ಮಂಡ್ಯ: ಕಂದಾಯ ಇಲಾಖೆ ನೌಕರರಿಂದ ಸೋಮವಾರ ಸಾಮೂಹಿಕ ರಜೆ ಹಾಕಿ ಧರಣಿ; ಕೆಆರ್ಎಸ್ ಪಕ್ಷದ ವಿರುದ್ಧ ಹೋರಾಟ
ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಹಿನ್ನೆಲೆ ಕೆಲಸಕ್ಕೆ ಗೈರಾಗಿ ಧರಣಿ ನಡೆಸುತ್ತೇವೆ. ನಾಳೆಯೊಳಗೆ ದೂರು ಹಿಂಪಡೆಯದಿದ್ದರೆ ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಟಿವಿ9ಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ತಮ್ಮಣ್ಣಗೌಡ ಮಾಹಿತಿ ನೀಡಿದ್ದಾರೆ.
ಮಂಡ್ಯ: ಜಿಲ್ಲೆಯಲ್ಲಿ ನಾಳೆ ಕಂದಾಯ ಇಲಾಖೆ ನೌಕರರು ಸಾಮೂಹಿಕ ರಜೆ ಹಾಕುವ ಮೂಲಕ ಹೋರಾಟ ನಡೆಸಲು ಮುಂದಾಗಿದ್ದಾರೆ. ಕೆಲಸಕ್ಕೆ ಹಾಜರಾಗದೆ ಕೆಆರ್ಎಸ್ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ನೌಕರರ ಮೇಲಿನ ದೂರು ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು. ಪಾಂಡವಪುರ ಉಪವಿಭಾಗಾಧಿಕಾರಿ, ತಹಶೀಲ್ದಾರ್ ಸೇರಿದಂತೆ, 15 ಸರ್ಕಾರಿ ನೌಕರರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೆಆರ್ಎಸ್ ಪಕ್ಷದ ಕಾರ್ಯಕರ್ತರ ದೂರಿನ ಮೇರೆಗೆ FIR ದಾಖಲು ಮಾಡಲಾಗಿದೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುವ ಬಗ್ಗೆ ತಿಳಿದುಬಂದಿದೆ.
ರವಿ ಕೃಷ್ಣಾರೆಡ್ಡಿ ನೇತೃತ್ವದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದವರು ಕಾರ್ಯಕರ್ತರ ಮೇಲೆ ಹಲ್ಲೆಗೈದಿದ್ದಾರೆಂದು ದೂರು ನೀಡಿದ್ದರು. ಹೀಗೆ ಕಾನೂನು ಬಾಹಿರವಾಗಿ ಸುಳ್ಳು ಮೊಕದ್ದಮೆ ದಾಖಲಿಸಲಾಗಿದೆ. ಕಚೇರಿಗೆ ನುಗ್ಗಿ KRS ಕಾರ್ಯಕರ್ತರು ದಾಂದಲೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ನೌಕರರಿಗೆ ರಕ್ಷಣೆ ನೀಡಬೇಕೆಂದು ಧರಣಿ ನಡೆಸಲಾಗುವ ಬಗ್ಗೆ ಹೇಳಲಾಗಿದೆ. ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಹಿನ್ನೆಲೆ ಕೆಲಸಕ್ಕೆ ಗೈರಾಗಿ ಧರಣಿ ನಡೆಸುತ್ತೇವೆ. ನಾಳೆಯೊಳಗೆ ದೂರು ಹಿಂಪಡೆಯದಿದ್ದರೆ ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಟಿವಿ9ಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ತಮ್ಮಣ್ಣಗೌಡ ಮಾಹಿತಿ ನೀಡಿದ್ದಾರೆ.
ಧಾರವಾಡ: ತಂಬೂರು ಕ್ರಾಸ್ನಲ್ಲಿ ಲಾರಿ ಡಿಕ್ಕಿ-ಬೈಕ್ ಸವಾರರಿಬ್ಬರ ಸಾವು
ಇಲ್ಲಿನ ತಂಬೂರು ಕ್ರಾಸ್ನಲ್ಲಿ ಲಾರಿ ಡಿಕ್ಕಿಯಾಗಿ ಬೈಕ್ ಸವಾರರು ಇಬ್ಬರು ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಂಬೂರು ಕ್ರಾಸ್ನಲ್ಲಿ ಘಟನೆ ನಡೆದಿದೆ. ಸವಾರರಾದ ನೂರ್ ಅಹ್ಮದ್, ಜಾವೀದ್ ಪಠಾಣ್ ಸಾವನ್ನಪ್ಪಿದ್ದಾರೆ. ಗೋವಾದಿಂದ ಧಾರವಾಡಕ್ಕೆ ಬರುತ್ತಿದ್ದಾಗ ಅಪಘಾತ ನಡೆದಿದೆ. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ತುಮಕೂರು: ಪೊಲೀಸ್ ಕ್ವಾರ್ಟರ್ಸ್ನಲ್ಲಿ ಕಾನ್ಸ್ಟೇಬಲ್ ಪತ್ನಿ ಆತ್ಮಹತ್ಯೆ
ಪೊಲೀಸ್ ಕ್ವಾರ್ಟರ್ಸ್ನಲ್ಲಿ ಕಾನ್ಸ್ಟೇಬಲ್ ಪತ್ನಿ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ನಡೆದಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಪತ್ನಿ ನೇಣಿಗೆ ಶರಣಾಗಿದ್ದಾರೆ. ಪಿಸಿ ಶಶಿಧರ್ ಪತ್ನಿ ಲಾವಣ್ಯ (21) ನೇಣಿಗೆ ಶರಣಾದವರು. ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಮಂಡ್ಯ ಲೋಕಸಭಾ ಉಪಚುನಾವಣೆಗೆ 30 ಕೋಟಿ ಖರ್ಚು ಮಾಡಿದ್ದೆ: ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡ ಆಡಿಯೋ ವೈರಲ್
ಇದನ್ನೂ ಓದಿ: ಮಂಡ್ಯ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರರಿಬ್ಬರ ದುರ್ಮರಣ