ಗೆ ಸಮನ್ಸ್​​ ನೀಡಿದೆ ಎಂದರು.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತನಿಖೆಯ ವಿಚಾರಣೆಗಾಗಿ ಡಿಕೆ ಶಿವಕುಮಾರ್ ಮತ್ತು ಸಂಸದ ಡಿಕೆ ಸುರೇಶ್ ಅವರಿಗೆ ಇಡಿ ಹೊಸದಾಗಿ ಸಮನ್ಸ್ ಜಾರಿ ಮಾಡಿದೆ. ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಇಬ್ಬರೂ ಅಕ್ಟೋಬರ್ 7 ರಂದು ಹಾಜರಾಗುವಂತೆ ತಿಳಿಸಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ