Sign In

By signing in or creating an account, you agree with Associated Broadcasting Company's Terms & Conditions and Privacy Policy.

Mandya News: ನಾಲೆಗೆ ಪಲ್ಟಿಯಾದ ಕಾರು: ನಾಲ್ವರು ಮಹಿಳೆಯರು ದುರ್ಮರಣ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಬಳಿ ತುರಗನೂರು ಶಾಖಾ ನಾಲೆಗೆ ಕಾರು ಪಲ್ಟಿಯಾಗಿದ ಪರಿಣಾಮ ಚಾಲಕನನ್ನು ಬಿಟ್ಟು ನಾಲ್ವರು ಮಹಿಳೆಯರು ದುರ್ಮರಣ ಹೊಂದಿರುವಂತಹ ದುರಂತ ಘಟನೆ ಸಂಭವಿಸಿದೆ.

Mandya News: ನಾಲೆಗೆ ಪಲ್ಟಿಯಾದ ಕಾರು: ನಾಲ್ವರು ಮಹಿಳೆಯರು ದುರ್ಮರಣ
ಪ್ರಾತಿನಿಧಿಕ ಚಿತ್ರ
Follow us
ಪ್ರಶಾಂತ್​ ಬಿ.
| Updated By: ಗಂಗಾಧರ​ ಬ. ಸಾಬೋಜಿ

Updated on:Jul 29, 2023 | 11:03 PM

ಮಂಡ್ಯ, ಜುಲೈ 29: ನಾಲೆಗೆ ಕಾರು ಪಲ್ಟಿಯಾಗಿ ನಾಲ್ವರು ಮಹಿಳೆಯರು (women) ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಬಳಿ ದುರಂತ ಸಂಭವಿಸಿದೆ. ಕಾರಿನಲ್ಲಿ ತೆರಳುತ್ತಿದ್ದ ಐವರ ಪೈಕಿ ನಾಲ್ವರು ಮೃತ ಪಟ್ಟಿದ್ದು, ಚಾಲಕ ಪಾರಾಗಿದ್ದಾನೆ. ಗಾಮನಹಳ್ಳಿ ನಿವಾಸಿ ದೋಣಯ್ಯ ಎಂಬುವವರ ಪತ್ನಿ ಮಹದೇವಮ್ಮ, ಟಿ.ನರಸೀಪುರ ತಾಲೂಕಿನ ಗೊರವನಹಳ್ಳಿ ನಿವಾಸಿಗಳಾಗಿರುವ ಸಂಜನಾ, ಮಾದೇವಿ, ರೇಖಾ ಮೃತ ದುರ್ದೈವಿಗಳು.

ಗೊರವನಹಳ್ಳಿ ನಿವಾಸಿ ಚಾಲಕ ಮನೋಜ್‌ ಈಜಿ ದಡ ಸೇರಿದ್ದಾರೆ. ಗಾಮನಹಳ್ಳಿಯಿಂದ ದೊಡ್ಡಮುಲಗೂಡು ಗ್ರಾಮಕ್ಕೆ ತೆರಳುತ್ತಿದ್ದರು. ನಾಲೆ ಏರಿಯ ತಿರುವಿನಲ್ಲಿ ಕಬ್ಬಿಣದ ತಾತ್ಕಾಲಿಕ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದು ಬಳಿಕ ನಾಲೆಗೆ ಪಲ್ಟಿಯಾಗಿದೆ. ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: Gadag News: ಮೊಹರಂ ಹಬ್ಬ ಆಚರಣೆ ವೇಳೆ ಹೃದಯಾಘಾತದಿಂದ ಇಬ್ಬರು ಸಾವು

ಅಪರಿಚಿತ ಪಾದಚಾರಿಗೆ ಸೀ ಬರ್ಡ ಸಂಸ್ಥೆಯ ಬಸ್ ಡಿಕ್ಕಿ: ಸಾವು

ಕಾರವಾರ: ಹೊನ್ನಾವರ ತಾಲೂಕಿನ ಮೂರುಕಟ್ಟೆ ಗ್ರಾಮದಲ್ಲಿ ಖಾಸಗಿ ಬಸ್ ಡಿಕ್ಕಿಯಾಗಿ ಅಪರಿಚಿತ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೊನ್ನಾವರದಿಂದ ಸಾಗರ ಮಾರ್ಗವಾಗಿ ಬೆಂಗಳೂರಿಗೆ ಖಾಸಗಿ ಬಸ್ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿದ್ಯುತ್ ತಂತಿ ತಗುಲಿ ಕುರಿಗಾಹಿ ಸಾವು

ಶಿವಮೊಗ್ಗ: ವಿದ್ಯುತ್ ತಂತಿ ತಗುಲಿ ಕುರಿಗಾಯಿ ಸಾವನ್ನಪ್ಪಿರುವಂತಹ ಘಟನೆ ಶಿವಮೊಗ್ಗದ ಮಲ್ಲಿಕಾರ್ಜುನ ನಗರದಲ್ಲಿ ನಡೆದಿದೆ. ಚಟ್ನಹಳ್ಳಿ ನಿವಾಸಿ ಗಿರೀಶ್ (27) ಮೃತ ದುರ್ದೈವಿ.

ಇದನ್ನೂ ಓದಿ: Ramanagara News: ಜಡ್ಜ್ ಮನೆಯಲ್ಲೇ‌ ಕಳ್ಳತನ ಮಾಡಿದ್ದ ಖದೀಮನನ್ನು ಬಂಧಿಸಿದ ಪೊಲೀಸ್

ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಇಬ್ಬರ ಬಂಧನ

ಮಂಗಳೂರು: ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಇಬ್ಬರು ವ್ಯಕ್ತಿಗಳನ್ನ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಬಾಳೇಪುನಿ ನಿವಾಸಿ ಅಬ್ಬಾಸ್(61), ಕುತ್ತಾರು ನಿವಾಸಿ ಯಶವಂತ ಕುಮಾರ್(45) ಬಂಧಿತರು. 1 ಪಿಸ್ತೂಲ್, 2 ಮೊಬೈಲ್ ಮತ್ತು 2 ಬೈಕ್​ನ್ನು​ ಜಪ್ತಿ ಮಾಡಲಾಗಿದ್ದು, ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:57 pm, Sat, 29 July 23