ಮಂಡ್ಯ: ತಹಶೀಲ್ದಾರ್(Tahsildar) ಅಮಾನತುಗೊಂಡಿದ್ದಕ್ಕೆ ಹಳೆ ಬೂದನೂರು ಗ್ರಾಮದಲ್ಲಿ ಗ್ರಾಮಸ್ಥರು ಸಿಹಿ ಹಂಚಿ ಸಂಭ್ರಮಿಸಿದ ಘಟನೆ ನಡೆದಿದೆ. ಕರ್ತವ್ಯ ಲೋಪ ಮತ್ತು ದುರ್ನಡತೆ ಆರೋಪದಡಿ ಮಂಡ್ಯ ತಹಶೀಲ್ದಾರ್ ಚಂದ್ರಶೇಖರ ಶಂಗಾಳಿ ಅವರನ್ನು ಕಂದಾಯ ಇಲಾಖೆ ಕಾರ್ಯದರ್ಶಿ ರಶ್ಮಿ ಅಮಾನತುಗೊಳಿಸಿದ್ದಾರೆ. ಹೀಗಾಗಿ ಬೂದನೂರು ಗ್ರಾಮಸ್ಥರು ಜನರಿಗೆಲ್ಲಾ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ತಹಶೀಲ್ದಾರ್ ಅಮಾನತು ಆಗಿದ್ದಕ್ಕೆ ಮಂಡ್ಯ ಡಿಸಿ ಅಶ್ವಥಿಗೆ ಗ್ರಾಮಸ್ಥರು ಜೈಕಾರ ಕೂಗಿದ್ದಾರೆ. ಗ್ರಾಮಸ್ಥರು ಸ್ವಂತ ಮನೆಗಾಗಿ ಹಲವು ಭಾರಿ ಹೋರಾಟ ನಡೆಸಿದ್ದರು. ಈ ವೇಳೆ ನಿವೇಶನ ಹಂಚಿಕೆ ವಿಚಾರದಲ್ಲಿ ತಹಶೀಲ್ದಾರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನ್ಯಾಯಕ್ಕಾಗಿ ಹೋರಾಟ ನಡೆಸಿದ್ದ ಗ್ರಾಮಸ್ಥರಿಗೆ ನ್ಯಾಯ ಕೊಡಿಸುವಲ್ಲಿ ತಹಶೀಲ್ದಾರ್ ಚಂದ್ರಶೇಖರ್ ಶಂಗಾಳಿ ವಿಫಲರಾಗಿದ್ದರು. ಗ್ರಾಮಸ್ಥರು ಹಲವು ಬಾರಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದ್ದರು. ಆದ್ರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಈ ಸಂಬಂಧ ಗ್ರಾಮಸ್ಥರು ತಹಶೀಲ್ದಾರ್ ವಿರುದ್ಧ ಮಂಡ್ಯ ಡಿಸಿಗೆ ದೂರು ನೀಡಿದ್ದರು. ಸದ್ಯ 13 ಕಾರಣ ನೀಡಿ ತಹಶೀಲ್ದಾರ್ನನ್ನು ಅಮಾನತುಗೊಳಿಸಲಾಗಿದೆ. ಹಳೆ ಬೂದನೂರು ಗ್ರಾಮಸ್ಥರು ಮಂಡ್ಯ ಡಿಸಿಗೆ ಅಭಿನಂದಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ: ಗಣೇಶ್ ಪುತ್ರಿ ಚಾರಿತ್ರ್ಯ ಬರ್ತ್ಡೇ ಪಾರ್ಟಿ ಫೋಟೋಗಳು; ಮುದ್ದು ಮಗಳಿಗೆ ‘ಗೋಲ್ಡನ್ ಸ್ಟಾರ್’ ವಿಶ್
ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ; ಸ್ಥಳದಲ್ಲೇ ಸಾವನ್ನಪ್ಪಿದ ಬೈಕ್ ಸವಾರರು