ತುಮಕೂರಲ್ಲಿ ಉತ್ತಮ ಮಳೆ ಹಿನ್ನೆಲೆ, ಮದ್ದೂರು ಬಳಿ ಶಿಂಷಾ ನದಿಯಲ್ಲಿ ನೀರುಪಾಲಾಗಿದ್ದ ತಮಿಳುನಾಡು ವ್ಯಕ್ತಿಯ ರಕ್ಷಣೆ
ತುಮಕೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾದ ಹಿನ್ನೆಲೆ, ಮದ್ದೂರು ಬಳಿಯ ಶಿಂಷಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗಿತ್ತು. ಹೀಗಾಗಿ ನಿನ್ನೆ (ನವೆಂಬರ್ 16) ಸಂಜೆ ಬಟ್ಟೆ ತೊಳೆಯಲು ಇಳಿದಿದ್ದ ಏಳುಮಲೈ ನೀರಿನಲ್ಲಿ ಸಿಲುಕಿಕೊಂಡಿದ್ದಾರೆ.
ಮಂಡ್ಯ: ಶಿಂಷಾ ನದಿಯಲ್ಲಿ ಸಿಲುಕಿದ ವ್ಯಕ್ತಿಯನ್ನು ರಕ್ಷಣೆ (Rescue) ಮಾಡಿದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಬಳಿ ನಡೆದಿದೆ. ತುಮಕೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾದ ಹಿನ್ನೆಲೆ, ಮದ್ದೂರು ಬಳಿಯ ಶಿಂಷಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗಿತ್ತು. ಹೀಗಾಗಿ ನಿನ್ನೆ (ನವೆಂಬರ್ 16) ಸಂಜೆ ಬಟ್ಟೆ ತೊಳೆಯಲು ಇಳಿದಿದ್ದ ಏಳುಮಲೈ ನೀರಿನಲ್ಲಿ ಸಿಲುಕಿಕೊಂಡಿದ್ದಾರೆ. ನೀರು ಹೆಚ್ಚಾಗುತ್ತಿದ್ದಂತೆ ಕೂಗಿಕೊಂಡಿದ್ದ ಏಳುಮಲೈ ಸಹಾಯಕ್ಕೆ ಸ್ಥಳೀಯರು ಆಗಮಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದು, ತಮಿಳುನಾಡು ಮೂಲದ ಏಳುಮಲೈ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ರದುರ್ಗ: ಭಾರಿ ಮಳೆಗೆ ನೀರಿನಲ್ಲಿ ಕೊಚ್ಚಿಹೋದ 10 ಕುರಿಗಳು ಉತ್ತಮ ಮಳೆ ಸುರಿದ ಹಿನ್ನೆಲೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ದೊಡ್ಡತೇಕಲವಟ್ಟಿ ಬಳಿ ಹತ್ತು ಕುರಿಗಳು ನೀರುಪಾಲಾಗಿದೆ. ಹಳ್ಳದ ಬಳಿ ಕುರಿ ಮೇಯಿಸಲು ತೆರಳಿದ್ದ ವೇಳೆ ಘಟನೆ ನಡೆದಿದೆ. ಈಶ್ವರಪ್ಪ, ರಂಗಪ್ಪ, ರೇವಣ್ಣ ಎಂಬುವವರಿಗೆ ಸೇರಿದ ಕುರಿಗಳು ನೀರು ಪಾಲಾಗಿದ್ದು, ಕುರಿಗಳ ರಕ್ಷಣೆಗೆ ಕುರಿಗಾಹಿಗಳು ಹರಸಾಹಸ ಪಡುವಂತಾಗಿದೆ.
ಇದನ್ನೂ ಓದಿ: ಹವಾಮಾನ ಬದಲಾವಣೆ ಬಗ್ಗೆ ಸಂದೇಶ ನೀಡಲು ಸಮುದ್ರದ ನೀರಿನಲ್ಲಿ ನಿಂತು ಭಾಷಣ ಮಾಡಿದ ತುವಾಲು ದೇಶದ ಸಚಿವ
ಜೀವನದ ಹಂಗು ತೊರೆದು ಕೆರೆಗೆ ಹಾರಿ ವ್ಯಕ್ತಿಯ ರಕ್ಷಣೆ ಮಾಡಿದ ಕೊಡಗು ಕಾಲೇಜು ವಿದ್ಯಾರ್ಥಿನಿ!
Published On - 8:12 am, Wed, 17 November 21